ತನುಶ್ರೀ ಸಾಹಿತ್ಯ ವೇದಿಕೆ ವತಿಯಿಂದ ರಾಜ್ಯ ಮಟ್ಟದ 13 ನೇ. ಆನ್ಲೈನ್ ಕವಿ ಗೋಷ್ಠಿ ಕಾರ್ಯಕ್ರಮ.

ಚಿತ್ರದುರ್ಗ ಆ.1

ತನುಶ್ರೀ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ, ಚಿತ್ರದುರ್ಗ ಇವರ ವತಿಯಿಂದ ದಿನಾಂಕ : 15/08/2024 ರಂದು ಆಗಸ್ಟ್ 15 ರ 78 ನೇಯ ಸ್ವಾತಂತ್ರ್ಯಾ ದಿನಾಚರಣೆ ಪ್ರಯುಕ್ತ ರಾಜ್ಯ ಮಟ್ಟದ ಆನ್ಲೈನ್ ಕವಿ ಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವು ರಾಷ್ಟ್ರ ಗೀತೆಯೊಂದಿಗೆ ಆರಂಭವಾಯಿತು ನಂತರ ತನುಶ್ರೀ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ಚಿತ್ರದುರ್ಗ, ಇದರ ರಾಜ್ಯಾಧ್ಯಕ್ಷರು ಹಾಗೂ ಪ್ರಕಾಶಕರು ಆದ ಶ್ರೀಯುತ ರಾಜು.ಎಸ್ ಕವಿ ಸೋಲೇನಹಳ್ಳಿ ರವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ನಾವು ಇಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ ಎಂದರೆ ಇದರ ಹಿಂದೆ ಅದೆಷ್ಟು ಸ್ವಾತಂತ್ರ್ಯ ಹೋರಾಟಗಾರರ ಜೀವಗಳ ಶ್ರಮ ಮತ್ತು ಅವರ ಬೆವರ ಹನಿಗಳು ಇದಕ್ಕೆ ಸಾಕ್ಷಿ ಎಂದರೆ ತಪ್ಪಾಗಲಾರದು, ಇಂದಿನ ಯುವಕರು ಕಲೆ ಸಾಹಿತ್ಯ ಸಂಸ್ಕೃತಿ ನಮ್ಮ ಕನ್ನಡ ನಾಡು ನುಡಿ, ದೇಶ ಪ್ರೇಮವನ್ನು ಬೆಳಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ತುಮಕೂರಿನ ವಿಚಾರ ಮಂಟಪ ವೇದಿಕೆಯ ಅಧ್ಯಕ್ಷರಾದ ಶ್ರೀಯುತ ವರುಣ್ ರಾಜ್ ರವರು ಮಾತನಾಡಿ ನಮಗೆ ಸ್ವಾತಂತ್ರ್ಯ ಸಿಕ್ಕಿರುವುದು ನೆಪ ಮಾತ್ರ ಅಷ್ಟೇ ಇನ್ನೂ ನಾವೆಲ್ಲರೂ ಪೂರ್ಣ ಸ್ವತಂತ್ರರಲ್ಲ ಯಾಕೆಂದರೆ ದೇಶದಲ್ಲಿ ನಡೆಯುತ್ತಿರುವ ಕೊಲೆ ಸುಲಿಗೆ, ದರೋಡೆ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಅತ್ಯಾಚಾರಗಳು ದಿನ ನಿತ್ಯ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ನೋಡುತ್ತಿದ್ದರೆ ನಾವೆಲ್ಲಾ ಸ್ವತಂತ್ರರೇ ಎಂದು ಕಳವಳ ವ್ಯಕ್ತಪಡಿಸಿದರು.ನಂತರ ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಳ್ಳಕೆರೆಯ ಯುವ ಕವಯಿತ್ರಿ ಹಾಗೂ ವಿಮರ್ಶಕರು ಆದ ಶ್ರೀಮತಿ ಶಬ್ರಿನಾ ಮಹಮದ್ ಅಲಿ ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಯುವ ಜನತೆ ಸಾಹಿತ್ಯ ಸಂಸ್ಕೃತಿ ಸ್ರೀಯರಿಗೆ ಗೌರವವನ್ನು ನೀಡುವುದು ಮತ್ತು ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿ ಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗ ಬೇಕು, ನಮಗೆ ಸ್ವಾತಂತ್ರ್ಯ ಎಷ್ಟು ಮುಖ್ಯ ಎಂಬುದು ಒಂದು ಪಕ್ಷಿಯ ಕಥೆಯೊಂದಿಗೆ ವಿವರಿಸಿದರು ಇದು ಕೇಳುಗರ ಮನ ಕಲುಕುವಂತಿತ್ತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚಿತ್ರದುರ್ಗದ ವಿಮರ್ಶಕರು ಮತ್ತು ಸಮಾಜ ಮುಖಿ ಚಿಂತಕರು ಆದ ಶ್ರೀಯುತ ಮಲ್ಲಿಕಾರ್ಜುನ್ ತಾಳ್ಯ ರವರು ಮಾತನಾಡಿ ಇತ್ತೀಚಿನ ಯುವ ಕವಿಗಳಲ್ಲಿ ಕವಿತೆಗಳನ್ನು ಬರೆಯುವಾಗ ತನ್ನದೇ ಆದ ಸತ್ವ ಮತ್ತು ಸಂಸ್ಕೃತಿ ನಮ್ಮ ಕನ್ನಡ ನಾಡು ನುಡಿ ಭಾಷೆ ಸಾಹಿತ್ಯ ಜಾನಪದಕ್ಕೆ ಸಾಹಿತ್ಯಗಳಿಗೆ ಹೆಚ್ಚೆಚ್ಚು ಆದ್ಯತೆ ನೀಡಬೇಕು.ಸುಮಾರು ಐವತ್ತು ಕವಿಗಳ ಸ್ವ ರಚಿತ ಕವನ ವಾಚನ ಗಳನ್ನು ಆಲಿಸಿ ವಿಮರ್ಶಿಸಿ ಅವರ ಸರಿ ತಪ್ಪುಗಳನ್ನು ತಿದ್ದಿ ತೀಡಿ ಇನ್ನೂ ಯಾವ ರೀತಿಯ ಕವನಗಳನ್ನು ರಚಿಸ ಬೇಕು ಮತ್ತು ವಾಚಿಸ ಬೇಕು ಎಂಬುದರ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಕೊಟ್ಟರು.ಈ ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಐವತ್ತುಕ್ಕೂ ಹೆಚ್ಚು ಕವಿಗಳು ಹಾಗೂ ಕವಯಿತ್ರಿಯರು ತಮ್ಮ ಸ್ವ ರಚಿತ ಕವನಗಳನ್ನು ವಾಚಿಸಿದರು,ಚಿದಾನಂದ ಮೂರ್ತಿ.ಎಂ ನೆರ್ಲಹಳ್ಳಿ ರವರು ಸ್ವಾಗತಿಸಿದರು, ಸಾಹಿತಿಗಳು ಆದ ಶ್ರೀಮತಿ ಸಾವಿತ್ರಿ.ಕೆ.ಬಿ ರವರು ಕಾರ್ಯಕ್ರಮ ನಿರೂಪಿಸಿದರು, ದಲಿತ ಸಾಹಿತ್ಯ ಪರಿಷತ್, ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧ್ಯಕ್ಷರು ಆದ ಶ್ರೀಯುತ ಶಿವಮೂರ್ತಿ.ಟಿ.ಕೋಡಿಹಳ್ಳಿ ವಂದಿಸಿದರು. ಒಟ್ಟಾರೆಯಾಗಿ ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ವರದಿ: ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button