ಭಾರತದ ಅಪ್ರತಿಮ ಇಂಜಿನೀಯರ್ ಸರ್ ಎಂ. ವಿಶ್ವೇಶ್ವರಯ್ಯ – ಜಿ.ಎ ನಾಗೇಂದ್ರಪ್ಪ.
ತರೀಕೆರೆ ಸ.18

ಬಡತನದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮಾಡಿ ವಿಶ್ವ ಕಂಡ ಅತ್ಯುತ್ತಮ ಇಂಜಿನಿಯರ್ ಎಂದು ಪ್ರಖ್ಯಾತರಾದವರು ಸರ್ ಎಂ.ವಿಶ್ವೇಶ್ವರಯ್ಯ. ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರಾದ ಜಿ.ಎ ನಾಗೇಂದ್ರಪ್ಪ ಹೇಳಿದರು. ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ತರೀಕೆರೆ ತಾಲೂಕ ಸಿವಿಲ್ ಇಂಜಿನಿಯರ್ಸ್ ಅಸೋಸಿಯನ್ ಏರ್ಪಡಿಸಿದ್ದ 8 ನೇ. ವರ್ಷದ ಇಂಜಿನಿಯರ್ಸ್ ದಿನಾಚರಣೆಯನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಚಿಕ್ಕಮಗಳೂರು ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯನ್ ಮಾಜಿ ಅಧ್ಯಕ್ಷರಾದ ನಾಗೇಂದ್ರ ಎಂ.ಎ ರವರು ಮಾತನಾಡುತ್ತಾ ಹಸಿರು ಕ್ರಾಂತಿ ನೀರಾವರಿ ಯೋಜನೆಗಳನ್ನು ಮಾಡಿ ರೈತ ಸ್ನೇಹಿ ಹಾಗಿದ್ದರು ಸರ್ ಎಂ.ವಿಶ್ವೇಶ್ವರಯ್ಯ. ಅವರು ಭಾರತವಲ್ಲದೆ ಬೇರೆ ಬೇರೆ ದೇಶಗಳಲ್ಲಿಯೂ ಸಹ ಅಪಾರ ಸೇವೆ ಮಾಡಿದ್ದಾರೆ. ಹೈದರಾಬಾದಿನ ಮೂಸಾ ನದಿಗೆ ಅಣೆಕಟ್ಟು ನಿರ್ಮಾಣ ಮಾಡಿಸಿದರು. ಕೆ.ಆರ್ ಎಸ್ ಡ್ಯಾಮ್ ನ ಎತ್ತರವನ್ನು 80 ಅಡಿ ಎತ್ತರದಿಂದ 130 ಅಡಿ ಎತ್ತರಕ್ಕೆ ಏರಿಸಿ ಡಿಸೈನ್ ಮಾಡಿದರು. ಈ ಕುರಿತು ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್ ನಲ್ಲಿ ಕೇಸು ದಾಖಲಿಸಿತು, ಸ್ವತಃ ಸರ್ ಎಂ.ವಿಶ್ವೇಶ್ವರಯ್ಯ ನವರೇ ಲಾಯರ್ ಆಗಿ ವಾದ ಮಾಡಿ ಕೇಸು ಗೆದ್ದು ಮೈಸೂರು ಕೆ.ಆರ್.ಎಸ್ ಡ್ಯಾಮ್ ನಿರ್ಮಾಣಕ್ಕೆ ನಾಂದಿ ಹಾಡಿದರು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ಡಿ.ವಿ ಗುಂಡಪ್ಪ, ಮಿರ್ಜಾ ಇಸ್ಮಾಯಿಲ್ ರವರೊಂದಿಗೆ ಒಡನಾಟ ಹೊಂದಿದ್ದರು. 1912 ರಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದ್ದರು.

ಮತ್ತು ಮೊಟ್ಟ ಮೊದಲ ಬಾರಿಗೆ ಮೈಸೂರಿನಲ್ಲಿ ಸಿ.ವಿ.ಲ್ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ ಮೈಸೂರು ಯುನಿವರ್ಸಿಟಿ, ಭದ್ರಾವತಿಯ ವಿ.ಐ.ಎಸ್.ಎಲ್ ಉಕ್ಕಿನ ಕಾರ್ಖಾನೆ , ಕನ್ನಡ ಸಾಹಿತ್ಯ ಪರಿಷತ್, ಚರ್ಮದ ಕೈಗಾರಿಕೆ ಮತ್ತು ಗ್ರಂಥಾಲಯಗಳನ್ನು ತೆರೆಯಲು ಶ್ರಮ ವಹಿಸಿದ್ದರು. ವಿಶ್ವದಲ್ಲಿಯೇ ಅಗ್ರಗಣ್ಯ ಇಂಜಿನಿಯರ್ ಆಗಿದ್ದರು ಎಂದು ಹೇಳಿದರು. ದಿ ರಾಮಕೋ ಸಿಮೆಂಟ್ಸ್ ಲಿ, ನ ಡಿ.ಜಿ.ಎಂ ಶಶಾಂಕ್ ಶರ್ಮಾ ಮಾತನಾಡಿ ಸರ್ ಎಂ.ವಿಶ್ವೇಶ್ವರಯ್ಯ ಒಬ್ಬ ವ್ಯಕ್ತಿ ಸಮಾಜದ ಅಗ್ರ ಗಣ್ಯ ಕೆಲಸ ಮಾಡಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದ್ದಾರೆ ಎಂದು ಹೇಳಿದರು. ಪುರಸಭಾ ಅಧ್ಯಕ್ಷರಾದ ವಸಂತ್ ಕುಮಾರ್ ಕವಾಲಿ ರವರು ಸರ್ ಎಂ ವಿಶ್ವೇಶ್ವರಯ್ಯ ರವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ತರೀಕೆರೆಯ ಎಲ್ಲಾ ಸಿವಿಲ್ ಇಂಜಿನಿಯರ್ಸ್ ಗಳಿಗೆ ಶುಭ ಕೋರಿದರು. ಉಪಾಧ್ಯಕ್ಷರಾದ ಗಿರಿಜಾ ಪ್ರಕಾಶ್ ಮತ್ತು ಜಿಲ್ಲಾ ಅಧ್ಯಕ್ಷರಾದ ಜಿ ರಮೇಶ್, ಸದ್ವಿದ್ಯಾ ಶಾಲೆಯ ಮುಖ್ಯ ಉಪಾಧ್ಯಾಯರದ ಹರ್ಷಿಣಿ , ಡಿಪ್ಲೋಮೋ ಕಾಲೇಜಿನ ಪ್ರಾಚಾರ್ಯರಾದ ಎಲ್ಎಸ್ ಮಂಜುನಾಥ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ನವೀನ್ ಜಿ ನಾಯಕ್ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಟ್ಟಡ ಕಾರ್ಮಿಕರಿಗೆ ಹಾಗೂ ಮಾಜಿ ಸೈನಿಕರಾದ ಸಿದ್ದಪ್ಪರವರಿಗೆ ಸ್ವಚ್ಛತಾ ಕರ್ಮಚಾರಿ ಆದ ಸುರೇಶ್ ರವರಿಗೆ ಸನ್ಮಾನಿಸಲಾಯಿತು. ಸದ್ವಿದ್ಯಾ ಶಾಲೆಯ ಮಕ್ಕಳಿಂದ ಗುಂಪು ನೃತ್ಯ ಏರ್ಪಡಿಸಲಾಗಿತ್ತು, ಹಾಗೂ ಶಿವಮೊಗ್ಗದ ಮಲೆನಾಡು ಬ್ರದರ್ ಆರ್ಕೆಸ್ಟ್ರಾದ ಸೈಯದ್ ಮತ್ತು ಪವಿತ್ರ ರವರಿಂದ ಚಲನ ಚಿತ್ರ ಗೀತೆಗಳು ಹಾಡಿಸಲಾಯಿತು, ಎಲ್ಲಾ ಸಿವಿಲ್ ಇಂಜಿನಿಯರ್ಸ ಗಳಿಗೆ ಸ್ಮರಣಿಕೆ ನೀಡಲಾಯಿತು. ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ಟಿ ಆರ್ ಮುರಳಿ, ಉಪಾಧ್ಯಕ್ಷರಾದ ವಸಂತ್ ಕುಮಾರ್, ಎಂಎಸ್ ರವಿಕುಮಾರ್, ಯಶವಂತ್ ಉಪಸ್ಥಿತರಿದ್ದು ಗೋಪಾಲಕೃಷ್ಣರವರು ಸ್ವಾಗತಿಸಿ ನಿರೂಪಿಸಿದರು ಚೇತನ್ ರವರು ವಂದನಾರ್ಪಣೆ ಮಾಡಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕ ಮಗಳೂರ