ಹ್ಯಾಟ್ರಿಕ್ ಗೆಲುವು ಸಾಧಿಸಿದ ಶಾಸಕರಾದ ಯಶವಂತರಾಯಾಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಸಂಜು ಚವ್ಹಾಣ ಆಗ್ರಹ….
ಇಂಡಿ (ಮೇ.18) :
ಅಣ್ಣ ಬಸವಣ್ಣನವರ ತತ್ವಾದರ್ಶದ ತಳಹದಿ ಮೇಲೆ ಎಲ್ಲ ಸಮುದಾಯಗಳ ಪ್ರಿತಿ ವಿಶ್ವಾಸ ಘಳಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ನಮ್ಮ ನಾಯಕರಾದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕಾ ಅಧ್ಯಕ್ಷ ಸಂಜು ಚವ್ಹಾಣ ಆಗ್ರಹಿಸಿದ್ದಾರೆ.

ಗಡಿ ಭಾಗದ ಇಂಡಿ ತಾಲೂಕ ನಂಜುಂಡಪ್ಪ ವರದಿಯ ಪ್ರಕಾರ ಅತಿ ಹಿಂದುಳಿದ ಪ್ರದೇಶವಾಗಿದೆ. ಆದ್ದರಿಂದ ಈ ಭಾಗ ಪ್ರಗತಿ ಕಾಣಬೇಕಾದರೆ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು. ಅಲ್ಲದೆ ನಮ್ಮ ದೇಶ ಸ್ವಾತಂತ್ರ ದೊರಕಿದ ನಂತರ ಇಲ್ಲಿಯವರೆಗೂ ಇಂಡಿ ಮತಕ್ಷೇತ್ರಕ್ಕೆ ಸಚಿವ ಸ್ಥಾನ ದೊರಕದೆ ಇರುವುದು ನಮ್ಮ ದೌರ್ಭಾಗ್ಯ. ಆದರೆ ಹ್ಯಾಟ್ರಿಕ್ ಗೆಲುವು ಸಾಧಿಸಿದ ನಮ್ಮ ಶಾಸಕರಾದ ಯಶವಂತರಾಯಗೌಡರಿಗೆ ಸಚಿವ ಸ್ಥಾನ ನೀಡುವುದು ಸೂಕ್ತವಾಗಿದೆ.
ಈ ಭಾಗದ ಅಭಿವೃದ್ಧಿಗೆ ಕಾಂಗ್ರೆಸ್ ನಾಯಕರು ಕೈಜೋಡಿಸಬೇಕು ಜಿಲ್ಲೆಯ ಎಲ್ಲಾ ಶಾಸಕರು ಸಚಿವ ವಂಚಿತ ಪ್ರದೇಶವಾದ ಇಂಡಿ ಮತಕ್ಷೇತ್ರಕ್ಕೆ ಸಚಿವ ಸ್ಥಾನ ಸಿಗಲು ಸಹಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರ್. ವಿಜಯಪುರ