ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ – ಗಂಗಾಧರ್ ಕಂದಕೂರ.
ಬೈಲಹೊಂಗಲ ಮೇ.02

ಬೈಲಹೊಂಗಲ ತಾಲೂಕಾ ಆಡಳಿತ ಸ್ವೀಪ್ ಸಮೀತಿ ಆಶ್ರಯದಲ್ಲಿ ಮತದಾನ ಜಾಗೃತಿ ಬಗ್ಗೆ ಮ್ಯಾರಥಾನ್ ಓಟವನ್ನು ಹಮ್ಮಿಕೊಂಡು ಮಾತನಾಡಿದ ಸ್ವೀಪ್ ಸಮಿತಿ ಅಧ್ಯಕ್ಷರಾದ ಶ್ರೀ ಗಂಗಾಧರ್ ಕಂದಕುರ ರವರು ಹಸಿರು ನಿಶಾನೆ ತೋರಿಸಿ ಮಾತನಾಡಿ ಮ್ಯಾರಾಥಾನ ಓಟವು ಚನ್ನಮ್ಮ ಮಹಾದ್ವಾರ ದಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ ಮಾರ್ಗವಾಗಿ ಜವಳಿ ಕೂಟದ ಮೂಲಕ ಇಂದಿರಾ ನಗರದ ವರೆಗೆ ಆಯೋಜಿಸಲಾಗಿದ್ದು.

ನಗರದ ಜನರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ಕರೆ ನೀಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಅತೀ ಕಡಿಮೆ ಮತದಾನವಾದ ಉದ್ದೇಶದಿಂದ ಈ ಪ್ರಸ್ತುತ ಮ್ಯಾರಾಥಾನ್ ಓಟವನ್ನು ಹಮ್ಮಿಕೊಂಡಿದ್ದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು ಪ್ರತೀಶತ 100/ಮತ ಚಲಾಯಿಸುವಲ್ಲಿ ಶ್ರಮಿಸ ಬೇಕೆಂದರು.

ಪುರಸಭೆಯ ಮುಖ್ಯಧಿಕಾರಿ ವಿರೇಶ ಹಸಬಿ ಸಹಾಯಕ ನಿರ್ದೇಶಕ ವಿಜಯ ಪಾಟೀಲ, ಸಂಗಮೇಶ ಸವದತ್ತಿಮಠ ಪರಿವಿಕ್ಷಕರು ಎಸ್ ಜಿ ಹೊರಟ್ಟಿ ಎಸ್ ಬಿ ಸಂಗನಗೌಡರ್ ಎಸ್ ವ್ಹಿ ಹಿರೇಮಠ, ತಾ ಪ ಸಿಬ್ಬಂದಿ ಶಿಕ್ಷಣ ಇಲಾಖೆ ಸಿಬ್ಬಂದಿ ಮತ್ತು ಸಾರ್ವಜನಿಕರು ಕಾರ್ಯಕ್ರಮ ಯಶಸ್ವಿಗೊಳಿಸಿದರು ವಿಜೇತರಿಗೆ ಸ್ವೀಪ್ ಸಮಿತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ. ಶರ್ಮಾ ಬೆಳಗಾವಿ.