ಯುಗಾದಿ ಹಬ್ಬದ ಪ್ರಾರಂಭದ ವರ್ಷದಲ್ಲಿ ಕೆರೆ ಗುಡಿಹಳ್ಳಿ ಗ್ರಾಮದಿಂದ ವರ್ಷಧಾರೆ ಪ್ರಾರಂಭ ನುಡಿದ – ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ಸ್ವಾಮಿ.

ಕೆರೆ ಗುಡಿಹಳ್ಳಿ ಏಪ್ರಿಲ್.11

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೆರೆ ಗುಡಿಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ನೂತನ ರಥೋತ್ಸವವನ್ನು. ಶ್ರೀ ಶ್ರೀ ಶ್ರೀ ಉಜ್ಜಯಿನಿ ಜಗದ್ಗುರು. ಸಿದ್ದಲಿಂಗ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಕಳಸ ರೋಹಣ ಕಾರ್ಯಕ್ರಮ ಮಾಡಲಾಯಿತು ಹಾಗೂ ಗ್ರಾಮದಲ್ಲಿ ಆಯೋಜಿಸಲಾಗಿದಂತಹ ಧರ್ಮಸಭೆಯಲ್ಲಿ ಉಜ್ಜಿನಿಯ ಜಗದ್ಗುರು ಸಿದ್ದಲಿಂಗ ಸ್ವಾಮಿಗಳು ಗ್ರಾಮದ ಜನರ ಕುರಿತು ಧರ್ಮ ಕಾರ್ಯಗಳು ನಡಿಯುವಂತ ಗ್ರಾಮಗಳಲ್ಲಿ ಯಾವುದೇ ಜಾತಿ ಮತ ಎನ್ನದೆ ಬೇದ ಭಾವಗಳನ್ನು ಮಾಡದೆ ನಾವೆಲ್ಲರೂ ಒಂದೇ ಭಾರತೀಯರು ಎಂಬ ಒಗ್ಗಟ್ಟಿನ ಜಪ ಮಂತ್ರವನ್ನು ನೆರೆದಂತ ಜನರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಹಾಗೆ ಕಾರ್ಯಕ್ರಮದ ಸಭೆಯಲ್ಲಿ ಸ್ವಾಮೀಜಿಗಳು ಈ ಯುಗಾದಿ ಹಬ್ಬದ ಪ್ರಾರಂಭದ ವರ್ಷದಲ್ಲೇ ಮೊದಲನೇ ವರ್ಷದಲ್ಲಿ ನಿಮ್ಮ ಗ್ರಾಮದಿಂದಲೇ ಈ ವರ್ಷದ ವರ್ಷಧಾರೆ ಬರುವುದು ಉಜ್ಜಯಿನಿ ಮರಳು ಸಿದ್ದಯ್ಯ ನ ದೇವರ ಮೇಲಿನ ನಂಬಿಕೆಯಿಂದ ನುಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರುಗಳು ಹಾಗೂ ಯುವಕರು ಮಹಿಳೆಯರು ಅಕ್ಕ ಪಕ್ಕದ ಗ್ರಾಮಗಳಿಂದ ಆಗಮಿಸಿದಂತ ಸಾವಿರಾರು ಜನರು ನೆರೆದಿದ್ದರೂ, ಹಾಗೆ ಮಂಗಳವಾರ ರಂದು ಸಾಯಂಕಾಲ 5:30 ಕ್ಕೆ ಪೂಜೆ ಮಾಡಿ ನೂತನ ರಥೋತ್ಸವವು ಪ್ರಾರಂಬದಲ್ಲೇ ಮೋಡ ಕವಿದ ವಾತಾವರಣ ಉಂಟಾಗಿ ವಿವಿಧ ಬಗೆಯ ಸಕಲ ವಾದ್ಯಗಳೊಂದಿಗೆ ಜನರ ಭಕ್ತಿಯ ನೊಳಗೊಂಡು ವಿಜೃಂಭಣೆಯಿಂದ ರಥೋತ್ಸವ ನಡಿಯುವಂತ ಸಂದರ್ಭದಲ್ಲಿ ಶ್ರೀ ಸಿದ್ದಲಿಂಗ ಸ್ವಾಮಿಗಳು ನುಡಿದಂತೆ ಮಳೆಯು ಬಂದೆ ಬಿಟ್ಟಿತು.ಸ್ವಲ್ಪ ಕಾಲ ಮಳೆ ಬಂದ ಸಂತೋಷದೊಂದಿಗೆ ಜಿನಿ ಜಿನಿ ಮಳೆಯಲ್ಲೇ ರಥೋತ್ಸವವನ್ನು ಎಳೆಯುವುದರೊಂದಿಗೆ ನೆರೆದಂತ ಜನರೆಲ್ಲರೂ ಹರ್ಷವನ್ನು ವ್ಯಕ್ತಪಡಿಸಿದ ಸಂತೋಷ ದಿಂದ ನೂತನ ರಥೋತ್ಸವವು ಯಶಸ್ವಿಯಾಗಿ ಜರುಗಿತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳಾದ ಜಿ. ನಂದೀಶ್. ಯು ಎಂ. ಬಸವರಾಜಯ್ಯ. ಎಸ್ ಪರಮೇಶಪ್ಪ. ಎಸ್. ರಾಜಶೇಖರ. ಎಂ. ಬಸವರಾಜ. ಡಿ ಮರಳ ಸಿದ್ದಪ್ಪ. ಜಿ ನಾಗರಾಜ. ಎಮ್. ಮಂಜುನಾಥ .ಜಿ ಶೇಖರಪ್ಪ ಇನ್ನೂ ಅನೇಕ ಗ್ರಾಮಸ್ಥರು ಸಕಲ ಭಕ್ತಾದಿಗಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಇದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ ಕೂಡ್ಲಿಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button