DSS ವತಿಯಿಂದ ಚಿಂತಾಮಣಿಯಲ್ಲಿ ವಿವಿಧ ಮಹಾನ್ ಮಹನೀಯರ ಜಯಂತಿಯನ್ನು ಆಚರಿಸಲಾಯಿತು…….!
ಚಿಕ್ಕಬಳ್ಳಾಪುರ (ಜ.31) :
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹಿರಿಯ ಹೋರಾಟಗಾರರು ಆದ ಸಂಘಂ ಎನ್ ಶಿವಣ್ಣರವರ ಜಯಂತಿ, ಅಕ್ಕ ಮಾಯಾವತಿಯವರ ಜಯಂತಿ, ಹಾಗೂ ಮಾತೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಜಯಂತಿ, ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಾತ್ಮ ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ, ರಿ. ನಂ.386/ 2020- 21 ಸಂಘಟನೆಯ ರಾಜ್ಯ ಸಂಚಾಲಕರಾದ ಡಿ ಆರ್ ಪಾಂಡುರಂಗಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಕೊಡಿಗಲ್ ರಮೇಶ್, ತರೀಕೆರೆ ಏನ್ ವೆಂಕಟೇಶ್, ಟಿ ಎಂ ಅಂಜಯ್ಯ, ಬಾಗಲಕೋಟೆಯ ಮಾರುತಿ ಬಿ ಹೊಸಮನಿ , ಜಿಲ್ಲಾ ಸಂಚಾಲಕರಾದ ಹುಲಿಕುಂಟೆ ಅಶ್ವತ್ಥಪ್ಪ, ಚಿತ್ರದುರ್ಗ ಜಿಲ್ಲಾ ಸಂಚಾಲಕರಾದ ದಿವಾಕರ್, ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕರಾದ ಪಿ ವಿಜಯಲಕ್ಷ್ಮಿ ಗೋಪಾಲ್, ಖಜಾಂಚಿಯಾದ ನವ್ಯ ಎಂಆರ್, ಹಾಗೂ ಜಾತ್ಯತೀತ ಜನತಾದಳದ ಎಸ್ ಸಿ ಘಟಕದ ರಾಜ್ಯ ಅಧ್ಯಕ್ಷರಾದ ಅಮರನಾಥ್, ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಕರಿ ಸಿದ್ದಯ್ಯ, ಆನಂದ, ರಾಜ್ಯ ಸಮಿತಿ ಸದಸ್ಯರಾದ ಎಂ ಎಸ್ ಶಂಕರ್ ವಿಜಯನಗರ ಜಿಲ್ಲಾ ಸಂಚಾಲಕರಾದ ದುರ್ಗಾ ದಾಸ್, ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುಡಿಬಂಡೆ ತಾಲೂಕು ಸಂಚಾಲಕರಾದ ರಾಜಪ್ಪ, ಗೌರಿಬಿದನೂರು ತಾಲೂಕು ಸಂಚಾಲಕರಾದ ಗಂಗಯ್ಯ, ಬಾಗೇಪಲ್ಲಿ ತಾಲೂಕು ಸಂಚಾಲಕರಾದ ಶ್ರೀನಿವಾಸ, ಚಿಕ್ಕಬಳ್ಳಾಪುರ ತಾಲೂಕು ಸಂಚಾಲಕರಾದ ಕದಿರಪ್ಪ, ಶಿಡ್ಲಘಟ್ಟ ತಾಲೂಕು ಸಂಚಾಲಕರಾದ ಅಶೋಕ, ಚಿಂತಾಮಣಿ ತಾಲೂಕು ಸಂಚಾಲಕರಾದ ಎಂ ಎನ್ ಶ್ರೀನಿವಾಸ, ಚೇಳೂರು ತಾಲೂಕು ಸಂಚಾಲಕರಾದ ಗಂಗೂಲಪ್ಪ. ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರು.