ಆಧುನಿಕ ಕೃಷಿ ವಿಧಾನ ಕುರಿತು ರೈತರಿಗೆ ಮಾಹಿತಿ.
ಹೊಳಲ್ಕೆರೆ ಫೆಬ್ರುವರಿ.9

ಪರಿಶ್ರಮ ಪ್ರೇರಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಇಂದು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಸಿದ್ದಪ್ಪ ಎನ್ನುವ ರೈತರ ಜಮೀನಿಗೆ ಭೇಟಿ ನೀಡಿ ಆಧುನಿಕ ಕೃಷಿ ವಿಧಾನ ಕುರಿತು ಮಾಹಿತಿ ನೀಡಲಾಯಿತು. ಔಷಧಿ ಸಿಂಪರಣೆ, ಬೀಜೋಪಚಾರ, ಸಾವಯವ ಗೊಬ್ಬರದ ಬಳಕೆ, ಕುರಿತು ಮಾಹಿತಿ ನೀಡಲಾಯಿತು. ಯತ್ಠೇಚ್ಚವಾದ ರಾಸಾಯನಿಕ ಗೊಬ್ಬರದ ಬಳಕೆಯಿಂದ ಮಣ್ಣು ತನ್ನ ಸತ್ವವನ್ನು ಕಳೆದು ಕೊಂಡು ಇಳುವರಿ ಬಾರದೇ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಕೊಂಡಿದ್ದಾರೆ, ಆದ್ದುದ್ದರಿಂದ ರೈತರು ಹೆಚ್ಚು ಫಸಲು ಬರಲು ದನದ ಕೊಟ್ಟಿಗೆ ಗೊಬ್ಬರವನ್ನು ಬಳಕೆ ಸೂಕ್ತವಾದದ್ದು ಎಂದು ತಿಳಿಸಿದರು. ರೈತರು ನಮ್ಮ ದೇಶದ ಆಧಾರ ಸ್ತಂಭ ಉತ್ತಮ ವಿಧಾನ ಬಳಸಿ ಕೃಷಿ ಚಟುವಟಿಕೆ ಮಾಡಿ ಹೆಚ್ಚು ಲಾಭ ಗಳಿಸಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ್ ಪಿ.ಎಸ್ ಕಾರ್ಯದರ್ಶಿ ಪರಶುರಾಮ್. ಎಂ ಮತ್ತು ನಿರ್ದೇಶಕರಾದ ಶಿವಮೂರ್ತಿ.ಟಿ ಕೋಡಿಹಳ್ಳಿ, ವಿಜಯಕುಮಾರ್ ಏಚ್. ಚಿದಂಬರಂ ಏಚ್.ಪಿ ಲಕ್ಷ್ಮಣ್,ತಿಪ್ಪೇಸ್ವಾಮಿ ಆರ್, ರಮೇಶ್ ಸಿ , ನಾಗರಾಜ್ ಡಿ, ಸಿದ್ದೇಶ್ವರ ಆರ್ ಮತ್ತು ಯಶೋಧರ ಸ್ಥಳದಲ್ಲಿದ್ದು ರೈತರಿಗೆ ಅಗತ್ಯವಾದ ಉಪಯುಕ್ತ ಮಾಹಿತಿ ನೀಡಿದರು.
ವರದಿ:-ಶಿವಮೂರ್ತಿ.ಕೋಡಿಹಳ್ಳಿ. ಚಳ್ಳಕೆರೆ