ಹಿಂದೂ ಮಹಾ ಗಣಪತಿಯ ಬೃಹತ್ ಶೋಭಾ ಯಾತ್ರೆ ಹಾಗೂ ಭವ್ಯ ಮೆರವಣಿಗೆ ಯೊಂದಿಗೆ – ಗಣಪತಿ ವಿಸರ್ಜನೆ.
ತಾಳಿಕೋಟೆ ಸ.15

ತಾಳಿಕೋಟೆ ತಾಲೂಕಿನಲ್ಲಿ ಇಂದು ಹಿಂದೂ ಮಹಾ ಗಣಪತಿಯ ಬೃಹತ ಶೋಭ ಯಾತ್ರೆ ಹಾಗೂ ಭವ್ಯ ಮೆರವಣಿಗೆ ಪ್ರತಿ ವರ್ಷದಂತೆ ಈ ವರ್ಷದ ಶ್ರಾವಣ ಮಾಸದಲ್ಲಿ ಬರುವ ಗಣೇಶ ಚತುರ್ಥಿ ಯೆಂದು ಗಣಪತಿ ವಿಗ್ರಹ ಸ್ಥಾಪನೆ ಮಾಡಲಾಗುವದು. ವಿಶೇಷ ಪೂಜೆ ಹಾಗೂ ಮಹಾ ಅಭಿಷೇಕ ಮಾಡಿ ಸ್ಥಾಪನೆ ಮಾಡಲಾಗುವುದು 9 ನೇ. ದಿನ ವಿಸರ್ಜನೆ ಮಾಡಲಾಗಿದೆ 9 ದಿನಗಳ ಕಾಲ ಬೆಳಿಗ್ಗೆ ಪೂಜೆ ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಸಂಜೆ ಸಾoಸ್ಕೃತಿಕ ಕಾರ್ಯಕ್ರಮ ಮಹಾ ಪೂಜೆ 9 ನೇ. ದಿನದಂದು ಮಹಾರುದ್ರ ಅಸ್ತೋತ್ರ ನಾಮಾವಳಿ ಮಾಡಿ ಸಭೆ ಮಾಡುವರು.

ಈ ಸಭೆಯಲ್ಲಿ ಶ್ರೀ ಷ ಬ್ರ ಗುರುಲಿಂಗ ಶಿವಚಾರ್ಯ ಮಹಾ ಸ್ವಾಮಿಗಳು ಗುಂಡಕನಾಳ ಅವರು ಅಧ್ಯಕ್ಷತೆ ವಹಿಸಿದರು ಕೆಸರಟ್ಟಿಯ ಶ್ರೀಗಳು. R S ಪಾಟೀಲ ಕುಚಬಳ ಬಿಜೆಪಿ ಮುಖಂಡರು ಹಿಂದೂ ಮಹಾ ಗಣಪತಿಯ ಸಕಲ ಸದ್ಭಕ್ತರು ಮಂಡಳಿಯ ಜನರು ಭವ್ಯ ಶೋಭಾ ಯಾತ್ರೆಯಲ್ಲಿ ಭಾಗವಹಿಸಿದರು. ಗಣಪತಿಯು ಸನಾತನ ಹಿಂದೂ ಧರ್ಮದ ಸಂಕೇತವೆಂದು ಷ.ಬ್ರ ಗುರುಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು ಮಾತನಾಡಿದರು. ಸಭೆಯ ನಂತರ ಭವ್ಯ ಶೋಭಾ ಯಾತ್ರೆಗೆ ಚಾಲನೆ ನೀಡಿದರು.

ಶೋಭಾ ಯಾತ್ರೆಯಲ್ಲಿ ಪುರವಂತರು ಸೇವೆ ಬಾಜಾ ಭಜಂತ್ರಿ ಡೊಳ್ಳು ಕುಣಿತ ಗೊಂಬೆಗಳ ಕುಣಿತ ಹಲಗೆ ಇನಿತರ ವಾದ್ಯ ಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ಶೋಭಾ ಯಾತ್ರೆ ವಿಜೃಂಭಣೆಯಿಂದ ನಡೆಯುವುದು ಸಮಸ್ತ ಹಿಂದೂ ಮಹಾ ಗಣಪತಿ ಮಹಾ ಮಂಡಳಿ ಹಾಗೂ ಹಿಂದೂ ಬಾಂಧವರು ಸಕಲ ಸದ್ಭಕ್ತರು ಸುತ್ತ ಮುತ್ತಲಿನ ಗ್ರಾಮಸ್ಥರು ಈ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶರಣಯ್ಯ.ಈ.ಬೇನಾಳಮಠ.ಕಲಕೇರಿ