ಸೋಲಾರ್ ಯು.ಪಿ.ಎಸ್ ಬ್ಯಾಟರಿಯಿಂದ ಬೆಂಕಿ ತಗುಲಿ ಮನೆ ಬಸ್ಮ.
ವಂದಾಲ ಫೆಬ್ರುವರಿ.2

ದೇವರ ಹಿಪ್ಪರಗಿ ತಾಲೂಕಿನ ವಂದಾಲ ಗ್ರಾಮದ ತೋಟದ ಮನೆ ಸುಟ್ಟು ಕರಕಲ ಆದ ಘಟನೆಯಲ್ಲಿ ಮನೆಯ ಮಾಲೀಕರಾದ ಸಂಗಮ್ಮಗೌಡತಿ ಬಿರಾದಾರ ಇವರ ತೋಟದ ಮನೆಯಲ್ಲಿ ಸೋಲಾರ್ ಯು.ಪಿ.ಎಸ್ ಬ್ಯಾಟರಿಯಿಂದ ಬೆಂಕಿ ತಗುಲಿದ ಘಟನೆ ನಡೆದಿದೆ.

ಹತ್ತು ಲಕ್ಷ ರೂಪಾಯಿ ವರೆಗಿನ ನಗದು ತೊಗರಿ ಮಾರಿಕೊಂಡು ಬಂದ ಹಣವನ್ನು ತಮ್ಮ ಮನೆಯಲ್ಲಿದ್ದ ಹಣ ಹಾಗೂ ಬಂಗಾರ ಬೆಳ್ಳಿ ಮತ್ತು ಕಾಳು ಕಡಿಗಳು ದಿನ ಬಳಕೆ ವಸ್ತುಗಳ ಹಾಗೂ ಬಟ್ಟೆಗಳು ಸಾಮಾನುಗಳು ಸುಟ್ಟು ಬಸ್ಮವಾಗಿದೆ, ಬಡ ರೈತರಿಗೆ ಸರ್ಕಾರ ಇವರ ಬಗ್ಗೆ ಗಮನ ಹರಿಸಬೇಕು ಎಂದು ಗ್ರಾಮದ ಜನರು ಆಗ್ರಹಿಸಿದರು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

