“ಹೊಟ್ಟೆ ಪಾಡು ಆನ್ಲೈನ್ ತ್ಯಜಿಸಿ ಸ್ಥಳೀಯವಾಗಿ ಖರೀದಿಸಿ”…..

ಹಲವರಿಗೆ ಹಲವು ರೀತಿ ಹೊಟ್ಟೆಯ ಪಾಡು
ಬೆವರು ಸುರಿಸಿ ದುಡಿದರಷ್ಟೇ ಬೆಚ್ಚಗಿನ ಗೂಡು
ನಿತ್ಯವೂ ಚಿಂತೆಯಲ್ಲಿ ಬಡಜನರ ಹಸಿದ
ಹಾಡು
ನಾಗರೀಕತೆಗಿಂತ ಸುರಕ್ಷಿತ ಆ ಹಸಿರು ಕಾಡು!
ಉಗುರಿನಿಂದ ಮಸ್ತಕಕ್ಕೆ ಎಲ್ಲಾ ಕೂಡ
ಆಡಂಬರ
ಹಲವರಿಗೆ ಊಟ ಬಟ್ಟೆ ಇಲ್ಲದೆಯೇ ದಿಗಂಬರ
ಚಿಂತೆ ಹೊತ್ತ ಕಣ್ಣುಗಳು ದಿಟ್ಟಿಸುವವು ಅಂಬರ
ಉಂಡುಟ್ಟು ಉಳಿದವರು ಇವರ ಕೂಡ
ಉಳಿಸುವಿರ!
ವರ್ಷಕ್ಕೊಮ್ಮೆ ಬರುವುದು ಬೆಳಕಿನ
ದೀಪಾವಳಿ
ಮಣ್ಣಹಣತೆ ಮಣಭಾರಕೆ ವ್ಯಾಪಾರಿಗಳು
ದಿವಾಳಿ
ಎಲ್ಲ ಕಡೆಯೂ ರಂಗು ಬಿರಂಗಿಗಳದೇ ಹಾವಳಿ
ಎಂದು ಮರೆಯಾಗುವುದು ಸ್ವಂತಿಕೆ ಇರದ
ಚಾಳಿ!
ನಮ್ಮ ನೆಲದ ಸದಾಚಾರ ಮಣ್ಣಿನ ಚಂದ
ಹಣತೆ
ಅದರ ನೈಜ ಬೆಳಕಲಿದೆ ಸಾರ್ಥಕತೆಯ ನಮ್ಮ
ಘನತೆ
ಥಳಕು ಬಳುಕು ವ್ಯಾಮೋಹಕೆ
ಮರುಳಾಗುವರು ಜನತೆ
ಸರಳವಾಗಿ ಇದ್ದರೂ ಸಂಭ್ರಮವಿರಲಿ ನಮ್ಮ
ಜೊತೆಗೆ!
ಹಲವರು ನಂಬವರು ಕಾಯಕವೇ ನಿಜದ
ಕೈಲಾಸ
ದುಡಿಯುವವರ ಬೆವರೇ ನಿಜವಾದ ದೇವ
ಆವಾಸ
ಕಷ್ಟದಲ್ಲಿ ಬದುಕುವವಗೆ ಆಗದಿರಲಿ ಎಂದೂ
ಆಭಾಸ
ನಮ್ಮ ನೆಲದ ಕೈ ಕಸುಬುಗಳು ನಶಿಸದಿರಲಿ
ಆಗಿ ನಾಶ!
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಟಿ.ಎಚ್.ಎಂ ರಾಜಕುಮಾರ್.ಕಂಪ್ಲಿ.ಬಳ್ಳಾರಿ