ತಂಬಾಕು ರಹಿತ ಜೀವನ ಉತ್ತಮ ಆರೋಗ್ಯಕ್ಕೆ ಸೋಪಾನ.
ಸಂಗಮ ಕ್ರಾಸ್ ಸ.18

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ ಉಪ ಕೇಂದ್ರ ಬೆನಕಟ್ಟಿ ವ್ಯಾಪ್ತಿಯ ಸಂಗಮ ಕ್ರಾಸ್ ದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ತಯಾರಿಕೆ ನಿಷೇಧ ಕಾನೂನು ಜಾಗೃತಿ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ತಂಬಾಕು ಉತ್ಪನ್ನಗಳ ಮಾರಾಟ ತಯಾರಿಕೆ ಕಾನೂನು ಪ್ರಕಾರ ಅಪರಾಧ.18 ವರ್ಷ ದೊಳಿಗಿನವರು ತಂಬಾಕು ಉತ್ಪನ್ನಗಳ ಮಾರಾಟ ತಯಾರಿಕೆ ನಿಷೇಧ ಕಾನೂನು ಜಾರಿಯಲ್ಲಿದೆ. ತಂಬಾಕು ಉತ್ಪನ್ನಗಳಾದ ಸಿಗರೇಟು ಗುಟ್ಕಾ ತಂಬಾಕು ಸೇವನೆ ಅಪಾಯಕಾರಿ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಇದರಿಂದ ನರ ದೌರ್ಬಲ್ಯ, ರಕ್ತದೊತ್ತಡ ರಕ್ತ ಹೀನತೆ ಮಾನಸಿಕ ಒತ್ತಡ ಅನೇಕ ಮಾರಣಾಂತಿಕ ಕಾಯಿಲೆಗಳು ಆವರಿಸಿ ಮಾನವನನ್ನು ನರಕ ಕೂಪಕ್ಕೆ ತಳ್ಳಿ ನರಳುವಂತೆ ಮಾಡುತ್ತದೆ.ಆದ್ದರಿಂದ ತಂಬಾಕು ಉತ್ಪನ್ನಗಳ ಮಾರಾಟ ತಯಾರಿಕೆ ನಿಷೇಧ ಕಾನೂನು ಪಾಲನೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಆದ್ಯತೆ ನೀಡಬೇಕು.”ತಂಬಾಕು ರಹಿತ ಜೀವನ ಆರೋಗ್ಯಕರ ಜೀವನ ಶೈಲಿ” ಆರೋಗ್ಯವಂತ ಕುಟುಂಬ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯ ಹಾಗೂ ತಂಬಾಕು ಉತ್ಪನ್ನಗಳ ಮಾರಾಟ ತಯಾರಿಕೆ ನಿಷೇಧ ಕಾನೂನು ಸಾರ್ವಜನಿಕ ವಲಯಗಳಲ್ಲಿ ಮುಕ್ತ ಮಾಡಲು ಶ್ರಮಿಸಬೇಕು ಎಂದರು. ತಂಬಾಕು ಉತ್ಪನ್ನಗಳ ಮಾರಾಟ ತಯಾರಿಕೆ ನಿಷೇಧ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಸಂಗಮ ಕ್ರಾಸ್ ವ್ಯಾಪಾರಸ್ಥರಾದ ಸಂತೋಷ ಅಂಗನವಾಡಿ, ಬಸಯ್ಯ ಪೂಜಾರಿ, ಮಾರುತಿ ಕೋಟಿ, ಕಾಸಪ್ಪ ಕಂದಗಲ್, ಪರಸಪ್ಪ ಕಾರಜೋಳ, ಬಸಪ್ಪ ಬಡಿಗೇರ ಸಂಗಮಕ್ರಾಸ್ ವ್ಯಾಪಾರಸ್ಥರು ಕಿರುಕುಳ ವ್ಯಾಪಾರಸ್ಥರು ವಿವಿಧ ಗ್ರಾಮಗಳ ಗ್ರಾಹಕರು ಮುಖಂಡರು ಯುವಕರು ಭಾಗವಹಿಸಿದ್ದರು.