ಅಶೋಕ್ ಮನಗೂಳಿ ಗೆಲ್ಲಿಸಿದ ಮತದಾರರಿಗೆ ಧನ್ಯವಾದಗಳು …..
ಸಿಂದಗಿ (ಮೇ.18) :
ಸಿಂದಗಿ ವಿಧಾನಸಭಾ ಮತಕ್ಷೇತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮಾನ್ಯ ಅಶೋಕ್ ಮನಗೂಳಿ ಅವರನ್ನು ಪ್ರಚಂಡ ಬಹುಮತದಿಂದ ನೂತನ ಶಾಸಕರನ್ನಾಗಿ ಆಯ್ಕೆಮಾಡಿದ್ದಕ್ಕಾಗಿ ಸಿಂದಗಿ ವಿಧಾನಸಭಾ ಮತಕ್ಷೇತ್ರದ ಸಮಸ್ತ ಮತದಾರರಿಗೆ ಗೋಲಗೇರಿಯ ಯುವ ಮುಖಂಡರು,ತಳವಾರ ಸಮಾಜದ ಯುವ ಘಟಕದ ಅಧ್ಯಕ್ಷರಾದ ಮಡಿವಾಳಪ್ಪ. ನಾಯ್ಕೋಡಿ. ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಕಳೆದ ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದ ಅಶೋಕ್ ಮನಗೂಳಿಯವರು ಸೋಲಿಗೆ ಕುಂದದೆ ಕ್ಷೇತ್ರದ ಸರ್ವ ಧರ್ಮಿಯರ ಕುಂದು ಕೊರತೆ ಆಲಿಸುತ್ತ, ಬಡವರು, ಶೋಷಿತರು, ವಿಕಲಚೇತನರಾದಿಯಾಗಿ ಸರ್ವರ ಪ್ರೀತಿಪೂರ್ವಕ ಬೆಂಬಲ ಪಡೆದು ಕ್ಷೇತ್ರದ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರ ವಿಶ್ವಾಸಗಳಿಸುವ ಮೂಲಕ ಈ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ.ಕಾಂಗ್ರೆಸ್ ಪಕ್ಷದ ಆಡಳಿತ ಮೆಚ್ಚಿಕೊಂಡು ಅಶೋಕ್ ಮನಗೂಳಿಯವರು ಜನಪ್ರಿಯ ಶಾಸಕರಾಗಲೆಂದು ಆಶೀರ್ವದಿಸಿದ ಸಮಸ್ತ ಮತದಾರ ಬಾಂಧವರಿಗೆ, ಶ್ರಮಿಸಿದ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಈ ಮೂಲಕ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರ್. ವಿಜಯಪುರ