ಲೋಕಸಭಾ ಚುನಾವಣೆ ಪ್ರಚಾರದ ನಿಮಿತ್ಯ ಬ.ಸಾಲವಾಡಗಿ ಕಾರ್ಯಕ್ರಮ ಆಯೋಜನೆ.
ಬಾ. ಸಾಲವಾಡಗಿ ಎಪ್ರಿಲ್.14

ನುಡಿದಂತೆ ನಡೆದ ಸರ್ಕಾರ ಭಾರತ ದೇಶದಲ್ಲಿ ಯಾವುದಾದ್ರು ಇದ್ರೆ ಅದು ನಮ್ಮ ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ.ಬರದ ನಾಡಿನಲ್ಲಿ ನೀರಿನ ಹೋಳೆಯನ್ನೆ ಹರಿಸಿದ ಆಧುನಿಕ ಭಗೀರಥ ಶ್ರೀ ಎಂ ಬಿ ಪಾಟೀಲ್ ಸಾಹೇಬ್ರು.ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಆದ ಎಂ.ಬಿ.ಪಾಟೀಲ್ ಅವರು ಇನ್ನೂ ನಮ್ಮ ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ನೀರಾವರಿ ಮಾಡ್ಬೇಕು ಎಂದು ಮಾಜಿ ಶಾಸಕ ಶ್ರೀ ಶರಣಪ್ಪ ಸುಣಗಾರ ಹೇಳಿದರು.ವಿದ್ಯುತ್ ಸ್ಥಾವರ ಸ್ಥಾಪನೆ, ಅನೇಕ ಕಾರ್ಖಾನೆಗಳು, ಅನೇಕ ಅಣೆಕಟ್ಟುಗಳನ್ನು ಕಟ್ಟಿದ್ದು ಕಾಂಗ್ರೆಸ್ ಸರ್ಕಾರ,ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಪಾಲಿಗಿದೆ, ಮತ್ತು 2014 ರಲ್ಲಿ ನರೇಂದ್ರ ಮೋದಿ ಅವ್ರು ಅಧಿಕಾರಕ್ಕೆ ಬಂದಿದ್ದು ಸುಳ್ಳಿನ ಕಂತೆಯ ಮೇಲೆ, ಕಪ್ಪು ಹಣ ತರ್ತಿವಿ ಪ್ರತಿಯೊಬ್ಬರ ಅಕೌಂಟಿಗೆ 15 ಲಕ್ಷ ಹಾಕ್ತೀವಿ ಅಂತ ಹೇಳಿದ್ರು, ಎಲ್ಲಿ ಆ 15 ಲಕ್ಷ ರೂಪಾಯಿ ಎಂದು ಹೇಳಿದರು. ಅನ್ನ ಭಾಗ್ಯ ಯೋಜನೆ ಕ್ಷೀರ ಭಾಗ್ಯ ಇನ್ನೂ ಮುಂತಾದ ನೂರಾರು ಯೋಜನೆಗಳನ್ನು ನಮ್ಮ ಮಾನ್ಯ ಸಿದ್ದರಾಮಯ್ಯ ಸರ್ಕಾರ ಮಾಡಿದೆ ಅದಕ್ಕಾಗಿ ಈ ಬಾರಿ ನಮ್ಮ ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊಫೆಸರ್ ರಾಜು ಆಲಗೂರ ಅವರಿಗೆ ಮತ ಕೊಟ್ಟು ಆರಿಸಿ ತರಬೇಕು ಎಂದು ಎಂ ಬಿ ಪಾಟೀಲರು ಹೇಳಿದರು.

ಈ ಸಂದರ್ಭದಲ್ಲಿ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರೊಫೆಸರ್ ರಾಜು ಆಲಗೂರ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್, ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಅಪ್ಪಾಜಿ ನಾಡಗೌಡ, ಡಾಕ್ಟರ್ ಪ್ರಭುಗೌಡ ಲಿಂಗದಳ್ಳಿ, ಆನಂದ ದೊಡಮನಿ, ಬಿ ಎಸ್ ಪಾಟೀಲ್ ಯಾಳಗಿ, ಸುಭಾಸ್ ಛಾಯಾಗೋಳ, ಶ್ರೀಮತಿ ಗೌರಮ್ಮ ಮುತ್ತತ್ತಿ, ಬಸೀರ್ ಶೇಟ್ ಬೇಪಾರಿ, ಸಂತೋಷ್ ದೊಡಮನಿ, ಇನ್ನೂ ಮುಂತಾದ ಗ್ರಾಮದ ಹಿರಿಯರು ಯುವಕರು ತಾಯಂದಿರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ ತಾಳಿಕೋಟೆ.