ದೈಹಿಕ ಶಿಕ್ಷಕರ ಸಂಘದಿಂದ ಅವಿರೋಧವಾಗಿ – ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನ.
ಕೂಡ್ಲಿಗಿ ಮಾ.14

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದಲ್ಲಿ ನಡೆದ 2024 ರಿಂದ 2029 ರ ಅವಧಿಯ ಚುನಾವಣೆಯಲ್ಲಿ ಗ್ರೇಡ್ – 1. ದೈಹಿಕ ಶಿಕ್ಷಣ ಶಿಕ್ಷಕರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷರಾಗಿ ಬಿ.ಎಂ ಭರತೇಶ್ ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ನಾಗಭೂಷಣ, ಸಂಘಟನಾ ಕಾರ್ಯದರ್ಶಿಯಾಗಿ ಬಸವೇಶಿ ಖಜಾಂಚಿ ಕಲೀಲ್ ಸಾಬ್ ಉಪಾಧ್ಯಕ್ಷರಾಗಿ ಎನ್ ಕರಿಬಸಪ್ಪ ಹಾಗೂ ಮಹೇಂದ್ರ, ಶ್ರೀಮತಿ ಜ್ಯೋತಿ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆಯಾದ ಎಲ್ಲಾ ಗ್ರೇಡ್ 2. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಅದ್ದೂರಿಯಾಗಿ ಸನ್ಮಾನ ಕಾರ್ಯಕ್ರಮ ಬುಧವಾರ ರಂದು ನೆರವೇರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಗ್ರೇಡ್ – 2. ಸಂಘದ ಅಧ್ಯಕ್ಷರಾದ ಚೆನ್ನಬಸಪ್ಪ ಅವರು ಹಾಗೂ ಜಿಲ್ಲಾ ವಿಜಯನಗರದ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಎ.ರಮೇಶ್ ರವರು. ತಾಲೂಕು ಘಟಕದ ಉಪಾಧ್ಯಕ್ಷರಾದ ಕೋಗಳಿ ಕೊಟ್ರೇಶ್, ಕರಿಬಸಪ್ಪ ,ವೀರಣ್ಣ ಕರಿ ಬಸವನ ಗೌಡ ಖಜಾಂಚಿ ಹಾಗೂ ಇನ್ನೂ ಹಲವಾರು ಪದಾಧಿಕಾರಿಗಳು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಶಶಿಧರ್, ತಾಲೂಕು ಪರಿವೀಕ್ಷಕರು. ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ ಕೂಡ್ಲಿಗಿ