ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಪ್ರಕ್ರಿಯೆಗೆ ಚಾಲನೆ.
ತರೀಕೆರೆ ಆಗಷ್ಟ.23





ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ ಒದಗಿಸುವುದು ಮಣಿಪಾಲ್ ಆರೋಗ್ಯ ಕಾರ್ಡಿನ ಧ್ಯೇಯ ವಾಕ್ಯವಾಗಿದೆ ಎಂದು, ಕಸ್ತೂರಿಬಾ ಆಸ್ಪತ್ರೆ, ಮಣಿಪಾಲ್ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀ ಮೋಹನ್ ಶೆಟ್ಟಿ ಹೇಳಿದರು ಅವರು ತರೀಕೆರೆಯ ಪ್ರವಾಸಿ ಮಂದಿರದಲ್ಲಿ ಮಣಿಪಾಲ್ ಕಸ್ತೂರಿಬಾ ಆಸ್ಪತ್ರೆಯ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಈ ವರ್ಷ ನಮ್ಮ ಸಂಸ್ಥೆಯ ಸಂಸ್ಥಾಪಕ ನಾಯಕ ಡಾ. ಟಿ ಎಂ ಎ ಫೈ ಅವರ 125ನೇ ವರ್ಷದ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದು, ಅವರ ಉದಾತ್ತ ಕಾರ್ಯ ಸ್ಮರಣೆಗಾಗಿ ಭಾರತೀಯ ಆರೋಗ್ಯ ಸಂಸ್ಥೆಯನ್ನು ಸಮಾಜಕ್ಕೆ ಸುಲಭವಾಗಿ ದೊರೆಯುವಂತೆ ಮಾಡಲಾಗಿದೆ. ಆರೋಗ್ಯ ಸೇವೆ ಉಚಿತವಾಗಿ ನೀಡಲು ಸಾಧ್ಯವಾಗದಿದ್ದರೂ ಎಲ್ಲರಿಗೂ ರಿಯಾಯಿತಿ ದರದಲ್ಲಿ ಲಭ್ಯವಾಗಬೇಕು ಎಂಬುದು ಇದರ ಉದ್ದೇಶವಾಗಿದೆ.
ಮಣಿಪಾಲ್ ಆರೋಗ್ಯ ಕಾರ್ಡ್ ಒಂದು ವರ್ಷದ ಯೋಜನೆಯಲ್ಲಿ ಕಾರ್ಡಿನ ಸದಸ್ಯತ್ವವು 300 ರೂ ಆಗಿದ್ದು ಕೌಟುಂಬಿಕ ಕಾರ್ಡ್ ಗೆ 600 ರೂ, ಪೋಷಕರು 4 ಜನ ಸೇರಿ 750 ರೂ ಆಗಲಿದೆ, ಎರಡು ವರ್ಷದ ಯೋಜನೆಯಲ್ಲಿ ಕೌಟುಂಬಿಕ ಪ್ಲಾನ್ ಗೆ 950 ರೂ ಆಗಲಿದೆ ಎಂದು ತಿಳಿಸಿದರು. ಕಳೆದ 22 ವರ್ಷಗಳಿಂದ ಸಾಮಾಜಿಕ ಕಾಳಜಿಯೊಂದಿಗೆ ಲಕ್ಷಾಂತರ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲಾಗಿದ್ದು ಕರ್ನಾಟಕದ ಪ್ರತಿಯೊಬ್ಬರು www.manipalhelthcard.com ಗೆ ಲಾಗಿನ್ ಆಗಿ ತಿಳಿದುಕೊಳ್ಳಬಹುದು ಎಂದು ಮೋಹನ್ ಶೆಟ್ಟಿ ರವರು ತಿಳಿಸಿದರು. ಸಂಸ್ಥೆಯ ಪ್ರತಿನಿಧಿಯಾದ ಪ್ರವೀಣ್, ಅನಿಲ್, ಹಿರಿಯ ಪತ್ರಕರ್ತರಾದ ಸುರೇಶ್ ಚಂದ್ರ, ಅನಂತನಾಡಿಗ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ ಕೃಷ್ಣನಾಯಕ್, ಕೆ ನಾಗರಾಜ್, ವಿ ಶೇಖರ್, ಎನ್ ವೆಂಕಟೇಶ್, ಎಸ್ ಕೆ ಸ್ವಾಮಿ, ಮತ್ತು ಇತರರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು: ಎನ್.ವೆಂಕಟೇಶ್.ತರೀಕೆರೆ