ನರೇಗಾ ಕಾರ್ಮಿಕರೊಂದಿಗೆ ಪರಿಸರ ದಿನಾಚರಣೆ ಆಚರಿಸಿ ಪರಿಸರ ಜಾಗೃತಿ ಮೂಡಿಸಿದ ಶಾಸಕ ಡಾ. ಶ್ರೀ ನಿವಾಸ್ ಎನ್.ಟಿ.
ಬೆಳ್ಳಗಟ್ಟೆ ಜೂನ್.05

ಕೂಡ್ಲಿಗಿ ತಾಲೂಕಿನ ಬೆಳ್ಳಗಟ್ಟೆ ಗ್ರಾಮದ ನರಸಿಂಹಗಿರಿ ನಿಂಗವ್ವನಕಟ್ಟೆಯಲ್ಲಿ ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು ನರೇಗಾ ಕಾರ್ಮಿಕರೊಂದಿಗೆ ಶ್ರಮದಾನ ಮಾಡಿ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಉತ್ತಮ ಪರಿಸರವಿದ್ದರೆ ಮನುಷ್ಯರು ಸಹ ಆರೋಗ್ಯಕರ ಜೀವನ ನಡೆಸಬಹುದು, ಪರಿಸರ ನಾಶದಿಂದ ಮನುಷ್ಯ ತನ್ನ ಮನುಕುಲದ ನಾಶಕ್ಕೆ ಮುನ್ನುಡಿ ಬರೆಯುತ್ತಿದ್ದು ಮುಂದಿನ ದಿನಗಳಲ್ಲಾದರೂ ತಮ್ಮ ಸುತ್ತ ಮುತ್ತಲಿನ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಡುವುದರ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕು, ಮರ ಗಿಡಗಳಿದ್ದರೆ ವಾತಾವರಣದಲ್ಲಿನ ಏರುಪೇರು ಕಡಿಮೆಯಾಗಿ ಕಾಲ ಕಾಲಕ್ಕೆ ತಕ್ಕಂತೆ ಮಳೆ ಬೆಳೆಯಾಗುತ್ತದೆ,

ನಾವು ನೆಟ್ಟ ಸಸಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಸರ ಮಹತ್ವವನ್ನು ತಿಳಿಸಿದರು. ತಮ್ಮ ಕ್ಷೇತ್ರದ ಪರಿಸರ ಸಂರಕ್ಷಣೆಗೆ ಪಣ ತೊಡಲು ಜಾಗೃತಿ ಮೂಡಿಸಿ ಸ್ಪೂರ್ತಿಯಾದರು. ಗ್ರಾಮ ಪಂಚಾಯತಿ ವತಿಯಿಂದ ತಮ್ಮ ದುಡಿಮೆಗೆ ತಕ್ಕ ಕೂಲಿಯನ್ನು ಕೊಡುತ್ತಿರುವುದನ್ನು ಮಾಹಿತಿ ಪಡೆದರು. ಹಾಗೆಯೇ ಕಾರ್ಮಿಕರ ಕಷ್ಟ ಸುಖ ವಿಚಾರಿಸಿ ನಮ್ಮ ಸರ್ಕಾರ ನಿಮ್ಮ ಪರ ಕೆಲಸ ಮಾಡಲು ಬದ್ಧವಾಗಿದೆ ಎಂದರು. ಈ ಸಂಧರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರು ಒಬ್ಬಮ್ಮ ಓಬಯ್ಯ, ಪಿಡಿಒ ಹನುಮಂತಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ್, ಹುಲಿಕುಂಟೆ ನಾಗರಾಜ್, ಬೋರಯ್ಯ, ಜೈರಾಮ್, ಕಾಟ್ರಹಳ್ಳಿ ತಿಪ್ಪೇಶ್, ಮಾಜಿ ಸದಸ್ಯ ಹನುಮಂತು, ಮುಖಂಡ ಸಿದ್ದನಗೌಡ, ಸಿಬ್ಬಂದಿ ಚಂದ್ರಪ್ಪ ಸೇರಿದಂತೆ ಮೇಟಿಗಳು, ಕಾಯಕ ಮಿತ್ರರು, ನರೇಗಾ ಕಾರ್ಮಿಕರು ಇತರರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.