ಸಮಗ್ರ ನೀರಾವರಿ ಯೋಜನೆಯಿಂದ ಬರಡು ಭೂಮಿಯಿಂದ – ಭಾಗ್ಯದ ನಾಡಿಗೆ ಬದಲಾವಣೆ.
ಕೂಡ್ಲಿಗಿ ನ.11

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯ ಮಂತ್ರಿಯವ ರಿಂದ ಮೌಲ್ಯ ಮಾಪನ, ಸಮಗ್ರ ನೀರಾವರಿ ಯೋಜನೆ ಯಿಂದ ಬರಡು ಭೂಮಿಯಿಂದ ಭಾಗ್ಯದ ನಾಡಿಗೆ ಬದಲಾವಣೆ. ಜನರ ಸೇವೆಗೆ ನನ್ನ ಬದುಕು ಮೀಸಲು ಎಂದು ಶಾಸಕ ಡಾ, ಎನ್.ಟಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಗುಡೇಕೋಟೆ ರಸ್ತೆ ಶಾಸಕ ಡಾ, ಎನ್.ಟಿ ಶ್ರೀನಿವಾಸ್ ರವರ ಕಚೇರಿ ಮುಂಭಾಗದ ಮೈದಾನದಲ್ಲಿ ಭಾನುವಾರದಂದು 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಲೋಕಾರ್ಪಣೆ ಹಾಗೂ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಮತ್ತು ಮನೆಗಳ ಹಕ್ಕು ಪತ್ರ ವಿತರಣೆ ಹಾಗೂ ಪಪಂನ ದೇವರಾಜ್ ಅರಸು ವಸತಿ ಯೋಜನೆಯ ಮತ್ತು ಸಮಾಜ ಕಲ್ಯಾಣ ಇಲಾಖೆ ದೇವದಾಸಿ ಮಕ್ಕಳ ವಿವಾಹ ಪ್ರೋತ್ಸಾಹ. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜಕೀಯ ಭವಿಷ್ಯ ರೂಪಿಸಿದ ಈ ಕ್ಷೇತ್ರದ ಋಣ ತೀರಿಸಲು ಈಗಾಗಲೇ ಕ್ಷೇತ್ರದಲ್ಲಿ 900 ದಿನಗಳಲ್ಲಿ 600 ದಿನಗಳು ಇಲ್ಲಿನ ಜನಗಳ ಜತೆ ಕಳೆದಿದ್ದೇನೆ. ಕ್ಷೇತ್ರದ ಪ್ರತಿ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಅವರ ಕಷ್ಟ ಆಲಿಸಿದ್ದೇನೆ. ಇದರ ಫಲವಾಗಿ ಕ್ಷೇತ್ರದ ಜನತೆ ನನ್ನನ್ನು ಮನೆಯ ಸಹೋದರನಂತೆ ಭಾವಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪರಿಚಯಿಸಿ ತಿಳಿಸಿದರು. ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು, ಕೋಟೆ ಕೊತ್ತಲಗಳ ನಾಡಾಗಿರುವ ಈ ಕ್ಷೇತ್ರದಲ್ಲಿ ಇಲ್ಲಿನ ಬಡ ಜನರ ಬವಣೆ ಕಂಡು ಸುಮಾರು 1,250 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿಸಿ ಇವರಿಗೆ ಸೌಲಭ್ಯಗಳನ್ನು ಒದಗಿಸಿದ ಸಮಾಧಾನ ನನಗಿದೆ. ಈ ಅನುದಾನದಲ್ಲಿ ಆಸ್ಪತ್ರೆಯ ಉನ್ನತಿಕರಣ, ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ರೈತ ತರಬೇತಿ ಕೇಂದ್ರ, ಕೆಪಿಎಸ್ ಶಾಲೆ, ರಸ್ತೆಗಳ ಸುಧಾರಣೆ, ವಸತಿ ಸೇರಿದಂತೆ ಹಲವು ಅನುದಾನಗಳ ಅಡಗಿವೆ ಇದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರುಗಳಿಗೆ ಈ ಕ್ಷೇತ್ರದ ಜನರ ಪರವಾಗಿ ಕೃತಜ್ಞತೆ ಸಲ್ಲಿಸುವೆ ಎಂದು ಭಾವುಕವಾಗಿ ನುಡಿದರು.ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಮ್ಮ ಭಾಷಣದುದ್ದಕ್ಕೂ ರಾಜಕೀಯವಾಗಿ ಸಹಕಾರ ಮಾಡಿದ ಕಾರ್ಮಿಕ ಸಚಿವ ಸಂತೋಷ ಲಾಡ್, ಉಸ್ತುವಾರಿ ಸಚಿವ ಜಮೀರ್ ಅಹ್ಮದ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಎನ್. ವೈ.ಗೋಪಾಲ ಕೃಷ್ಣ, ಸಂಸದ ತುಕಾರಾಂ, ತಂದೆ ಎನ್.ಟಿ.ಬೊಮ್ಮಣ್ಣ ಹಾಗೂ ಕುಟುಂಬದವರನ್ನು ನೆನಪಿಸಿಕೊಂಡರು.

ಸತೀಶ್ ಜಾರಕಿಹೊಳಿ, ಅವರು ಮಾತನಾಡಿ ಈ ದಿನವನ್ನು ಕೂಡ್ಲಿಗಿಯ ಜನತೆ ಪಾಲಿಗೆ ಸುವರ್ಣಾಕ್ಷರದಿಂದ ಬರೆಯಬೇಕಿದೆ. ಅನೇಕ ಸರ್ಕಾರಗಳು ಬಂದರೂ ಇಷ್ಟೊಂದು ಅನುದಾನ ನೀಡಿ ಒಂದೇ ವೇದಿಕೆಯಲ್ಲಿ ಚಾಲನೆ ನೀಡುತ್ತಿರುವುದು ಇತಿಹಾಸ. ನನ್ನ ಇಲಾಖೆಯಿಂದ 100 ಕೋಟಿ ಅನುದಾನ ರಸ್ತೆಗಳ ಸುಧಾರಣೆಗೆ ನೀಡಿರುವೆ. ಸರ್ಕಾರದ ಕೆಲವೇ ಕೆಲವು ಶಾಸಕರುಗಳ ಪೈಕಿ ಎನ್.ಟಿ.ಶ್ರೀನಿವಾಸ್ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸುವವರ ಪರವಾಗಿ ಈ ಕ್ಷೇತ್ರದ ಜನತೆ ನಿಲ್ಲಬೇಕು, ಇವರಿಗೆ ರಾಜಕೀಯವಾಗಿ ಇನ್ನಷ್ಟು ಶಕ್ತಿ ನೀಡಬೇಕು. ಎಂದು ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವರು ಮಾತನಾಡಿದರು.
ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನಮ್ಮ ಕರ್ನಾಟಕ ಸರ್ಕಾರ ದೇಶಕ್ಕೆ ಮಾದರಿ ರೀತಿಯಲ್ಲಿ ಕೆಲಸ ಮಾಡುತ್ತದೆ ಇದನ್ನು ವಿರೋಧ ಪಕ್ಷಗಳು ಸಹಿಸುತ್ತಿಲ್ಲ ಎಂದರು. ಮತ್ತುವಿಜಯನಗರ ಜಿಲ್ಲೆಯ ಎಲ್ಲ ಶಾಸಕರು ಕಾಂಗ್ರೆಸ್ ಕಚೇರಿಗೆ ಉಚಿತ ನಿವೇಶನ ನೀಡಿದ್ದೀರಿ, ಇದು ಅತ್ಯಂತ ಸಂತೋಷದ ವಿಚಾರ. ಈ ವರದಿಯನ್ನು ಹೈಕಮಾಂಡ್ಗೆ ಕಳಿಸಲಾಗುವುದು. ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಾತನಾಡಿ ಶಾಸಕರು ಕ್ರಿಯಾಶೀಲ, ಸರಳ, ಸಜ್ಜನಿಕೆ ರಾಗಿದ್ದು ಅವರಿಗೆ ಅನುದಾನ ಹೇಗೆ ಪಡೆಯಬೇಕು ಎಂದು ಗೊತ್ತಿದ್ದು ನಾನು ಇದುವರೆಗೆ ಎರಡುವರೆ ವರ್ಷದಲ್ಲಿ 1257 ಕೋಟಿ ರೂ ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದೇನೆ. ಕ್ಷೇತ್ರದ ಜನರ ಆಶೀರ್ವಾದ ಅವರ ಮೇಲಿರಲಿ ಎಂದರು ಮತ್ತು ಎಲ್ಲ ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್‌ನವರು ನವರು ಹಣ ಖರ್ಚು ಮಾಡಿದ್ದಾರೆ. ಖಜಾನೆಯಲ್ಲಿ ಹಣ ಇಲ್ಲ ಎಂದು ಹೇಳುವ ಬಿಜೆಪಿಯವರು ಈ ಹಿಂದುಳಿದ ತಾಲೂಕಿಗೆ 1250 ಕೋಟಿ ರೂ. ಅನುದಾನದಿಂದ ಹೇಗೆ ಅಭಿವೃದ್ಧಿಯಾಗಿದೆ ಎಂದು ಅವರನ್ನೇ ಕೇಳಬೇಕು. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಾತನಾಡಿದರು.
ಶಾಸಕ ಡಾ, ಎನ್.ಟಿ. ಶ್ರೀನಿವಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಸ್ತುವಾರಿ ಸಚಿವ ಜಮೀರ್ ಅಹ್ಮದ ಖಾನ್, ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜು, ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ, ಶಿವಾನಂದ ಎಸ್. ಪಾಟೀಲ, ಸಂತೋಷ ಎಸ್. ಲಾಡ್, ಡಾ. ಎಂ.ಸಿ. ಸುಧಾಕರ್, ಎಸ್.ಆರ್. ಮೆಹರೋಜ್ ಖಾನ್, ಸಂಸದ ಈ ತುಕಾರಾಮ್ ಸೇರಿದಂತೆ ಹಲವಾರು ಗಣ್ಯರು ಮತ್ತು ಮುಖಂಡರು ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತಿಯಲ್ಲಿ ಇದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

