ನೇಕಾರ ಕುರುವಿನಶೆಟ್ಟಿ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎಸ್ ಪ್ಯಾಟಿಗೌಡ್ರ ಆಯ್ಕೆ.
ರೋಣ ಅ.22

ಸಮಾಜದ ಗುರು-ಹಿರಿಯರ ಸೂಚನೆಯಂತೆ ಎಲ್ಲಾ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಬೇಕು ಎಂದು ನೂತನ ತಾಲೂಕಾಧ್ಯಕ್ಷ ಕೆ.ಎಸ್ ಪ್ಯಾಟಿಗೌಡ್ರ ಹೇಳಿದರು.ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ನೇಕಾರ ಕುರಿವಿನಶೆಟ್ಟಿ ಸಂಘದ ವತಿಯಿಂದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು.ನೇಕಾರ ಕುರುವಿನಶೆಟ್ಟಿ ಸಂಘ ನೂತನ ಅಧ್ಯಕ್ಷರಾಗಿಕೆ.ಎಸ್ ಪ್ಯಾಟಿಗೌಡ್ರ, ಗೌರವ ಅಧ್ಯಕ್ಷರಾಗಿಡಾ, ಎಂ.ಬಿ.ಇಟಗಿ, ಉಪಾಧ್ಯಕ್ಷರಾಗಿ ಅಶೋಕ ಘಟ್ಟಿ ,ಸುಧಾಕರ ಗೊಟುರು, ಕಳಕಪ್ಪ ಸೂಡಿ, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ಹೂವಿನಹಾಳ,ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಕಾಂತ ಪೂರ್ತಗೇರಿ, ಈರಣ್ಣ ಪ್ಯಾಟಿ,ಸಹ ಕಾರ್ಯದರ್ಶಿಯಾಗಿಕಲ್ಲಪ್ಪ ರೋಣದ, ಬಸವರಾಜ ಸುರೇಬಾನಖಜಾಂಚಿಯಾಗಿ, ಶಿವಪುತ್ರಪ್ಪ ಸಂಗನಾಳ, ಸಹ ಖಜಾಂಚಿಯಾಗಿ ಪ್ರಲ್ಹಾದ ಮುಂಡಾಸದ, ಕಾನೂನು ಸಲಹೆಗಾರರಾಗಿ ಶಿವಬಸಪ್ಪ ದಂಡಿನ, ವಿರೂಪಾಕ್ಷಪ್ಪ ಶಾಂತಗೇರಿ, ನವೀನ ದೊಡ್ಡಣ್ಣವರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಬಸನಗೌಡ ಪ್ಯಾಟಿ ಗೌಡ್ರ,ಸಂಗಪ್ಪ ಹೂವಿನಹಳ್ಳಿ, ನಿರ್ದೇಶಕರಾಗಿ ಅಂದಾನಪ್ಪ ಹೊನ್ನುಂಗರದ, ಅಶೋಕ ಕಲ್ಗುಡಿ, ಶಂಕ್ರಪ್ಪ ಕಲ್ಲೂರ, ಶಿವರುದ್ರಪ್ಪ ಹರ್ತಿ, ಶಾಂತಪ್ಪ ರಾಮಶೆಟ್ಟಿ ಅಡಿವೆಪ್ಪ ಜುಂಜಿ, ಸೋಮಪ್ಪ ಕಿತ್ತೂರು, ರಾಚಪ್ಪ ಜಾಡರ, ವೀರಭದ್ರಪ್ಪ ಯತ್ನಾಳ, ಪ್ರಕಾಶ ಮಗುಂಡನ್ನವರ, ಪ್ರವೀಣ ಬೀದರಳ್ಳಿ ಅವರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ವೀರೇಶ ಸಂಗಳದ, ಸಂಗಪ್ಪ ಸೂಡಿ ಸೇರಿದಂತೆ ಕುರುಹಿನಶೆಟ್ಟಿ ಸಮಾಜದ ಗುರು ಹಿರಿಯರು, ಯುವಕರು ಹಾಜರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ. ಎಫ್.ಗೋಗೇರಿ.ತೋಟಗುಂಟಿ.ಗದಗ