ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ….
ಕೆ ಕರ್ನಾರಹಟ್ಟಿ (ಮೇ.18) :
ಕೂಡ್ಲಿಗಿ ತಾಲೂಕಿನ ಹುರಳಿಹಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ ಕರ್ನಾರಹಟ್ಟಿ ಗ್ರಾಮದ ಹಳ್ಳದಲ್ಲಿ ಹೊಳೆತ್ತುವ ಕಾಮಗಾರಿ ನಡೆಯುತ್ತಿದ್ದು, ನರೇಗಾ ಕೂಲಿ ಕಾರ್ಮಿಕರಿಗೆ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗೆ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.

ಈ ವೇಳೆ ಸಹಾಯಕ ನಿರ್ದೇಶಕರು ವಿಜಯಕುಮಾರ್ ಮಾತನಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, ಕೂಲಿಕಾರರಿಗೆ ಕೆಲಸ ಒದಗಿಸಲಾಗುತ್ತಿದೆ, ಅಲ್ಲದೇ ಅವರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ, ಕಾಮಗಾರಿ ಸ್ಥಳಗಳಲ್ಲಿ ಆರೋಗ್ಯ ಶಿಬಿರಗಳನ್ನು ಅಯೋಜಿಸಿ, ಅವರಿಗೆ ರಕ್ತದ ಒತ್ತಡ, ಶುಗರ್, ರಕ್ತ ಪರೀಕ್ಷೆ, ಕಣ್ಣಿನ ಪರೀಕ್ಷೆ ಹಲ್ಲು ಪರೀಕ್ಷೆ ಇನ್ನು ಮುಂತಾದ ಪರೀಕ್ಷೆಗಳನ್ನು ಏಕ ಕಾಲಕ್ಕೆ ಎಲ್ಲಾ ಅರೋಗ್ಯ ಅಧಿಕಾರಿಗಳು, ಸಿಬ್ಬಂದಿಯವರೊಂದಿಗೆ ಸೌಲಭ್ಯ ಒದಗಿಸಲಾಗುತ್ತಿದೆ.

ಇಂತಹ ಉತ್ತಮವಾದ ಸೌಲಭ್ಯವನ್ನು ಎಲ್ಲಾ ಕೂಲಿಕಾರರು ತಪ್ಪದೇ ಪಡೆದುಕೊಳ್ಳಲು ಮನವಿ ಮಾಡಿದರು. ಇನ್ ಈ ಶಿಬಿರದಲ್ಲಿ 175 ಹೆಚ್ಚು ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕವಿತ, ಗ್ರಾಮ ಪಂಚಾಯಿತಿ ಅಧ್ಯಕ್ಷರು ತಿಪ್ಪೇರುದ್ರಪ್ಪ, ಡಾ ಜೀವಿತ ಸಜ್ಜನ್, ದಂತ ವೈದ್ಯರಾದ ಪಾರ್ವತಮ್ಮ, ಎನ್ ಸಿ ಡಿ ವೈದ್ಯರು ಕರಿಯಣ್ಣ, ಅಂಜಲಿ, ಆರ್ ಕೆ ಎಸ್ ಎಸ್ ಕೌನ್ಸಿಲರ್ ರವಿಚಂದ್ರ, ಕೌನ್ಸಿಲರ್ ಅಂಜಿನಪ್ಪ ಸೇರಿದಂತೆ ಗ್ರಾಮ ಪಂಚಾಯತಿಯ ಸಿಬ್ಬಂದಿಗಳು, ಆರೋಗ್ಯ ಸಿಬ್ಬಂದಿಗಳು, ಕೂಲಿಕಾರ್ಮಿಕರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು: ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ