ನೂತನ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ – ಭಾಗಿಯಾದ ಶಾಸಕರು.
ಮುರುಡಿ ಅ.04





ಇಂದು 4.10.2025 ರಂದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಮುರುಡಿ ಗ್ರಾಮದಲ್ಲಿ ನೂತನ ಗ್ರಂಥಾಲಯ ಕೊಠಡಿ ಉದ್ಘಾಟನೆ ಮೊಳಕಾಲ್ಮೂರು ಕ್ಷೇತ್ರದ ಶಾಸಕರಾದ ಶ್ರೀ ಎನ್.ವೈ ಗೋಪಾಲಕೃಷ್ಣ ರವರು ಕೊಠಡಿಯನ್ನು ಉದ್ಘಾಟಿಸಿದರು.
ಐ.ಡಿ.ಬಿ.ಐ ಬ್ಯಾಂಕ್ ಹಾಗೂ ಹಳೆ ವಿದ್ಯಾರ್ಥಿಗಳು ಸಹಕಾರದೊಂದಿಗೆ ಗ್ರಂಥಾಲಯ ಸುಸರ್ಜಿತವಾಗಿ ನಿರ್ಮಾಣ ಗೊಂಡಿದೆ.

ಶಾಸಕರು ಮಾತನಾಡಿ ಈಗೀನ ಮಕ್ಕಳಿಗೆ ತಮ್ಮ ಮೊಬೈಲ್ ಫೋನ್ ಗಳನ್ನು ನೀಡುವ ಬದಲು ಗ್ರಂಥಾಲಯಕ್ಕೆ ಕರೆ ತಂದು ಅಲ್ಲಿರುವಂತಹ ಪುಸ್ತಕಗಳನ್ನು ಓದಿ ಹೆಚ್ಚಿನ ಜ್ಞಾನಾರ್ಜನೆಯನ್ನು ಸದುಪಯೋಗ ಪಡಿಸಿ ಕೊಳ್ಳಬೇಕೆಂದು ಪೋಷಕರಿಗೆ ತಿಳಿಸಿದರು. ಶಾಲಾ ಕೊಠಡಿ ದುರಸ್ತಿ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದರು. ಆದಷ್ಟು ಬೇಗನೆ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಇ.ಓ ಹನುಮಂತಪ್ಪ, ಪಿ.ಆರ್.ಡಿ ಲಿಂಗರಾಜ್ ಐ.ಡಿ.ಬಿ.ಐ ಬ್ಯಾಂಕ್ ನ ಭರತ್ ಕುಮಾರ್ ಭೂಪತಿ ಗ್ರಾಮ.ಪಂ ಅಧ್ಯಕ್ಷರಾದ ಶ್ರೀಮತಿ ಪಾರ್ವತಿ ಸದಸ್ಯರಾದ ಹೇಮಲತಾ ಪಿಡಿಓ ಎಸ್.ಟಿ.ಎಂ.ಸಿ ಅಧ್ಯಕ್ಷರಾದ ವೀರೇಶ್ ಗುಂಡಪ್ಪ ಮುಖಂಡರುಗಳಾದ ಖದರ್ ಗುರುಲಿಂಗಪ್ಪ ಗೋವಿಂದಪ್ಪ ಅಂಜಿನಪ್ಪ ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು