ರೇಣುಕಾ ಬಿರಾದಾರಗೆ ಒಲಿದು ಬಂದ – ಸಾವಿತ್ರಿಬಾಯಿ ಪುಲೆ ಪ್ರಶಸ್ತಿ.
ಗೋಲಗೇರಿ ಮಾ.14

ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ಸುಪುತ್ರಿಯಾದ ಶ್ರೀಮತಿ ರೇಣುಕಾ ನೀ.ಬಿರಾದಾರ (ಡಾಂಗೆ) ರವರು ಕಲಬುರ್ಗಿಯ ಜಗತ್ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ ಸಹ ಶಿಕ್ಷಕರಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿರುವುದಕ್ಕೆ ಉತ್ತಮ ಶಿಕ್ಷಕಿ ಎಂದು ಪರಿಗಣಿಸಿ 2025 ನೇ. ಸಾಲಿನ ಕಲಬುರ್ಗಿಯ ಜಿಲ್ಲಾ ಮಟ್ಟದ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಗಿದೆ. ಮಾತೆ ಸಾವಿತ್ರಿಬಾಯಿ ಪುಲೆ ಜಯಂತೋತ್ಸವ ಅಂಗವಾಗಿ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಫೆಡರೇಷನ್ (ರಿ) ನವ ದೆಹಲಿ ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ ಕಲಬುರಗಿ ಹಾಗೂ ಪೂಜ್ಯ ಡಾ, ಶರಣಬಸಪ್ಪ ಅಪ್ಪಾ ಫ್ಯಾಮಿಲಿ ಟ್ರಸ್ಟ್ ದಾಸೋಹ ಮನೆ ಶರಣಬಸವೇಶ್ವರ ಸಂಸ್ಥಾನ ಕಲಬುರ್ಗಿ ಇವರ ಸಂಯೋಗದಲ್ಲಿ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಸಮಾರಂಭ ಕಾರ್ಯಕ್ರಮ ನೆರವೇರಿತು.ಗೋಲಗೇರಿ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರಾದ ಬಸನಗೌಡ ಬಿರಾದಾರ್, ಸಂತೋಷ್ ಗೌಡ ಪಾಟೀಲ್ ಡಂಬಳ. ವೀರೇಂದ್ರ ಪಾಟೀಲ್, ಗೌಡಣ್ಣ ಆಲಮೇಲ, ಸಿದ್ದನಗೌಡ ಪಾಟೀಲ್, ಮಲ್ಲನಗೌಡ ಪಾಟೀಲ್, ಶ್ರೀಶೈಲ್ ಚಳ್ಳಗಿ, ಮಹೇಶ್ ಹುರಕಡ್ಲಿ , ಷಣ್ಮುಖ ಸಾತಿಹಾಳ, ಸೈಪನ್ ಸಾಬ್ ಕೋರವಾರ. ಸೈಪನ್ ಬಾಗವಾನ, ಮೈಬುಬ್ ಕೋರವಾರ, ಇವರ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ