ಸಾರ್ವಜನಿಕರ ಆಸ್ಪತ್ರೆಗೆ ಫಸ್ಟ್ ಭೇಟಿ ನೀಡಿ ಆಸ್ಪತ್ರೆಯನ್ನ ಪರಿಶೀಲಿಸಿ ಸಭೆಗೆ ಹಾಜರಾದ ಡಾll ಎನ್. ಟಿ.ಶ್ರೀನಿವಾಸ್.
ಕೂಡ್ಲಿಗಿ ಮೇ.27

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾಂಗ್ರೆಸ್ ಪಕ್ಷದ ನೂತನ ಶಾಸಕರಾದಂತ ಡಾಕ್ಟರ್ ಶ್ರೀನಿವಾಸ್ ಎನ್. ಟಿ. ಇವರು ತಮ್ಮ ವಿಧಾನ ಸಭಾ ಕ್ಷೇತ್ರಕ್ಕೆ ಮೊಟ್ಟಮೊದಲನೆಯದಾಗಿ ತಮ್ಮ ತಂದೆಯವರಾದ ದಿವಂಗತ ಮಾನ್ಯ ಎನ್. ಟಿ. ಬೊಮ್ಮಣ್ಣನವರು ತಮ್ಮ ಶಾಸಕ ಸ್ಥಾನ ಆಯ್ಕೆಯಾದ ಸಮಯದಲ್ಲಿ ಕೂಡ್ಲಿಗಿ ತಾಲೂಕಿಗೆ ನೂರು ಬೆಡ್ಡಿನ ಆಸ್ಪತ್ರೆಯನ್ನು ನಿರ್ಮಿಸಿದ ಅವರ ನೆನಪಿಗಾಗಿ ಇಂದು ತಾಲೂಕಿನಾದ್ಯಂತ ಎನ್.ಟಿ. ಬೊಮ್ಮಣ್ಣನವರು ಕಟ್ಟಿಸಿದಂತಹ ಸರ್ಕಾರಿ ಆಸ್ಪತ್ರೆ ಇಂದು ಕೂಡ್ಲಿಗಿ ತಾಲೂಕಿನ ಜನರಿಗೆ ಜೀವವನ್ನು ಕಾಪಾಡುವಂತಹ ದೊಡ್ಡ ಅಭಿವೃದ್ಧಿಯ ಕೆಲಸ ಎಂದು ಎಷ್ಟೋ ಜನರು ಕೊಂಡಾಡುವುದು ಉಂಟು ಆದ್ದರಿಂದ 2023ನೇ ಚುನಾವಣೆಯ ನಿಮಿತ್ತವಾಗಿ ಬಹುಮತ ದಿಂದ ನೂತನ ಶಾಸಕರಾಗಿ ತಮ್ಮ ಹತ್ತಾರು ಇಲಾಖೆಗಳಲ್ಲಿ ಅವರು ಆರಿಸಿಕೊಂಡಿರುವ ವಿಶೇಷವಾದಂತ ಇಲಾಖೆಯ ಮೊದಲನೆಯ ಭೇಟಿ ಆಸ್ಪತ್ರೆಗೆ ಓ ಪೀಡಿಗಳನ್ನು ವೀಕ್ಷಿಸಿ ಓ ಪಿಡಿಯಲ್ಲಿ ಹೆರಿಗೆ ಆಗಿರುವಂತಹ ಹೆಣ್ಣು ಮಕ್ಕಳನ್ನು ಮಾತನಾಡಿಸುವುದರೊಂದಿಗೆ ಇಲಾಖೆ ಸಿಬ್ಬಂದಿಯವರು ಸಭೆ ಮಾಡಲು ಮೇಲೆ ಮಹಡಿಯ ಕೊಠಡಿಯಲ್ಲಿ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದು ನೂತನ ಶಾಸಕರು ಎಲ್ಲಾ ಆಸ್ಪತ್ರೆಯ ಡಾಕ್ಟರ್ ಗಳಿಗೆ ಕೂಡ್ಲಿಗಿ ತಾಲೂಕು ನನ್ನ ಸ್ಥಳೀಯ ತಾಲೂಕ್ಕಾಗಿದ್ದರಿಂದ ಇಲ್ಲಿ ಬರುವಂತಹ ಎಲ್ಲಾ ಸಾರ್ವಜನಿಕರಿಗೆ ಉತ್ತಮವಾದಂತಹ ಚಿಕಿತ್ಸೆಯನ್ನು ನೀಡಬೇಕು ಹಾಗೂ ಇಲ್ಲಿರುವಂತಹ ತೊಂದರೆಗಳನ್ನು ಹೇಳದೆ ನಿಮ್ಮ ಶಕ್ತಿ ಮೀರಿ ಬರುವಂತಹ ಪೇಷಂಟ್ ಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ತಿಳಿಸುವುದರೊಂದಿಗೆ ಹಾಗೆ ಖಡಕ್ ಆಗಿ ಅಧಿಕಾರಿಗಳಿಗೆ ತಮ್ಮ ಇಲಾಖೆಯಲ್ಲಿ ಸೇವೆ ಮಾಡುವಂತಹ ಯಾವುದೇ ಅಧಿಕಾರಿಗಳಾಗಿರಲಿ ಭ್ರಷ್ಟಾಚಾರದ ಬಗ್ಗೆ ಕೇಳಿ ಬಂದರೆ ನಾನು ಮಾತನಾಡುವ ಮಾತು ಸರಳವಾಗಿರುತ್ತೆ.

ಆದರೆ ತಪ್ಪುಗಳ ನಡೆದರೆ ನಾನು ತೆಗೆದುಕೊಳ್ಳುವ ನಿರ್ಧಾರವು ಬಹಳ ಕಠಿಣವಾಗಿರುತ್ತದೆ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು, ಹಾಗೆ ಈ ಸಂದರ್ಭದಲ್ಲಿ ಆಸ್ಪತ್ರೆಯು ಕೂಡ್ಲಿಗಿಯ ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು ಒಂದು ಮಾದರಿ ಆಸ್ಪತ್ರೆಯಾಗಿ ಮಾಡುವುದು ನನ್ನ ಉದ್ದೇಶವಾಗಿದೆ ಎಂದು ತಿಳಿಸಿದರು, ಆದ್ದರಿಂದ ತಮ್ಮ ಇಲಾಖೆಯ ಸಿಬ್ಬಂದಿ ವರ್ಗದವರು ಯಾವುದಕ್ಕೂ ಅಂಜದೆ ಅಳುಕದೆ ಎದುರದೆ ಜನರ ಸೇವೆ ಮಾಡಿ ಎಂದು ತಿಳಿಸಿದರು, ನಿಮ್ಮ ಎಲ್ಲಾ ಒಳ್ಳೆಯ ಕೆಲಸಕ್ಕೆ ನಾನು ನಿಮ್ಮ ಜೊತೆ ಸದಾ ಕಾಲ ಇರುತ್ತೇನೆ ಎಂದು ಧೈರ್ಯವಾಗಿ ಕೇಲಸ ಮಾಡಿ ಎಂದರು ,ಈ ಸಂದರ್ಭದಲ್ಲಿ ಡಾಕ್ಟರ್ ಪುಷ್ಪ. ಶ್ರೀನಿವಾಸ್ ಎನ್. ಟಿ. ಹಾಗೂ ಪೊಲೀಸ್ ಇಲಾಖೆಯ ಸಿಪಿಐ ವಸಂತ ಅಸುಧೆ ಹಾಗೂ ತಾಲೂಕು ಆಡಳಿತ ಅಧಿಕಾರಿಯಾದ ಡಾಕ್ಟರ್ ಪ್ರದೀಪ್ ಕುಮಾರ್ ಮತ್ತು ಡಾಕ್ಟರ್ ವಿನಯ್. ಹಾಗೂ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ