16 ನೇ ವಾರ್ಡಿನಲ್ಲಿ ಗಣೇಶ್ ಹಬ್ಬದ ಪ್ರಯುಕ್ತ ರಂಗೋಲಿ ಸ್ಪರ್ಧೆ – ಕೆ. ಈಶಪ್ಪ.
ಕೂಡ್ಲಿಗಿ ಸಪ್ಟೆಂಬರ್.20
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ 16ನೇ ವಾರ್ಡಿನಲ್ಲಿ ರಾಜೀವ್ ಗಾಂಧಿ ನಗರದ 9ನೇ ವರ್ಷದ ಪ್ರಯುಕ್ತವಾಗಿ ಶ್ರೀ ವಿನಾಯಕ ಸೇವಾ ಸಮಿತಿಯಿಂದ ಬೀಚೀ ರಂಗ ಮಂದಿರದಲ್ಲಿ ಶ್ರೀ ಗಣೇಶ್ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿದ್ದು ಈ ವಾರ್ಡಿನ ಪಟ್ಟಣ ಪಂಚಾಯ್ತಿಯ ಸದಸ್ಯರಾದ ಕೆ. ಈಶಪ್ಪ ಸಹ ವಿನಾಯಕ ಸೇವಾ ಸಮಿತಿಯರಿಗೆ ಸಹಾಯ ಹಸ್ತ ಮಾಡುತ್ತ ಬಂದಿರುತ್ತಾರೆ. ಎಂದು ಯುವಕರು ತಿಳಿಸಿರುತ್ತಾರೆ, ಇಲ್ಲಿ ಪ್ರತಿ ವರ್ಷ ಪ್ರತ್ಯೇಕವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದು ಈ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ಮಹಿಳಾ ಮಣಿಗಳು ಭಾಗವಹಿಸಿದ್ದು ವಿವಿಧ ಬಗೆಯ ರಂಗೋಲಿ ಚಿತ್ರಗಳು ಬಿಡಿಸಿ ಉತ್ತಮವಾಗಿ ರಂಗೋಲಿ ಹಾಕಿದ ಮಹಿಳೆರಿಗೆ ಬಹುಮಾನ ನೀಡುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಈ ಸ್ಪರ್ಧೆಯಾ ಪ್ರಾಯೋಜಕರು ಸಹ ಕೆ. ಈಶಪ್ಪ ಅವರ ಧರ್ಮ ಪತ್ನಿಯಾದ ಕೆ. ಗೌರಮ್ಮ ರವರು ರಂಗೋಲಿ ಚಿತ್ರಗಳನ್ನು ವೀಕ್ಷಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಪರ್ಧಾಳುಗಳನ್ನು ಆಯ್ಕೆ ಮಾಡಿ ಬಹುಮಾನ ವಿತರಣೆ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ನೂರಾರು ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿದ್ದರು ತುಂಬಾ ಸಂತೋಷದಿಂದ ಭಾಗವಹಿಸಿ ಬಣ್ಣಬಣ್ಣದ ರಂಗೋಲಿ ಹಾಕಿ ಖುಷಿ ಪಟ್ಟರು .ಹಾಗೂ ರಂಗೋಲಿ ಸ್ಪರ್ಧೆಯನ್ನು ಬೀಚೀ ರಂಗಮಂದಿರ ಮುಂಭಾಗದಲ್ಲಿ ಏರ್ಪಡಿಸಲಾಗಿತ್ತು. ವೀಕ್ಷಣೆ ಮಾಡಲು ಸ್ಥಳೀಯರು ಮಹಿಳೆಯರು ಹಾಗೂ ಯುವಕರು ನೆರೆದ್ದಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ