ಪತ್ರಿಕಾ ಭವನಕ್ಕಾಗಿ ಉಪವಾಸ ಸತ್ಯಾಗ್ರಹ – ಜಿಲ್ಲಾಡಳಿತ ಮೌನ.
ಹೊಸಪೇಟೆ ಸ.20

ನಗರದ ಕರ್ನಾಟಕ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಜಿಲ್ಲೆಯ ಎಲ್ಲಾ ಪತ್ರಕರ್ತರಿಗೆ ಪತ್ರಿಕಾ ಭವನ ಪತ್ರಿಕಾ ಗೋಷ್ಠಿಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ತಾಲ್ಲೂಕ ಕಚೇರಿ ಮುಂದೆ ಮೌನ ಉಪವಾಸ ಸತ್ಯಾಗ್ರಹ ಹೋರಾಟ ಅನಿವಾರ್ಯ ಎಂದು ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಹೆಚ್.ಎಸ್ ರಾಜು ಹೇಳಿದರು. ವಿಜಯನಗರ ಜಿಲ್ಲೆಯಲ್ಲಿ ಒಟ್ಟು ಆರು ತಾಲ್ಲೂಕುಗಳಿದ್ದು ಕನಿಷ್ಠ 200 ಜನ ಪತ್ರಕರ್ತರು ಪತ್ರಿಕೋದ್ಯಮದಲ್ಲಿ ದಿನನಿತ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ ಹೊಸಪೇಟೆ ಯಲ್ಲಿರುವ ಸರ್ಕಾರಿ ಪತ್ರಿಕಾ ಭವನವನ್ನು ಕೇವಲ ಒಂದು ಸಂಘದವರು ಮಾತ್ರ ಪತ್ರಿಕಾಗೋಷ್ಠಿ ನಡೆಸಲು ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಇದು ಗೊತ್ತಿದ್ದರೂ ಜಿಲ್ಲಾಧಿಕಾರಿಗಳು ಮೌನ ವಹಿಸಿರುವುದು ಸರಿಯಲ್ಲ. ಜಿಲ್ಲಾಧಿಕಾರಿಗಳು ಪತ್ರಕರ್ತರ ಸಂಘಗಳನ್ನು ಪರಿಗಣಿಸದೆ ಪತ್ರಕರ್ತರನ್ನು ಗಮನ ದಲ್ಲಿಟ್ಟುಕೊಂಡು ಪತ್ರಿಕಾ ಭವನವನ್ನು ಸುದ್ದಿಗೋಷ್ಠಿ ನಡೆಸಲು ಎಲ್ಲಾ ಪತ್ರಕರ್ತರಿಗೂ ಅನುವು ಮಾಡಿಕೊಡಬೇಕು ಎನ್ನುವ ನಿಟ್ಟಿನಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿತು ಎಂದು ಮಾತನಾಡಿದರು. ವಿಜಯನಗರ ಜಿಲ್ಲೆಯಲ್ಲಿ ಪತ್ರಕರ್ತರು ಸಾಮಾಜಿಕ ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಪತ್ರಕರ್ತರಿಗೆ ನ್ಯಾಯ ಸಿಗಲಾರದೆ ಅಸಮಾನತೆ ವಿರುದ್ಧ ಹೋರಾಟ ಹಮ್ಮಿ ಕೊಂಡಿರುವುದು ಆಶ್ಚರ್ಯಕರ ಸಂಗತಿ. ಇನ್ನೂ ಸಾಮಾನ್ಯ ಜನರಿಗೆ ಜಿಲ್ಲಾಡಳಿತ ಯಾವ ರೀತಿಯ ನ್ಯಾಯ ಒದಗಿಸಬಹುದು ನಮಗೆ ಭಯವಾಗುತ್ತಿದೆ ಎಂದು ತಮ್ಮ ಕೆಲಸ ಕಾರ್ಯಗಳಿಗಾಗಿ ತಾಲೂಕ ಕಛೇರಿಗೆ ಬಂದಂತ ಬಸವರಾಜ್ ಮದುಗುಣಿಕೆ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಒಂದು ವರ್ಷದಿಂದ ಲಿಖಿತವಾಗಿ ಮತ್ತು ಮೌಖಿಕವಾಗಿ ಅನೇಕ ಬಾರಿ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ ಝೆಡ್ ಜಮೀರ್ ಅಹಮದ್ ರವರಿಗೆ ಮನವಿ ಸಲ್ಲಿಸಿದ್ದರು ಸಹ ಏನು ಪ್ರಯೋಜನವಾಗಿಲ್ಲ ಹಾಗಾಗಿ ತಾಲೂಕ ಕಚೇರಿ ಮುಂದೆ ಸೆಪ್ಟಂಬರ್ 20 ಶುಕ್ರವಾರ ರಂದು ಮೌನ ಉಪವಾಸ ಸತ್ಯಾಗ್ರಹವನ್ನು ಹಮ್ಮಿ ಕೊಂಡಿದ್ದೇವೆ. ಸಂಘದ ಸದಸ್ಯ ಪತ್ರಕರ್ತ ಕೆ.ಬಿ ಹಿರೇಮಠ್ ರವರು ಪತ್ರಿಕಾ ಭವನ ಪತ್ರಕರ್ತರಿಗೆ ಪತ್ರಿಕಾ ಗೋಷ್ಠಿ ನಡೆಸಲು ಮುಕ್ತ ಅವಕಾಶ ನೀಡಬೇಕೆಂದು ಶುಕ್ರವಾರ ಬೆಳಗ್ಗೆಯಿಂದಲೇ ಉಪವಾಸ ಸತ್ಯಾಗ್ರಹಕ್ಕೆ ಕುಳಿತರು. ಅವರಿಗೆ ಮಧ್ಯಾಹ್ನ 2 ಗಂಟೆಯ ಸುಮಾರು ಆರೋಗ್ಯದಲ್ಲಿ ಏರುಪೇರು ಕಂಡು ಬಂದರು ಸಹ ಲೆಕ್ಕಿಸದೆ ಉಪವಾಸ ಸತ್ಯಾಗ್ರಹ ಮುಂದುವರಿಸಿದರು.

ಈ ಕುರಿತು ಕರ್ನಾಟಕ ಪತ್ರಕರ್ತರ ಸಂಘದ ಸಂಘಟನಾ ಕಾರ್ಯದರ್ಶಿ ಎ.ಚಿದಾನಂದ ಮಾತನಾಡಿ ಪ್ರಜಾಪ್ರಭುತ್ವ ಭಾರತ ದೇಶದಲ್ಲಿ ಪತ್ರಿಕಾ ರಂಗ ಸಂವಿಧಾನದ ನಾಲ್ಕನೇ ಅಂಗ ಎಂದು ಪ್ರಸಿದ್ಧಿ ಆಗಿರುವುದು ಎಲ್ಲರಿಗೂ ತಿಳಿದ ವಿಷಯ ಆದರೆ ಇಲ್ಲಿ ಕೆಲವು ಪತ್ರಕರ್ತರು ನಮ್ಮ ಸಂಘದ ಪತ್ರಕರ್ತರನ್ನು ಗುರಾಯಿಸಿ ನೋಡುವುದು, ಪತ್ರಿಕಾ ಭವನದಿಂದ ಹೊರಗೆ ಹಾಕುವುದು, ಮೊಬೈಲ್ ಫೋನುಗಳನ್ನು ಕಸಿದುಕೊಳ್ಳುವುದು, ಇವರು ಡುಬ್ಲಿಕೇಟ್ ಪತ್ರಕರ್ತರು ಎಂದು ಹೇಳುವುದು ಅವಮಾನಕರ ಸಂಗತಿಯಾಗಿದೆ. ಇಂತಹ ನೋವುಗಳನ್ನು ಸುಮಾರು ವರ್ಷಗಳಿಂದ ಸಹಿಸಿ ಕೊಂಡು ಬಂದಿದ್ದೇವೆ. ನಾವು ಕೂಡ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮತ್ತು ಜಿಲ್ಲೆಯಲ್ಲಿ ಆಗು ಹೋಗುವ ನೈಜ ಸುದ್ದಿಗಳನ್ನು ದಿನನಿತ್ಯ ಪತ್ರಿಕೆಗಳಲ್ಲಿ ಬರೆಯುತ್ತೇವೆ. ಹೀಗಿದ್ದರೂ ಕೂಡ ನಮ್ಮನ್ನು ಕಡೆಗಣಿಸಿರುವುದು ದುರಂತ. ಇದರಿಂದ ಮನನೊಂದ ನಾವುಗಳು ಸುದ್ದಿಗಾಗಿ ಪತ್ರಿಕಾ ಭವನವನ್ನು ಪಡೆದು ಕೊಳ್ಳುವ ಸಲುವಾಗಿ ಹೋರಾಟ ಅನಿವಾರ್ಯವಾಗಿದೆ. ಪ್ರಜಾಪ್ರಭುತ್ವ ಭಾರತ ದೇಶದಲ್ಲಿ ಈ ರೀತಿ ಅನ್ಯಾಯ ಮಾಡುತ್ತಿರುವುದು ಅಸ್ಪೃಶ್ಯತೆ ಆಚರಣೆಗೆ ಸಮಾನವಾದ ಕೃತ್ಯ ಈ ಅಸಮಾನತೆ ವಿರುದ್ಧ ನಮ್ಮ ಹೋರಾಟ ವಿನಹಃ ಇದರಲ್ಲಿ ಯಾವುದೇ ಸಂಘದ ವಿರುದ್ಧ ನಮ್ಮ ಚಳುವಳಿ ಅಲ್ಲ ಇದು ನೊಂದ ಪತ್ರಕರ್ತರ ಅಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಪವಾಸ ಕುಳಿತ ಕೆ.ಬಿ ಹಿರೇಮಠ, ಆಶ್ರಿತ್, ಬೈಲು ಒದ್ದಿಗೇರಿ ಪನೆಂದ್ರ ಗೌಡ, ಕೆ ನಾಗರಾಜ್, ಗಾಯತ್ರಿ, ಗೀತಾ ಸುರೇಶ್, ವೆಂಕಟೇಶ್ ಸುಗ್ಗನಹಳ್ಳಿ, ಕೆ ಬರ್ಮಯ್ಯ,ವಿ ಗಾಳಪ್ಪ, ಮಹಮ್ಮದ್ ಗೌಸ್, ಎ.ಎಂ ಬಸವರಾಜ್, ಎಲ್ ಮಂಜುನಾಥ, ಮಾಲತೇಶ್ ಕುಮಾರ್ ಶೆಟ್ಟರ್, ರಘುನಾಥ, ಎ ಚಿದಾನಂದ,ಎನ್ ಶರಣಪ್ಪ. ರಾಘವೇಂದ್ರ ಇತರ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸದಸ್ಯರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ.ಶೆಟ್ಟರ್.ಹೊಸಪೇಟೆ