ಮೇಘನಾ ಎಂ.ಸಿ ಭರತನಾಟ್ಯದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ.
ಕಾನಾ ಹೊಸಹಳ್ಳಿ ಡಿಸೆಂಬರ್.17

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಭರತನಾಟ್ಯ ಸ್ಪರ್ಧೆಯಲ್ಲಿ ವೈಭವ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾನಾ ಹೊಸಹಳ್ಳಿ 9ನೇ ತರಗತಿಯ ವಿದ್ಯಾರ್ಥಿನಿ ಮೇಘನಾ ಸಿ ಪ್ರಥಮ ಸ್ಥಾನ ಪಡೆಯುವ ಮೂಲಕರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ತವಾಡ್ಗಿ ಹೊಸಪೇಟೆ ಇಲ್ಲಿ ಏರ್ಪಡಿಸಿದ್ದ 2023-24ನೇ ಸಾಲಿನ ವಿಜಯನಗರ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಮತ್ತು ಕಲೋಸ್ತವ ಕಾರ್ಯಕ್ರಮದಲ್ಲಿ ತಾಲೂಕುಗಳಿಂದ ಸ್ಪರ್ಧಿಗಳು ಭರತನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಇದರಲ್ಲಿ ಉತ್ತಮ ಪ್ರದರ್ಶನ ನೀಡಿದ ಮೇಘನಾ ಸಿ ಪ್ರಥಮ ಸ್ಥಾನ ಪಡೆದಳು. ಕಾನಾ ಹೊಸಹಳ್ಳಿ ಗ್ರಾಮದ ಎ.ಸಿ ಚೇತನ್ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಶ್ರೀಮತಿ ವಿಜಯಲಕ್ಷ್ಮಿ ಎ.ಸಿ ಇವರ ಪುತ್ರಿಯಾಗಿದ್ದು, ಕಳೆದ ವರ್ಷದಿಂದ ಶ್ವೇತ ಮಂಜುನಾಥ್ ಅವರ ಬಳಿ ಭರತನಾಟ್ಯ ಕಲಿಯುತ್ತಿದ್ದಾರೆ. ಇವರ ಸಾಧನೆಗೆ ವೈಭವ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕ ವೃಂದ ಮತ್ತು ತಾಲೂಕಿನ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು, ಯುವಕರು, ವಿದ್ಯಾರ್ಥಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ