ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆದ ಸಿಳ್ಳೆಖ್ಯಾತ ಕಾರಿಗನೂರು ನಾರಾಯಣಪ್ಪ ಇವರಿಗೆ ವಿಜಯನಗರ ಜಿಲ್ಲೆಯ ಅಲೆ ಮಾರಿ ಅರೆ ಅಲೆಮಾರಿ ಸಂಘ ಪ್ರಗತಿಪರ ಚಿಂತಕರಿಂದ – ಗೌರವ ಸನ್ಮಾನ.
ಕಾರಿಗನೂರು ನ.01

ವಿಜಯನಗರ ಜಿಲ್ಲೆಯ ಕಾರಿಗನೂರು ಗ್ರಾಮದ ಹಿರಿಯ ಬಯಲಾಟ ಕಲಾವಿದ , ಸಿಳ್ಳೆಖ್ಯಾತ ಸಮುದಾಯದ ಹಿರಿಯ ಜೀವ ,ಕಾರಿಗನೂರು ನಾರಾಯಣಪ್ಪ ಇವರಿಗೆ 2024 ರ ರಾಜ್ಯೊತ್ಸವ ಪ್ರಸಸ್ತಿ ಲಭಿಸಿದೆ,, ಕರ್ನಾಟಕ ಸರ್ಕಾರ ಎಲೆ ಮರೆ ಕಾಯಿಯಂತ ಹಿರಿಯ ಸಾಧಕರನ್ನು ಗುರುತಿಸಿರುವುದು ಹೆಮ್ಮೆಯ ಸಂಗತಿ ಇಂದು ,ನಮ್ಮ ವಿಜಯನಗರ ಜಿಲ್ಲೆಯ ಪ್ರಗತಿಪರ ಚಿಂತಕರು ಹಾಗು ಹಂಪಿ ವಿಶ್ವ ವಿಧ್ಯಾಲಯ ಸಿಂಡಿಕೆಟ್ ಸದಸ್ಯರು ಆದ ಸೋಮಶೇಖರ್ ಬಣ್ಣದ ಮನೆ ಹಾಗು ಅಲೆ ಮಾರಿ ಸಮುದಾಯದ ರಾಜ್ಯ ಘಟಕ ಅದ್ಯಕ್ಷರು ಸಣ್ಣ ಮಾರೆಪ್ಪ, ಹಾಗು ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಎರಿಸ್ವಾಮಿ, ಹಾಗು ಹಗಲುವೇಷ ಕಲಾವಿದ ಜಂಬಣ್ಣ, ಹಾಗು ಕಾರಿಗನೂರು ಗ್ರಾಮದ ಹಿರಿಯ ಮುಖಂಡ ಬಾಲೆ ಸಾಬ್, ಹಾಗು ಗ್ರಾಮದ ವದ್ದಟ್ಟಿ ಸುಂಕಪ್ಪ ಹಾಗುವಿಜಯನಗರ ಜಿಲ್ಲಾ ಸಿಳ್ಳೆಖ್ಯಾತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಸಿದ್ದು ಬೆಳಗಲ್ ಹಾಗು ಹಿರಿಯರಾದ ಕೃಷ್ಣಮೂರ್ತಿ ಹಾಗು ಲೇಖಕಿ ಅಂಜಲಿ ಬೆಳಗಲ್ ,ಇವರು ರಾಜ್ಯೊತ್ಸವ ಪ್ರಶಸ್ತಿ ಪಡೆದ ನಾರಾಯಣಪ್ಪ ಸಿಳ್ಳೆಖ್ಯಾತ ಅವರನ್ನು ಇಂದು ಅವರ ನಿವಾಸದಲ್ಲಿ ಗೌರವಿಸಿದರು.ಹಾಗು ಈ ಸಂದರ್ಭದಲ್ಲಿ ಮಾನ್ಯ ಕರ್ನಾಟಕ ಘನ ಸರ್ಕಾರಕ್ಕೆ ಹಾಗು ವಿಜಯ ನಗರದ ಮಾನ್ಯ ಶಾಸಕರಿಗೂ ಮತ್ತು ಮಾನ್ಯ ಜಿಲ್ಲಾಧಿಕಾರಿಗಳಿಗು ಹಾಗು ಕನ್ನಡ ಸಂಸ್ಕೃತಿ ಇಲಾಖೆ ವಿಜಯನಗರ ಇವರಿಗೆ ಧನ್ಯವಾದಗಳು ಅರ್ಪಿಸಿದರು ಎಂದು ವರದಿ ಯಾಗಿರುತ್ತದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ