2B ಶೇ 10% ಮೀಸಲಾತಿ ನೀಡದಿದ್ದರೆ ಉಗ್ರ ಹೋರಾಟ – ರಾಜ್ಯ ಮುಸ್ಲಿಂ ಸಂಘ ಸರ್ಕಾರಕ್ಕೆ ಎಚ್ಚರಿಕೆ.
ಕೂಡ್ಲಿಗಿ ಡಿಸೆಂಬರ್.31
ರಾಜ್ಯದ ಅಲ್ಪಸಂಖ್ಯಾತ ಮುಸ್ಲಿಮರಿಗೆ, 2B ಶೇ4% ಮೀಸಲಾತಿ ಬದಲಾಗಿ ಶೇ10%ಕ್ಕೆ ಹೆಚ್ಚಿಸಿ ಶೀಘ್ರವೇ ಜಾರಿಗೆ ತರಬೇಕೆಂದು. ಕರ್ನಾಟಕ ಮುಸ್ಲಿಂ ಸಂಘದ ರಾಜ್ಯಾಧ್ಯಕ್ಷ ಹಾಗೂ ಹಿರಿಯ ವಕೀಲರಾದ, ಎಲ್.ಎಸ್. ಬಸೀರ್ ಅಹಮ್ಮದ್ ಆಗ್ರಹಿಸಿದರು. ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ , ಭಾನುವಾರ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ಮುಸ್ಲಿಂರನ್ನು ಎದುರು ಹಾಕಿ ಕೊಂಡು ಸೋಲನ್ನು ಅನುಭವಿಸಿರುವ ಪಕ್ಷದಿಂದ, ಅಧಿಕಾರದಲ್ಲಿರುವ ಈಗಿನ ಕಾಂಗ್ರೇಸ್ ನೇತೃತ್ವದ ಸರ್ಕಾರ ಪಾಠ ಕಲಿಯಬೇಕು.
ಮುಸ್ಲಿಂ ಸಮುದಾಯ ಅಘೋಷಿತವಾಗಿ ಕಾಂಗ್ರೇಸ್ ಪಕ್ಷಕ್ಕೆ, ತಲೆ ತಲಾಂತರದಿಂದ ಪವಿತ್ರ ಮತವನ್ನು ಹಾಕುವುದರ ಮೂಲಕ ಕಾಂಗ್ರೇಸ್ ಪಕ್ಷದ ಪರ ಗುರುತಿಸಿ ಕೊಂಡಿದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದ, ಅಲ್ಪಸಂಖ್ಯಾತ ಮುದಾಯವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು ಎಂದು ಎಚ್ಚರಿಕೆಯನ್ನ ನೀಡಿದರು. ಮುಸ್ಲಿಂಮರ 2B ಶೇ10%ಕ್ಕೆ ಹೆಚ್ಚಿಸಿವುದರ ಮೂಲಕ, ಸಂಪುಟದಲ್ಲಿ ತೀರ್ಮಾನಿಸ ಬೇಕು ಎಂದು ಅವರು ಒತ್ತಾಯಿಸಿದರು. ನಿರ್ಲಕ್ಷ್ಯ ಧೊರಣೆ ತಳೆದಲ್ಲಿ ಮುಂಬರವ ಲೋಕಸಭಾ ಚುನಾವಣೆಯನ್ನು, ನಮ್ಮ ಸಮುದಾಯ ಬಹಿಷ್ಕರಿಸುತ್ತದೆ ಎಂದರು. ಅದರಂತೆ ಹಜರತ್ ಟಿಪ್ಪು ಸುಲ್ತಾನ್ ನೆಲೆ ಬೀಡಾದ ಶ್ರೀರಂಗಪಟ್ಟಣವನ್ನು, 3.ಸಾವಿರ ಕೋಟಿ ಅನುದಾನದೊಂದಿಗೆ, ರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿಸ ಬೇಕು. ಹಜ್ ಯಾತ್ರಿಗಳಿಗೆ ಆರ್ಥಿಕ ಸಹಕಾರವನ್ನು ಶೇ10.ರಷ್ಟು ಹೆಚ್ಚಿಸಬೇಕು. ವಕ್ಫ್ ಮಂಡಳಿಯಿಂದ ರಾಜ್ಯದ ಪ್ರತಿಯೊಂದು ಮಸೀದಿ, ದರ್ಗಾ, ಮದರಸಾಗಳಿಗೆ ಪ್ರತಿ ವರ್ಷಕ್ಕೆ 10ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು. ಮುಸ್ಲಿಂ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಮೀಸಲಾತಿ ಕಾಯ್ದೆಯನ್ನು ತರುವುದರ ಜೊತೆಯಲ್ಲಿ, ಮುಸ್ಲಿಂ ಸರ್ಕಾರಿ ನೌಕರರಿಗೆ ಪ.ಜಾ/ಪ.ಪಂ ನೌಕರರಿಗೆ ನೀಡುವ ಮೀಸಲಾತಿಯನ್ನು ನೀಡಿ ಮುಂಬಡ್ತಿಯ ಕಾನೂನು ಜಾರಿಯಾಗ ಬೇಕೆಂದರು.
ಪ್ರತಿ ಗ್ರಾಮಗಳಲ್ಲೂ ಮುಸ್ಲಿಂ ಸಮುದಾಯ, ಇತರೆ ಸಮುದಾಯ ಗಳೊಡನೆ ಸಹೋದರ ಬಾಂಧವ್ಯಗಳನ್ನು ಹೊಂದಿದೆ. ಪ್ರತಿಯೊಂದು ಕಾರ್ಯಕ್ರಮದಲ್ಲಿ ಬೆರೆತು ಐಕತ್ಯೆಯೊಂದಿಗೆ, ಸಹಬಾಳ್ವೆಯಿಂದ ಜೀವನ ಸಾಗಿಸಿ ಕೊಂಡು ಬಂದಿದೆ. ಸರ್ಕಾರ ಮುಸ್ಲಿಂ ಕಾರ್ಮಿಕರಿಗೆ ಮಾತ್ರ ಮಲತಾಯಿ ಧೋರಣೆಯನ್ನು, ಅನುಸರಿಸುತ್ತಿದ್ದು ಖಂಡನೀಯವಾಗಿದೆ. ಗುಡಿ ಕೈಗಾರಿಕೆಗಳಿಗೆ ಸಾಲ ಸೌಲಭ್ಯವನ್ನು ಕಲ್ಪಿಸಬೇಕು, ಸಂವಿಧಾನದ ಆಶಯದಂತೆ ಇಸ್ಲಾಂ ಧರ್ಮದ ಅನುಸಾರ, ಮಹಿಳೆಯರು ಹಿಜಾಬ್ ಧರಿಸಲು ಆವಕಾಶ ನೀಡುವ ಮೂಲಕ ಕಡ್ಡಾಯ ಕಾನೂನು ಜಾರಿ ಗೊಳಿಸ ಬೇಕೆಂದರು. ಸಂಘಟನೆ ನೇತೃತ್ವದಲ್ಲಿ 20 ಅಂಶಗಳುಳ್ಳ ಬೇಡಿಕೆಗಳನ್ನು, ಸರ್ಕಾರದ ಗಮನಕ್ಕೆ ಮಾಧ್ಯಮದ ಮೂಲಕ ತರುತ್ತಿದ್ದೇವೆ. ಈ ಕುರಿತು ಫೆಬ್ರವರಿ ಕೊನೆಯ ವಾರದಲ್ಲಿ, ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ. 10ಸಾವಿರ ಅಲ್ಪಸಂಖ್ಯಾತರು ಒಗ್ಗಟ್ಟಿನಿಂದ ಸಭೆ ಸೇರಿ, ಪ್ರಮುಖಾ ನಿರ್ಣಯಗಳನ್ನು ಕೈಗೊಂಡು ಸರ್ಕಾರವನ್ನು ಎಚ್ಚರಿಸುವುದರ ಮೂಲಕ. ಮುಸ್ಲಿಂ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಸರಿ ಪಡಿಸುವಂತೆ, ಸರ್ಕಾರಕ್ಕೆ ಎಚ್ಚರಿಕೆಯ ಘಂಟೆಯನ್ನು ಭಾರಿಸಲಾಗುವುದು ಎಂದರು ಹಾಗೆನಾದುರು ಸರ್ಕಾರ ಸ್ಪಂಧಿಸದಿದ್ದಲ್ಲಿ ಹಂತ ಹಂತವಾಗಿ, ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು. ಮತ್ತು ಗ್ರಾಮೀಣ ಸೇರಿದಂತೆ ರಾಜ್ಯಾಧ್ಯಂತ, ಸರ್ಕಾರದ ವಿರುದ್ಧ ಹೋರಾಟಗಳನ್ನು ಮಾಡುತ್ತೇವೆಂದು ಎಲ್.ಎಸ್. ಬಶೀರ್ ಅಹಮ್ಮದ್ ತಿಳಿಸಿದರು. ವೇದಿಕೆಯಲ್ಲಿ ಕರವಾಳಿ ಕರ್ನಾಟಕದ ಹಿರಿಯ ವಕೀಲ ಸಾಹಿದುಲ್ಲಾ, ಮಹಮ್ಮದ ಶಹಿಪುಲ್ಲಾ, ಚಿತ್ರದುರ್ಗದ ಮೋಸಿನ್ ಸಾಹೇಬ್, ಕುಂದಾಪುರದ ಯಾಸೀನ್ ಸಾಹೇಬ್, ಗುಡೇಕೋಟೆ ನೌಷಾದ್, ಶೈಪುಲ್ಲಾ, ಜಪ್ರುದ್ಧೀನ್, ರಹೆಮಾನ್, ಇಮ್ಮಾನ್, ಮೌಲಿ ಸಾಹೇಬ್ ಸೇರಿದಂತೆ. ರಾಜ್ಯದಿಂದ ವಿವಿಧೆಡೆಯಿಂದ ಆಗಮಿಸಿದ್ದ, ಮುಸ್ಲಿಂ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ, ಮುಸ್ಲಿಂ ಮುಖಂಡರು ಹಾಗೂ ವಿವಿಧ ಜನ ಪ್ರತಿನಿದಿಗಳು ಇದ್ದರು.
ಜಿಲ್ಲಾ ವರದಿಗಾರರು: ರಾಘವೇಂದ್ರ .ಬಿ. ಸಾಲುಮನೆ. ಕೂಡ್ಲಿಗಿ