ಹೋಳಿ…..

ಹೋಳಿಯ ಬಣ್ಣಗಳು
ಹಳದಿ ಸಂಭ್ರಮದ ಬಣ್ಣಗಳು
ಹಸಿರು ಸಮೃದ್ದಿಯ ಬಣ್ಣಗಳು
ಕೇಸರಿ ನೇರಳೆ ಕೆಂಪು ನೀಲಿ ಬಣ್ಣಗಳು
ಈ ರಂಗು ರಂಗಿನ ಬಣ್ಣಗಳು
ರಂಗು ರಂಗಿನ ರಂಗೋಲಿಯಂತೆ
ರಂಗು ರಂಗಿನ ಕಾಮನಬಿಲ್ಲಿನಂತೆ
ಈ ಎಲ್ಲಾ ಬಣ್ಣ ಬಣ್ಣಗಳ ಹಬ್ಬ ಹೋಳಿ
ಬಣ್ಣ ತುಂಬುವ ಹಬ್ಬ ಹೋಳಿ
ಬಕೇಟ್ ನೀರಲಿ ಬಣ್ಣವು ತುಂಬಿಸಿ
ಬಣ್ಣದ ಹೋಳಿಯ ರಂಗು ಎರಚಿ
ರಂಗು ರಂಗಿನ ಬಣ್ಣಗಳಲ್ಲಿ
ನಮ್ಮ ಜೀವನ ರಂಗಾಗಿರಲ್ಲಿ
ಈ ಬಣ್ಣದ ಹೋಳಿಯ ಹಬ್ಬ
ಹೊಸ ಚೈತನ್ಯ ತುಂಬಿ ಬರಲ್ಲಿ
ಬಣ್ಣ ಬಣ್ಣದ ಕನಸುಗಳು
ಹೊತ್ತು ತರಲಿ.

– ವಿ.ಎಂ.ಎಸ್.ಗೋಪಿ ✍
ಲೇಖಕರು, ಸಾಹಿತಿಗಳು
ಬೆಂಗಳೂರು.