ಹುನಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಸಕ್ತ ವರ್ಷದಲ್ಲಿ 7.37 ಲಕ್ಷ ನಿವ್ವಳ ಲಾಭ ಗಳಿಸಿದೆ – ದೇವು ಡಂಬಳ.
ಹುನಗುಂದ ಸ.20

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಸಕ್ತ ವರ್ಷದಲ್ಲಿ 7.37 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಪಿ.ಕೆ.ಪಿ.ಎಸ್ ಅಧ್ಯಕ್ಷ ದೇವು ಡಂಬಳ ಹೇಳಿದರು.ಶುಕ್ರವಾರ ಪಟ್ಟಣದ ಬಸವ ಮಂಟಪದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 111 ನೇ. ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು, ಕೃಷಿ ಪತ್ತಿನ ಸಹಕಾರಿ ಸಂಘವು ರೈತರ ಹಾಗೂ ಗ್ರಾಹಕರ ಆರ್ಥಿಕತೆ ವೃದ್ದಿಗೆ ಸಾಕಷ್ಟು ಅನುಕೂಲ ಮಾಡಿದೆ. ಮುಖ್ಯವಾಗಿ ರೈತರಿಗೆ ನೀಡುವ ಕೃಷಿ ಸಾಲದ ಜೊತೆಗೆ ಅವರು ಬೆಳೆದಂತ ಉತ್ಪನ್ನಗಳನ್ನು ಶೇಖರಣೆ ಮಾಡಿಟ್ಟು ಕೊಂಡು ಮುಂದೆ ಅವರಿಗೆ ಲಾಭದಾಯಕ ಬೆಲೆ ಸಿಗುವಂತ ಯೋಜನೆಗಳನ್ನು ಸಂಘ ಹಾಕಿ ಕೊಂಡಿದೆ. ಶೈಕ್ಷಣಿಕ ಆರೋಗ್ಯ ಸಮಾಜಿಕ ಹೀಗೆ ಹಲವು ವಲಯದಲ್ಲಿ ಸಂಘ ಸಮಾಜ ಮುಖಿ ಕಾರ್ಯ ಮಾಡುವುದರ ಮೂಲಕ ಪ್ರಗತಿ ಪಥದತ್ತ ಸಾಗುತ್ತಿದೆ ಎಂದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತೇಶ ತಂಗಡಗಿ 2023-24 ನೇ. ಸಾಲಿನ ವರದಿ ವಾಚನ ಮಾಡಿ ಮಾತನಾಡಿ ಪ್ರಸ್ತುತ ನಮ್ಮ ಸಂಘವು 6895 ಸದಸ್ಯರನ್ನು ಹೊಂದಿದ್ದು, ಶೇರ ಬಂಡವಾಳ 451.07 ಲಕ್ಷ ರೂ, ಠೇವುಗಳು 4020.55 ಲಕ್ಷ ರೂ, ಬಿ.ಡಿ.ಸಿಸಿ ಬ್ಯಾಂಕ ಸಾಲಗಳು 1091.05 ಲಕ್ಷ ರೂ ಹೊಂದಿದ್ದು. ಪ್ರಸಕ್ತ ವರ್ಷದಲ್ಲಿ 7.37 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದರು. ಕೃಷಿ ಪತ್ತಿನ ಉಪಾಧ್ಯಕ್ಷೆ ಅನ್ನಪೂರ್ಣ ಹೊಸೂರ, ನಿರ್ದೇಶಕರಾದ ರವಿ ಹುಚನೂರ, ರವಿ ಹೂಲಗೇರಿ, ದೊಡ್ಡಪ್ಪ ಬೆಳ್ಳಿಹಾಳ, ದೀಪಾ ಸುಂಕದ, ಮಹಾಂತೇಶ ಹೊಸೂರ, ಚೇತನ ಮುಕ್ಕಣ್ಣವರ, ಕುಮಾರ ಘಟ್ಟಿಗನೂರ, ಬಸಪ್ಪ ಹಾದಿಮನಿ, ಹನಮಂತಪ್ಪ ಸುಣಕಲ್ಲ, ಸಿಬ್ಬಂದಿಗಳಾದ ಸಂಗಣ್ಣ ಹಳ್ಳೂರ, ಶರಣಪ್ಪ ಕರಂಡಿ, ವಿಜಯ ಡಂಬಳ, ಪರಸಪ್ಪ ಗಂಗೂರ, ಮಹಾಂತೇಶ ಪಲ್ಲೇದ ,ಮುತ್ತಣ್ಣ ಬೆಳಗಲ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ