ಮಹರ್ಷಿ ವಾಲ್ಮೀಕಿ ಮನುಕುಲದ ತತ್ವಜ್ಞಾನಿ – ಮಿಥುನ.ಜಿ ಪಾಟೀಲ.

ರೋಣ ಅ.22

ಗದಗ ಜಿಲ್ಲೆಯ ರೋಣ ತಾಲೂಕಿನ ರೋಣ ಪಟ್ಟಣದಲ್ಲಿ ಗುರು ಭವನದಲ್ಲಿ ಇಂದು ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ. ಕಲ್ಪನೆಗೆ ನಿಲುಕದ ರಾಮಾಯಣ ಕೃತಿಯನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಅವರು ಮನುಕುಲದ ದಾರ್ಶನಿಕರಾಗಿದ್ದು, ಅವರ ಆದರ್ಶಗಳನ್ನು ಯುವ ಸಮೂಹ ಅಳವಡಿಸಿ ಕೊಳ್ಳಬೇಕು ಎಂದು ಮಾಜಿ ಪುರಸಭೆ ಉಪಾಧ್ಯಕ್ಷ ಮಿಥುನ.ಜಿಪಾಟೀಲ ಹೇಳಿದರು. ಪಟ್ಟಣದ ಗುರು ಭವನದಲ್ಲಿ ಸೋಮವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಸರ್ಕಾರಗಳು ಆಚರಣೆಗೆ ತಂದಿರುವ ಜಯಂತಿಗಳು ಕೇವಲ ಆಚರಣೆಗೆ ಸೀಮಿತ ವಾಗಬಾರದು. ಜಯಂತಿ ಆಚರಣೆಯ ಹಿಂದಿರುವ ಮಹತ್ವ ತಿಳಿದು ಜಯಂತಿ ಆಚರಣೆಗೆ ನಾವೆಲ್ಲರೂ ಮುಂದಾಗ ಬೇಕಿದೆ. ಅದರಲ್ಲೂ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಕಾವ್ಯ ಕಲ್ಪನೆಗೂ ನಿಲುಕದ್ದು, ದೇಶಕ್ಕಷ್ಟೇ ಅಲ್ಲದೆ ವಿಶ್ವಕ್ಕೇ ಮಾದರಿ ಯಾಗುವಂತಹ ಕಾವ್ಯವಾಗಿದೆ. ವಾಲ್ಮೀಕಿ ಅವರ ವಿಚಾರ ಧಾರೆಗಳು ಇಂದಿನ ಯುವ ಪಿಳೀಗಿಗೆ ಆದರ್ಶವಾಗಬೇಕು ಎಂದರು. ರೋಣ ತಾಲೂಕ ವಾಲ್ಮೀಕಿ ಸಮಾಜದ ಅಧ್ಯಕ್ಷ ಬಸವರಾಜ ತಳವಾರ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಕಾವ್ಯ ಸರ್ವ ಶ್ರೇಷ್ಠವಾದದ್ದು. ಪೋಷಕರು ಮಕ್ಕಳಿಗೆ ಇತಿಹಾಸ ಹಾಗೂ ಪರಂಪರೆಯನ್ನು ತಿಳಿಸುವುದರ ಜೊತೆಗೆ ಮಾನವ ಕುಲದ ಒಳಿತಿಗಾಗಿ ನೀಡಿದ ವಿಚಾರಗಳನ್ನು ಅಳವಡಿಸಿ ಕೊಳ್ಳಲು ನೀತಿಪಾಠದ ಅವಶ್ಯಕತೆಯಿದೆ.

ಹೀಗಾಗಿ ಪಾಲಕರು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಉತ್ತಮ ವ್ಯಕ್ತಿಗಳನ್ನಾಗಿ ನಿರ್ಮಿಸಿ ದೇಶಕ್ಕೆ ಕೊಡುಗೆ ನೀಡಬೇಕಿದೆ ಎಂದರು. ಪೂಜ್ಯಶ್ರೀ ರಾಜ ಅಚ್ಚುತ ನಾಯಕ ವಾಲ್ಮೀಕಿ ಸಮಾಜದ ಗುರುಗಳು ಹುಲಿ ಹೈದರ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ರೋಣ ತಹಸೀಲ್ದಾರ್ ನಾಗರಾಜ.ಕೆ. ಮಂಜುಳಾ ಹಕಾರಿ ಡಾ, ಶರಣು ಮುಷ್ಟಿಗೇರಿ ಉಪನ್ಯಾಸಕರು ಕಾರ್ಯನಿರ್ವಾಹಕ ಅಧಿಕಾರಿ ಗೀತಾ ಆಲೂರ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ರುದ್ರಪ್ಪ ಹುರುಳಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಆರ್ ನಾಯಕ ಅಕ್ಷರ ದಾಸೋಹ ಅಧಿಕಾರಿ ಬಲವಂತ ನಾಯಕ ಮಂಜುಳಾ ಹುಲ್ಲನ್ನವರ ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಬಸವಂತಪ್ಪ ತಳವಾರ ಹನುಮಂತಪ್ಪ ಹಟ್ಟಿಮಣಿ ಸಂತೋಷ ಕಡಿವಾಲ ಪುರಸಭೆ ಸದಸ್ಯರು ಸಂಜೆಯ ದೊಡ್ಡ ಮನಿ ಶೇಖಪ್ಪ ಜುಟ್ಲ ಪಿ.ಎಚ್ ಕಡಿವಾಲ ಸುನಂದಾ ಕಣಿ ಕಡಿವಾಲ ಕುಮಾರ ಗೌಡಣವರ ಶ್ರೀಧರ ನಾಯಕ ಲಕ್ಷ್ಮಣ್ ಗೌಡನವರ ವಾಲ್ಮೀಕಿ ಸಮಾಜದ ಮುಖಂಡರು ಯುವಕರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ. ಎಫ್.ಗೋಗೇರಿ.ತೋಟಗುಂಟಿ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button