“ಬರುವ ಭಕ್ತಾದಿಗಳಿಗೆ ಮೂಲ ಸೌಕರ್ಯ ಮರೀಚಿಕೆ”.
ಕೊಟ್ಟೂರು ಡಿಸೆಂಬರ್.15

ನಾಡಿನ ಆರಾಧ್ಯವನಾದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನಕ್ಕೆ ದಿನನಿತ್ಯ ಸಾವಿರಾರು ಭಕ್ತರು ಕೊಟ್ಟೂರು ಕ್ಷೇತ್ರಕ್ಕೆ ಬರುತ್ತಾರೆ ಆದರೆ ಬರುವ ಭಕ್ತಾದಿಗಳಿಗೆ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನವು ಮುಜರಾಯಿ ಇಲಾಖೆಯ ಸ್ವಾಧೀನದಲ್ಲಿರುವ ಈ ದೇವಸ್ಥಾನವು ‘ ಎ ‘ ಶ್ರೇಣಿಗೆ ಸೇರಿದೆ. ವರ್ಷದಲ್ಲಿ ಭಕ್ತರಿಂದ ವಾರ್ಷಿಕದಲ್ಲಿ ಕೋಟ್ಯಾಂತ ರೂಪಾಯಿ ಕಾಣಿಕೆಯಾಗಿ ಸಂಗ್ರಹವಾಗುತ್ತಿದೆ. ಅಷ್ಟು ಹಣ ಸಂಗ್ರವಾದರೂ ಬರುವ ಭಕ್ತಾದಿಗಳಿಗೆ ಮೂಲ ಸೌಕರ್ಯಗಳು ಮಾಯವಾಗಿದೆ.ಸ್ವಾಮಿಯ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವ ಭಕ್ತರಿಗೆ ನೆರಳಿನ ಆಶ್ರಯಕ್ಕಾಗಿ ದೇವಸ್ಥಾನದ ಒಂದು ಬದಿಯಲ್ಲಿ ಮಾತ್ರ ಚಾವಣಿ ನಿರ್ಮಿಸಲಾಗಿದೆ ಮತ್ತೊಂದು ಬದಿಯಲ್ಲಿ ಚಾವಣಿ ಇಲ್ಲದ ಕಾರಣ ಭಕ್ತರು ಬಿಸಿಲಿನಲ್ಲಿ ನಿಲ್ಲುವಂತ ಸ್ಥಿತಿ ಇದೆ. ವಿಶೇಷ ದಿನಗಳಲ್ಲಿ ಮಾತ್ರ ಶಾಮಿಯಾನ ವ್ಯವಸ್ಥೆ ಕಲ್ಪಿಸಲಾಗುತ್ತದೆ.ಭಕ್ತರ ವಸತಿಗಾಗಿ ದೇವಸ್ಥಾನದ ಹಿಂಭಾಗದಲ್ಲಿರುವ ಯಾತ್ರಿಕ ನಿವಾಸ ಕೊಠಡೆಗಳು ಸಾಲುತ್ತಿಲ್ಲ ಸಮೀಪದಲ್ಲಿ ಹಳೆಯ ಮುನ್ಸಿಪಾಲಿಟಿ ಕಚೇರಿ ಆವಣದಲ್ಲಿ ನಿರ್ಮಿಸುತ್ತಿರುವ ಕೊಠಡಿಗಳ ಕಾಮಗಾರಿಕೆ ಸ್ಥಗಿತ ಗೊಂಡುದ್ದರಿಂದ ಅನಿವಾರ್ಯವಾಗಿ ಭಕ್ತರು ಖಾಸಗಿ ವಸತಿ ನಿಲಯಗಳ ಮೊರೆ ಹೋಗಬೇಕಾಗಿದೆ.ದೇವಸ್ಥಾನದ ಎದುರಿಲ್ಲಿರುವ ಅಂಗಡಿಗಳು ರಸ್ತೆಯನ್ನು ಆಕ್ರಮಿಸುವುದು ಹಾಗೂ ವಾಹನಗಳ ಸವಾರರು ಅಡ್ಡದಿಡ್ಡಾಗಿ ವಾಹನಗಳನ್ನು ನಿಲ್ಲಿಸುವುದರಿಂದ ಭಕ್ತರ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಮುಖ್ಯ ರಸ್ತೆಯನ್ನು ಆಕ್ರಮಿಸುವುದರಿಂದ ಇತರೆ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಸರ್ಕಾರದ ಯೋಜನೆಗಳಾದ ಶಕ್ತಿ ಯೋಜನೆಯು ಸದುಪಯೋಗ ಪಡೆದು ಕೊಳ್ಳುತ್ತಿರುವ ಮಹಿಳೆಯರು ರಾಜ್ಯದ ವಿವಿಧ ಜಿಲ್ಲೆಗಳಿಂದ ಮಹಿಳಾ ಭಕ್ತರ ಸಂಖ್ಯೆ ಹಾಗೂ ಮಕ್ಕಳೊಂದಿಗೆ ದೇವಸ್ಥಾನಕ್ಕೆ ಬರುತ್ತಿದ್ದು ಇತ್ತೀಚಿಗೆ ಹೆಚ್ಚಾಗಿದೆ ಹೀಗಾಗಿ ದೀಡು ನಮಸ್ಕಾರ ಹಾಕುವ ಮಹಿಳಾ ಭಕ್ತರಿಗೆ ಪ್ರತ್ಯೇಕವಾದ ವಸತಿ ಗೃಹ ವೃದ್ಧರಿಗೆ ವಿಶ್ರಾಂತಿ ಪಡೆದು ಕೊಳ್ಳಲು ಆಸನಗಳ ವ್ಯವಸ್ಥೆ, ಜವಳಿ ತಗಿಸಲು ಪ್ರತ್ಯೇಕವಾದ ಸ್ಥಳ ಕುಡಿಯುವ ನೀರು ಮುಂತಾದ ವ್ಯವಸ್ಥೆಯನ್ನು ಸಮರ್ಪಕವಾಗಿ ಭಕ್ತರಿಗೆ ಕಲ್ಪಿಸಿ ಕೊಡಬೇಕೆಂದು ಕೊಪ್ಪಳದ ಪಲ್ಲವಿ ಆಗ್ರಹಿಸಿದರು.ದೂರದ ಊರಿನಿಂದ ಬರುವ ಭಕ್ತರ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಜಾಗ ಕಲ್ಪಿಸಬೇಕು ವಾಹನಗಳ ಪೂಜೆಗೆ ಪ್ರತ್ಯೇಕವಾದ ಸ್ಥಳ ನಿಗದಿ ಪಡಿಸಬೇಕೆಂದು ದಾವಣಗೆರೆಯ ಭಕ್ತಾರಾದ ವಿಶ್ವನಾಥ್ ಒತ್ತಾಯಿಸಿದರು. ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದಲ್ಲದೆ ಇರುವ ನಾಲಕೈದು ಶೌಚಾಲಗಳನ್ನು ಹಾಗೂ ಸ್ನಾನ ಗೃಹಗಳ ಬರುವ ಭಕ್ತರ ಸಂಖ್ಯೆ ಸಾಲುತಿಲ್ಲ ಇತ್ತೀಚಿಗೆ ದೇವಸ್ಥಾನ ಪಕ್ಕದಲ್ಲಿ ಆಡಳಿತ ಆ ಜಾಗವನ್ನು ದೇವಸ್ಥಾನಕ್ಕೆ ಪಡೆದು ಕೊಂಡು ಸುಜಾಜಿತ ಕೊಟ್ಟಡಿಗಳ ಹಾಗೂ ಪ್ರಸಾದ ನಿಲಯವನ್ನು ನಿರ್ಮಿಸಿದ್ದಾರೆ. ದೂರದ ಊರಿನಿಂದ ಬರುವ ಭಕ್ತರು ರಾತ್ರಿ ತಂಗಲು ಕೊಠಡಿಗಳು ಕಲ್ಪಿಸಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.
ಕೋಟ್.ಬರುವ ಭಕ್ತಾದಿಗಳಿಗೆ ಸೌಲಭ್ಯಗಳನ್ನು ನೀಡುತ್ತಿದ್ದೇವೆ ಇನ್ನೂ ಹೆಚ್ಚಿನ ಮಟ್ಟದ ಸೌಕರ್ಯ ಒದಗಿಸಲು ಶೀಘ್ರವೇ ಕ್ರಮ ಕೈಗೊಳ್ಳುತ್ತೇವೆ. ದೇವಸ್ಥಾನದ ಇ.ಓ ಕೊಟ್ಟೂರು -ಕೃಷ್ಣಪ್ಪ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು