ನಿಯಮ ಮೀರುತ್ತಿವೆ ಮದ್ಯದಂಗಡಿಗಳು ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ – ಜಾಂಭವ ಯುವ ಸೇನಾ ಸಂಘಟನೆಯಿಂದ ಆರೋಪ.
ಬಸವನ ಬಾಗೇವಾಡಿ ಸ.23

ಹಳ್ಳಿಗಳಲ್ಲಿ ಹಾಗೂ ರಸ್ತೆ ಬದಿ ಡಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಪರವಾನಗಿ ಪಡೆದ ಮದ್ಯ ಮಾರಾಟ ಸನ್ನದದಾರು ನಿಯಮಗಳು ಉಲ್ಲಂಘನೆ ಮಾಡುತ್ತಿದ್ದು. ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ. ತಪ್ಪಿತಸ್ಥರ ವಿರುದ್ದ ಕೂಡಲೇ ಕ್ರಮ ತೆಗೆದು ಕೊಳ್ಳಬೇಕು ಎಂದು ಜಾಂಭವ ಯುವ ಸೇನಾ ಸಂಘಟನೆಯ ವಿಜಯಪುರ ಜಿಲ್ಲಾ ಗೌರವ ಅಧ್ಯಕ್ಷರಾದ ಮಹಾಂತೇಶ ಹಾದಿಮನಿ ಆಗ್ರಹಿಸಿದ್ದಾರೆ.ಬಸವನ ಬಾಗೇವಾಡಿ ವಲಯ ವ್ಯಾಪ್ತಿಯಲ್ಲಿ ಬರುವ ಸಿಎಲ್2, ಸಿಎಲ್9, ಸಿಎಲ್7 ಪರವಾನಿ ಪಡೆದು ಕೊಂಡಿರುವ ಸನ್ನದುದಾರರು ರಾಜಾರೋಷವಾಗಿ ಚಿಲ್ಲರೆ ವ್ಯಾಪಾರ ನಡೆಸುತ್ತಿದ್ದು. ಬಾರ್ ಮಾಲೀಕರು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಅಕ್ರಮ ಮಧ್ಯ ಮಾರಾಟದ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರು ಕ್ರಮಕ್ಕೆ ಮುಂದಾಗುತ್ತಿಲ್ಲ. ಎಂದು ಆರೋಪಿಸಿದ್ದಾರೆ.ಈ ಕುರಿತು ವಿಜಯಪುರ ಜಿಲ್ಲಾ ಅಬಕಾರಿ ಅಧೀಕ್ಷಕರು (SP) ರವರಿಗೆ ಹಾದಿಮನಿ ದೂರು ನೀಡಿದ್ದಾರೆ. ವೈನ್ ಶಾಪ್ ಮತ್ತು ಬಾರಗಳಿಂದ ಖರೀದಿಸಿ ಪಾನಶಾಪ್, ಕಿರಾಣಿ ಅಂಗಡಿ, ಚಾಹಾ ಹೋಟೆಲಗಳಲ್ಲಿ ಮಾರಾಟ ಮಾಡುವ ದಂದೆ ಬಸವನ ಬಾಗೇವಾಡಿ ವಲಯ ವ್ಯಾಪ್ತಿಯ ಎಲ್ಲಾ ಕಡೆ ವ್ಯಾಪಾಕವಾಗಿ ನಡೆಯುತ್ತಿದ್ದು. ಬಸವಣ್ಣನ ಜನ್ಮ ಸ್ಥಳವಾದ ಇಂಗಳೇಶ್ವರ ಗ್ರಾಮದ ಬಸ್ ನಿಲ್ದಾಣ ಹತ್ತಿರ ಹಾಗೂ ಎಲ್ಲಾ ಗ್ರಾಮಗಳಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದು. ಹಲವು ಕುಟುಂಬಗಳು ಬೀದಿಗೆ ಬೀಳುತ್ತಿವೆ. ಕೌಟುಂಬಿಕ ಹಾಗೂ ಸಾಮಾಜಿಕ ಕಲಹಗಳು ಹೆಚ್ಚಾಗಿ ಗ್ರಾಮಗಳಲ್ಲಿ ಅಶಾಂತಿ ಮೂಡುತ್ತಿದೆ ಎಂದಿದ್ದಾರೆ.ಕಾನೂನು ಬಾಹಿರವಾಗಿ ಮದ್ಯ ಮಾರಾಟದಲ್ಲಿ ತೊಡಗಿರುವವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕಾದ ಬಸವನ ಬಾಗೇವಾಡಿ ವಲಯ ಅಬಕಾರಿ ನಿರೀಕ್ಷಕರು ಮೌನವಹಿಸಿದ್ದು. ಈ ಅವ್ಯವಹಾರಗಳಿಗೆ ಅವರೇ ಸಾಥ್ ನೀಡುತ್ತಿದ್ದಾರೆ.ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ.ಜಿಲ್ಲಾ ಅಬಕಾರಿ ಅಧಿಕಾರಿಗಳು ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಹಳ್ಳಿಗಳಿಗೆ ಮದ್ಯ ಸರಬರಾಜು ಮಾಡುತ್ತಿರುವ ಬಾರ ಮತ್ತು ವೈನ್ ಶಾಪ್ ವಿರುದ್ಧ ಕ್ರಮ ಕೈಗೊಂಡು ಪರವಾನಿಗೆ ರದ್ದು ಪಡಿಸಬೇಕು ಎಂದು ಸುದ್ದಿ ಮಾಧ್ಯಮ ಮೂಲಕ ಒತ್ತಾಯಿಸಿದ್ದಾರೆ.
ವರದಿ:ಮಹಾಂತೇಶ.ಹಾದಿಮನಿ.ವಿಜಯಪುರ