ದಲಿತ ಮಹಿಳೆಯ ಮೇಲೆ ಹಲ್ಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಇಂದು ಇಂಡಿಯಲ್ಲಿ ದಲಿತ ಸಂಘಟನೆಯಿಂದ ಪ್ರತಿಭಟನೆ.
ಇಂಡಿ ಸಪ್ಟೆಂಬರ್.20

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಗುಂದವಾನ ಗ್ರಾಮದ ದಲಿತ ಮಹಿಳೆ ಶೋಭಾ ಬನಸೋಡೆ ಇವರ ಮೇಲೆ ಅದೇ ಗ್ರಾಮದ ಅನೇಕ ಸವರ್ಣೀಯರು ಕೂಡಿಕೊಂಡು ದಿನಾಂಕ 05-09-2023 ರಂದು ಮಹಿಳೆಗೆ ಗಂಭೀರವಾಗಿ ಗಾಯಗೊಳಿಸಿ ಹಲ್ಯೆ ಮಾಡಿರುವ ಘಟನೆಯು ಗುಂದವಾನ ಗ್ರಾಮದಲ್ಲಿ ನಡೆದಿತ್ತು.ಹಲ್ಲೆಗೊಳಗಾದ ಮಹಿಳೆ ಆರೋಪಿತರನ್ನು ಬಂಧಿಸುವಂತೆ ಝಳಕಿ ಪೋಲಿಸ ಠಾಣೆಯಲ್ಲಿ ದಿನಾಂಕ 6-9-2023 ರಂದು ದೂರು ದಾಖಲಿಸಿದರು .ಆದರೆ ಪೋಲಿಸರು ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬ ಮಾಡುತ್ತಿದ್ದಾರೆ . ಇದನ್ನು ಖಂಡಿಸಿ ‘ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿಯಿಂದ ಇಂಡಿ ಪಟ್ಟಣದ ವಿವಿಧ ವೃತ್ತಿಗಳಲ್ಲಿ ಪ್ರತಿಭಟನಾಕಾರರು ಆರೋಪಿಗಳನ್ನು ಬಂಧಿಸುವಂತೆ ಘೋಷಣೆ ಕೂಗೂತ್ತಾ ಮಿನಿ ವಿಧಾನಸೌಧ ಕ್ಕೆ ಆಗಮಿಸಿ ಮಾನ್ಯ ಕಂದಾಯ ಉಪವಿಭಾಗಾಧಿಕಾರಿಗಳು ಇಂಡಿ ಇವರ ಮುಖಾಂತರ “ಮಾನ್ಯ ಗೃಹ ಸಚಿವರು ಕನಾ೯ಟಕ ಸರಕಾರ ಬೆಂಗಳೂರು ಇವರಿಗೆ ಮನವಿಯನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಧಮ೯ರಾಜ ಎಸ್ ಸಾಲೋಟಗಿ ಇವರು ಮಾತನಾಡಿ-ದೇಶದಲ್ಲಿ ಪದೆ- ಪದೆ ದಲಿತರ ಮೇಲೆ ಇತ್ತೀಚಿನ ದಿನಮಾನಗಳಲ್ಲಿ ದೌರ್ಜನ್ಯಗಳು,ನಿಂದಣೆಗಳು, ಹೆಚ್ಚಾಗುತ್ತಿವೆ,ಇದನ್ನು ಆಗದಂತೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು.ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ಆರಕ್ಷಕರು ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.ಈ ಪ್ರತಿಭಟನೆಯಲ್ಲಿ ದಲಿತ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಇತರರು ಭಾಗವಹಿಸಿದ್ದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ
.