ಕಾರ್ಯಕ್ರಮ ಉದ್ಘಾಟನೆಗೆ ಬಂದ ಒಡಿಶಾ ಆರೋಗ್ಯ ಸಚಿವರ ಮೇಲೆ ಗುಂಡು ಹಾರಿಸಿದ ASI ; ಆಸ್ಪತ್ರೆಗೆ ದಾಖಲು, ಸ್ಥಿತಿ ಗಂಭೀರ..!
ಸಚಿವರ ಮೇಲೆ ಪೊಲೀಸರಿಂದಲೇ ಗುಂಡಿನ ದಾಳಿ! ಒಡಿಶಾ ಹೆಲ್ತ್ ಮಿನಿಸ್ಟರ್ ಸ್ಥಿತಿ ಚಿಂತಾಜನಕ ಸಹಾಯಕ ಪೊಲೀಸ್ ಉಪನಿರೀಕ್ಷಕ (ಎಎಸ್‌ಐ) ಗೋಪಾಲ್ ದಾಸ್ ರಿವಾಲ್ವರ್‌ನಿಂದ ಸಚಿವರ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದ ಸಚಿವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಗುಂಡಿನ ದಾಳಿಯ ಹಿಂದಿನ ಉದ್ದೇಶದ ಬಗ್ಗೆ ಮಾಹಿತಿ ಇಲ್ಲ. ಆದರೀಗ ಎಎಸ್‌ಐ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಭುವನೇಶ್ವರ (ಜ.29):
ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ (Odisha’s Health and Family Welfare Minister) ನಬಾ ಕಿಶೋರ್ ದಾಸ್ (Naba Kishore Das) ಮೇಲೆ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (Assistant Sub-Inspector) ಗುಂಡು ಹಾರಿಸಿರುವ ಘಟನೆ ಝಾರ್ಸುಗುಡಾ (Jharsuguda) ಜಿಲ್ಲೆಯಲ್ಲಿ ನಡೆದಿದೆ. ಎದೆಗೆ ಗುಂಡು ತಗುಲಿ ತೀವ್ರವಾಗಿ ಗಾಯಗೊಂಡಿದ್ದ ನಬಾ ದಾಸ್ ಅವರನ್ನು ಇದೀಗ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಬಾ ಕಿಶೋರ್ ದಾಸ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಇದೀಗ ಅವರನ್ನು ಜಾರ್ಸುಗುಡಾ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗುತ್ತಿದೆ. ನಂತರ ಅಲ್ಲಿಂದ ನಬಾ ದಾಸ್ ಅವರನ್ನು ವಿಮಾನದ ಮೂಲಕ ಭುವನೇಶ್ವರಕ್ಕೆ (Bhubaneswar) ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ (Apollo hospital) ಸ್ಥಳಾಂತರಿಸಲಾಗುವುದು.
ಸಚಿವರ ಮೇಲೆ ಎಎಸ್‌ಐ ಗುಂಡಿನ ದಾಳಿ :
ಗಾಂಧಿ ಚೌಕದಲ್ಲಿ ಸಚಿವರು ತಮ್ಮ ಕಾರಿನಿಂದ ಇಳಿಯುತ್ತಿದ್ದಂತೆಯೇ ಪೊಲೀಸ್ ಅಧಿಕಾರಿ ಇದ್ದಕ್ಕಿದ್ದಂತೆ ನಾಲ್ಕೈದು ಬಾರಿ ಗುಂಡುಗಳನ್ನು ಹಾರಿಸಿದ್ದಾನೆ. ಜಿಲ್ಲೆಯ ಬ್ರಜರಾಜನಗರ ಪಟ್ಟಣದಲ್ಲಿ ಸಚಿವರು ಸಭೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಗುಂಡು ಹಾರಿಸಿದ ಪೊಲೀಸ್ ಅಧಿಕಾರಿಯನ್ನು ಎಎಸ್‌ಐ ಗೋಪಾಲ್ ದಾಸ್ ಎಂದು ಗುರುತಿಸಲಾಗಿದ್ದು, ಗುಂಡಿನ ದಾಳಿ ನಡೆಸಿರುವುದರ ಹಿಂದಿನ ಉದ್ದೇಶವೇನು ಎಂದು ಇನ್ನೂ ತಿಳಿದುಬಂದಿಲ್ಲ.ಇಂದಿನ ಕಾರ್ಯಕ್ರಮದ ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳಲು ಎಎಸ್‌ಐ ನಿಯೋಜಿಸಲಾಗಿತ್ತು. ಆದರೆ ಗುಂಡಿನ ದಾಳಿ ವೇಳೆ, ಎಎಸ್‌ಐ ಸಚಿವರ ಹತ್ತಿರದಲ್ಲಿಯೇ ಇದ್ದರು.
Moment When Odisha Health Minister #NabaDas Shot. pic.twitter.com/jgBv3NrNPf
— Sandeep Panwar (@tweet_sandeep) January 29, 2023