ಡಾ, ವಿಷ್ಣುವರ್ಧನ್ ರವರು ಅಭಿಮಾನಿಗಳ ಮನದಲ್ಲಿ – ಎಂದಿಗೂ ಜೀವಂತ ಅಧ್ಯಕ್ಷ ಎ.ಸಿ ಚೇತನ್.
ಖಾನಾ ಹೊಸಹಳ್ಳಿ ಸ.18

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಪಟ್ಟಣದ ಜೇಡರ ದಾಸಿಮಯ್ಯ ವೃತ್ತದ ಬಳಿ ಡಾ. ವಿಷ್ಣುವರ್ಧನ್ ಅವರ 74 ನೇ ವರ್ಷದ ಜನ್ಮದಿನದ ಪ್ರಯುಕ್ತ ಕೇಕ್ ಕತ್ತರಿಸುವುದರ ಮೂಲಕ ಮತ್ತು ಹಣ್ಣುಗಳನ್ನು ಹಂಚಿದರು. ನಂತರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎ.ಸಿ.ಚೇತನ್ ಮಾತನಾಡಿ ಕನ್ನಡ ಚಿತ್ರರಂಗ ಕಂಡ ಮೇರು ನಟ ತಮ್ಮ ಕಲಾವಂತಿಕೆ ಮತ್ತು ವ್ಯಕ್ತಿಗಳಿಂದ ಜನ ಮಾನಸದಲ್ಲಿ ಶಾಶ್ವತ ಸ್ಥಾನ ಪಡೆದು ಕೊಂಡು ಕರುನಾಡಿನ ಜಮೀನ್ದಾರ, ಸಾಹಸಸಿಂಹ, ವಂಶವೃಕ್ಷ, ಆಪ್ತಮಿತ್ರ, ಯಜಮಾನ, ಭೂತಯ್ಯನ ಮಗ ಅಯ್ಯ, ಮುತ್ತಿನ ಹಾರ, ಸೂರಪ್ಪ, ದಿಗ್ಗಜರು, ಸೇರಿದಂತೆ ಅನೇಕ ಚಲನ ಚಿತ್ರಗಳನ್ನು ನಟಿಸಿದ್ದಾರೆ. ಎಂದು ಇದೇ ಸಂದರ್ಭದಲ್ಲಿ ಸ್ಮರಿಸಿದರು, ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎ.ಸಿ ಚೇತನ್, ನಾಗೇಶ್ ಎಸ್ ಕೆ, ನಾಗೇಶ್ ಎನ್ಎಂ, ಎಟಿ,ಬಸವರಾಜ್, ಡಿಕೆ ಶ್ರೀಧರ,ವೀರೇಶ್,ಬಾಬು, ಚಂದನ್, ಜಾಕಿ ಶಿವರಾಂ, ಅನಿಲ್, ಹಣ್ಣು ಹಂಚುವುದರ ಮೂಲಕ ಸಂಭ್ರಮಿಸಿದರು , ಸೇರಿದಂತೆ ಡಾ. ವಿಷ್ಣುವರ್ಧನ್ ರವರ ಅಭಿಮಾನಿಗಳು, ಯುವಕರು ಸೇರಿದಂತೆ ಸಾರ್ವಜನಿಕ ರೈತರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ