ತಾಲೂಕಿನ ವಸತಿ ನಿಲಯಗಳನ್ನು ಪರಿಶೀಲಿಸಿದ – ಪುರುರಾಜ್ ಸಿಂಗ್ ಸೋಲಂಕಿ, ಐ.ಎ.ಎಸ್ ಆಫೀಸರ್.
ಮಾನ್ವಿ ನ.14

ತಾಲೂಕಿನ ಪೋತ್ನಾಳ್ ಗ್ರಾಮದ ಗ್ರಾಮ ಪಂಚಾಯಿತಿಗೆ ತಾಲೂಕು ಪಂಚಾಯತ್ ಇ.ಓ ಪುರುರಾಜ್ ಸಿಂಗ್ ಸೋಲಂಕಿ, ಐ.ಎ.ಎಸ್ ರವರು ಭೇಟಿ ನೀಡಿ ಗ್ರಾಮ ಪಂಚಾಯಿತಿಯ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಲ ತ್ಯಾಜ್ಯ ವಿಲೇವಾರಿ ಘಟಕ, ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಸ್ವಚ್ಚತೆ ಸಿಬ್ಬಂದಿಗಳಿಗೆ ಆರೋಗ್ಯ ರಕ್ಷಣೆಗಾಗಿ ನೀಡಲಾಗಿರುವ ಅಗತ್ಯ ಸುರಾಕ್ಷ ಪರಿಕಾರಗಳಾದ ಹ್ಯಾಂಡ್ ಗ್ಲೌಸ್ ಮತ್ತು ಬೂಟುಗಳನ್ನು ಬಳಸುವಂತೆ ಸೂಚನೆ ನೀಡಿದರು ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಪ್ರತ್ಯೇಕವಾದ ಪುಸ್ತಕ ನಿರ್ವಹಿಸುವಂತೆ ತಿಳಿಸಿದರು ಹಾಗೂ ಪ್ರತಿ ತಿಂಗಳು ಸಿಬ್ಬಂದಿಗಳಿಗೆ ವೇತನವನ್ನು ನೀಡುವುದಕ್ಕೆ ಕ್ರಮ ಕೈಗೊಳ್ಳುವಂತೆ ಗ್ರಾ,ಪಂ ಪಿ.ಡಿ.ಓ ಬಸವರಾಜ ರವರಿಗೆ ಸೂಚಿಸಿದರು. ಗ್ರಾಮದಲ್ಲಿನ ಅರಿವು ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿರುವ ಪುಸ್ತಕಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸುವಂತೆ ಹಾಗೂ ಅಲ್ಲಿರುವ ಕಂಪ್ಯೂಟರ್ ಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವಂತೆ ಪಿ.ಡಿ.ಓ ಬಸವರಾಜ ರವರಿಗೆ ಸೂಚಿಸಿದರು. ಮಾನ್ವಿ ಪಟ್ಟಣದ ಬಿ.ಸಿ.ಎಂ ಇಲಾಖೆಯ ಬಾಲಕಿಯರ ಮೇಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ವಸತಿ ನಿಲಯದಲ್ಲಿನ ವಿದ್ಯಾರ್ಥಿನಿಯರಿಂದ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಹಾಗೂ ಶುಚ್ಚಿ ರುಚ್ಚಿಯಾದ ಆಹಾರ ನೀಡಲಾಗುತ್ತಿದೆಯ ಎಂದು ಕೇಳಿ ಮಾಹಿತಿ ಪಡೆದರು ವಿದ್ಯಾರ್ಥಿನಿಯರಿಗೆ ವಸತಿ ನಿಲಯದಲ್ಲಿ ನೀಡಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ವಿದ್ಯಾರ್ಥಿನಿಯರ ಹಾಜರಾತಿಯನ್ನು ಪರಿಶೀಲಿಸಿ ವಸತಿ ಮೇಲ್ವಿಚಾರಕರಿಗೆ ಅಗತ್ಯ ಸೂಚನೆಗಳನ್ನು ನೀಡಿದರು.ಬಿ.ಸಿ.ಎಂ ತಾ. ಅಧಿಕಾರಿ ಭಾಗಯ್ಯನಾಯಕ, ತಾ.ಪಂ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಖಾಲಿದ್ ಅಹ್ಮದ್, ತಾ.ಪಂ ಪಂಚಾಯತ್ ರಾಜ್ ಇಲಾಖೆ ಸಹಾಯಕ ನಿರ್ದೇಶಕರಾದ ದೀಪಾ ಆರಳಿಕಟ್ಟಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ಸುರೇಶ, ತಾಂತ್ರಿಕ ಸಿಬ್ಬಂದಿಗಳು, ಪಿ.ಡಿ.ಓ ಬಸವರಾಜ್ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.
ಬಾಕ್ಸ್ ನ್ಯೂಸ್:-
ಮಾನ್ವಿ ಪಟ್ಟಣದ ಬಿ.ಸಿ.ಎಂ ಇಲಾಖೆಯ ಬಾಲಕಿಯರ ಮೇಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಾ.ಪಂ ಇ.ಓ ಪುರುರಾಜ್ ಸಿಂಗ್ ಸೋಲಂಕಿ, ಐ.ಎ.ಎಸ್ ಆಫೀಸರ್.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

