ಹ್ಯಾಳ್ಯಾ ಗ್ರಾಮ ಪಂಚಾಯಿತಿಯಲ್ಲಿ ಕನಕದಾಸರ ಜಯಂತಿ ಆಚರಣೆ.
ಹ್ಯಾಳ್ಯಾ ನವೆಂಬರ್.30

ಕೊಟ್ಟೂರು ತಾಲೂಕಿನ ಹ್ಯಾಳ್ಯ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ದಂದು ಕನಕದಾಸ ಭಾವಚಿ ತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಕನಕ ಜಯಂತಿಯನ್ನು ಆಚರಿಸಲಾಯಿತು.ಕನಕದಾಸರು ನಾಡಿನ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಸಂಚರಿಸಿ ಭಕ್ತಿಭಾವ, ವೈರಾಗ್ಯಗಳನ್ನು ಸಾರಿ ಸಮಾಜವನ್ನು ಜಾಗೃತಿ ಗೊಳಿಸಿದರು. ನವ ಸಮಾಜ ನಿರ್ಮಾಣ ಮಾಡಲು ಕನಕದಾಸರ ಚಿಂತನೆ, ತತ್ವ ಮತ್ತು ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಪಿಡಿಒ ಸಿಎಚ್ಎಂ ಗಂಗಾಧರ ತಿಳಿಸಿದರು.ಇದೇ ಸಂದರ್ಭದಲ್ಲಿ ಟಿ ರಾಜ, ಗುಂಡಪ್ಪರ ಕೊಟ್ರೇಶ್, ಉಪಾಧ್ಯಕ್ಷರು ಡಿ ನಾಗೇಶ್, ನುಪ್ಪಣ್ಣ ಗ್ರಂಥಾಲಯ ಬಡಿಗೇರ್ ಲೋಕೇಶ್, ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು