ಕಳಪೆ ಕಾಮಗಾರಿಗೆ ಸಾತ್ ಕೊಟ್ಟ ಅಧಿಕಾರಿಯ ಮೇಲೆ ಕಾನೂನು ಕ್ರಮಕ್ಕೆ ಆಗ್ರಹ.
ಹಿರೇರೂಗಿ ಫೆಬ್ರುವರಿ.3

ತಾಲೂಕಿನ ಹಿರೇರೂಗಿ ಹಾಗೂ ತಾಂಬಾ ನಡುವೆ ಇರುವ ರಸ್ತೆ ದುರಸ್ಥಿ ಕಾಮಗಾರಿ ಮಾಡಿಸುತಿರುವ ಭ್ರಷ್ಟ ಗುತ್ತಿಗೆದಾರ ಹಾಗೂ ಇಂಡಿ ತಾಲೂಕಿನ. ಪಿ.ಡಬ್ಲ್ಯೂ.ಡಿ.ಇಲಾಖೆಯ. ಏ.ಇ.ಎಮ್. ಎಮ್. ಸಂಜವಾಡ ಹಾಗೂ ಇಲಾಖೆಯ ಮೇಲಧಿಕಾರಿಗಳ ಕುಮಕ್ಕಿನೊಂದಿಗೆ (ಎಸ್ಟಿಮೆಂಟ್ ) ಪ್ರಕಾರ ಕೆಲಸ ಮಾಡದೇ ಕಳಪೆ ಕಾಮಗಾರಿ ಮಾಡಿಸುತ್ತಿದು ಹಾಗೂ ಈ ಮೊದಲು ಸಾಕಷ್ಟು ಕಾಮಗಾರಿಗಳು ಕಳಪೆ ಮಟ್ಟದ ಕಾಮಗಾರಿಗಳು ಮಾಡಿಸಿದ್ದು ಇರುತ್ತದೆ, ಕೆಲಸಕ್ಕೆ ಬಂದ ಅನುದಾನದಲ್ಲಿ ಹಣ ಉಳಿಸಿಕೊಳ್ಳುವ ಚಾಳಿ ಬೆಳಿಸಿ ಕೊಂಡಿದ್ದಾರೆ ಹೀಗೆ ಸಾಕಷ್ಟು ಹಣ ಉಳಿಸಿ ಕೊಂಡು ತಮ್ಮ ಹಾಗೂ ಮನೆಯವರ ಹೆಸರಿಗೆ ಸಾಕಷ್ಟು ಅಕ್ರಮ ಆಸ್ತಿ ಮಾಡಿ ಕೊಂಡಿದ್ದಾರೆ ಎಂದು ಸಾರ್ವಜನಿಕರ ಮತ್ತು ಸಂಘಟನೆಗಳ ನೇರ ಆರೋಪವಾಗಿದೆ ಆದರಿಂದ ಇವರ ಮೇಲೆ ಮೇಲಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮಾನ್ಯ ಲೋಕಾಯುಕ್ತರು ಇವರ ಮೇಲೆ ನಿಗಾ ವಹಿಸಬೇಕು ಒಂದು ವೇಳೆ ಯಾವುದೇ ಕ್ರಮ ಕೈಗೊಳದೆ ಇದ್ದರೆ ಜಿಲ್ಲಾಧಿಕಾರಿ ಕಛೇರಿ ಮುಂದೆ ಹೋರಾಟ ಮಾಡಲಾಗುವದು ಎಂದು ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ (ಅಂ) ಘಟಕದ ತಾಲೂಕ ಅಧ್ಯಕ್ಷ ಚಂದ್ರಶೇಖರ ಮೇಲಿನಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ