ಮುನಿರತ್ನ ರಾಜಿನಾಮೆ ನೀಡಲಿ ಕಾಂಗ್ರೇಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಮಾಧ್ಯಮ ವಕ್ತಾರ – ಸಂಜಯ್ ದೊಡಮನಿ ಒತ್ತಾಯ.

ಗದಗ ಸ.18

ಇಡೀ ಹೆಣ್ಣು ಕುಲಕ್ಕೆ ಅಪಮಾನ ಮಾಡಿರುವ ಹಾಗೂ ಜಾತಿ ಜಾತಿಗಳ ನಡುವೆ ಸಂಘರ್ಷ ತಂದಿಟ್ಟು ಹೀನವಾಗಿ ಮಾತನಾಡಿ ಜಾತಿ ನಿಂದನೆ ಮಾಡಿದ ಬೆಂಗಳೂರಿನ ಶಾಸಕ ಮುನಿರತ್ನ ಅವರ ರಾಜೀನಾಮೆಯನ್ನು ಬಿಜೆಪಿ ಹೈಕಮಾಂಡ್ ತೆಗೆದುಕೊಂಡು ಶಾಸಕ ಸ್ಥಾನದಿಂದ ವಜಾ ಗೊಳಿಸಬೇಕೆಂದು ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಮಾಧ್ಯಮ ವಕ್ತಾರರು ಸಂಜಯ್ ದೊಡ್ಡಮನಿ ಒತ್ತಾಯಿಸಿದಾರೆ. ಈ ಕುರಿತು ಪತ್ರಿಕೆಯ ಪ್ರಕಟಣೆಯಲ್ಲಿ ತಿಳಿಸಿರುವ ಅವರು ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರು ಅತ್ಯಂತ ಕೀಳು ಹೀನಾಯ ಪದಗಳನ್ನು ಬಳಸಿ ಇಡೀ ಹೆಣ್ಣು ಸಮುದಾಯಕ್ಕೆ ಕಳಂಕ ತಂದಿದ್ದಲ್ಲದೆ ಪರಿಶಿಷ್ಟ ಜಾತಿಯ ಜನಾಂಗಕ್ಕೆ ಅವಮಾನ ಎಸೆಗಿ ಹೊಲೆಯ ಎಂಬ ಪದವನ್ನು ಬಳಸಿ ಸಮದಾಯಕ್ಕೆ ಬಹಳಷ್ಟು ನೋವನ್ನು ಉಂಟು ಮಾಡಿದ್ದರೂ ಅವರದೇ ಪಕ್ಷದ ಎಸ್.ಸಿ ಮೋರ್ಚಾದ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಅವರು ಖಂಡಿಸಿದೆ ಇರುವುದು ನಾಚಿಕೆಗೇಡು ಸಂಗತಿ ಹೀಗಾಗಿ ಚಲವಾದಿ ನಾರಾಯಣಸ್ವಾಮಿ ನೈತಿಕ ಹೊಣೆ ಹೊತ್ತು ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.ಭ್ರಷ್ಟಾಚಾರಿಯಾಗಿರುವ ಮುನಿರತ್ನ ಅವರು ಇದಕ್ಕೂ ಮೊದಲು ಬಹಳಷ್ಟು ದಲಿತರನ್ನು ಹೀನ ಸ್ಥಿತಿಯಲ್ಲಿ ನಡೆದು ಕೊಂಡಿದ್ದು ಎಂದು ಹೇಳಲಾಗಿದೆ. ಸರಕಾರ ಇವರು ಸಚಿವರಾಗಿದ್ದಾಗ 2019 ರಿಂದ 2023 ರವರೆಗೆ ಕೆ.ಕೆ.ಆರ್.ಡಿ.ಬಿಯಲ್ಲಿ ಸುಮಾರು 200 ಕೋಟಿ ಹಗರಣ ಮಾಡಿದ್ದು ಅವರ ಬಗ್ಗೆ ಸೂಕ್ತ ತನಿಖೆಯು ಸಹ ನಡೆಯ ಬೇಕಾಗಿದೆ ಅಷ್ಟೇ ಅಲ್ಲದೆ ಅವರ ಮೇಲಿರುವ ವೋಟ್ ಕಾರ್ಡ್ ಪ್ರಕರಣವನ್ನು ಮತ್ತೊಮ್ಮೆ ತನಿಖೆಗೆ ಒಳಪಡಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕಿದೆ ಹಾಗೂ ಅವರು ಶಾಸಕ ಸ್ಥಾನದಲ್ಲಿ ಇರಲು ಅರ್ಹರಲ್ಲ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಎಚ್ಚೆತ್ತು ಶಾಸಕ ಮುನಿರತ್ನ ಅವರನ್ನು ಸ್ಪಂದಿಸಿರುವುದನ್ನು ಸ್ವಾಗತಿಸುತ್ತಾ ಇವರ ಮೇಲೆ ಇರುವ ಎಲ್ಲಾ ಆರೋಪಗಳನ್ನು ಮತ್ತು ಹಗರಣದ ಪ್ರಕರಣಗಳನ್ನು ತನಿಖೆ ನಡೆಸಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ. ಎಫ್.ತೋಟಗುಂಟಿ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button