ರೈತನ ಬೆನ್ನೆಲುಬು ಆದ ಸಹಕಾರಿ ಸಂಘ.
ಯಲಗೋಡ ಸ.23

ಗ್ರಾಮೀಣ ಪ್ರದೇಶಗಳಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಗಳು ರೈತನ ಬೆನ್ನೆಲುಬು ವಾಗಿದೆ ಎಂದು ಶ್ರೀ ಶ್ರೀ ಶ್ರೀ ನಿಂಗಯ್ಯಮಹಾ ಸ್ವಾಮೀಜಿ ಯವರು ಹೇಳಿದರು, ಸಮೀಪದ ಯಲಗೋಡ ಗ್ರಾಮದಲ್ಲಿ ಸೋಮವಾರ ಜರುಗಿದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ೨೦೨೩/೨೪ ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಶ್ರೀ ರಾಜಶೇಖರ ಶ್ರೀಗಳು, ರೈತರಿಗೆ ಹಿತ ವಚನ ನೀಡಿದರು, ಕೃಷಿ ಸಹಕಾರಿ ಸಂಘಗಳು ರೈತ ಸಮುದಾಯಕ್ಕೆ ಸೇರಿದ ಸಂಸ್ಥೆಗಳು ಇವುಗಳ ಲಾಭ ಹಾನಿ ಸೇರಿದಂತೆ ಪ್ರತಿಯೊಂದು ಚಟುವಟಿಕೆಗಳ ಬಗ್ಗೆ ಅರಿಯುವುದು ರೈತರ ಜವಾಬ್ದಾರಿ ಯಾಗಿದೆ, ಸಹಕಾರಿ ಸಂಘ ನಮ್ಮ ಸಂಘ ಎಂದು ರೈತರು ಅರಿಯಬೇಕು ಈ ಸಂಘ ದಿಂದ ರೈತರಿಗೆ ಬಹಳ ಅನುಕೂಲವಾಗಿದೆ, ಸ್ವಸಹಾಯ ಗುಂಪು ನವರಿಗೆ ವಿವಿಧ ಉದ್ಯೋಗಕಾಗಿ ಈ ಸಂಘದಲ್ಲಿ ಸಾಲ ನೀಡುತ್ತಾರೆ, ಅದನ್ನು ಉಪಯೋಗ ಪಡೆದು ಕೊಳ್ಳಬೇಕು, ಸಹಕಾರಿ ಸಂಘದ ನಿರ್ದೇಶಕರಾದ ಬಾಬು ಕ್ಯಾತನಾಳ, ಸಾಯಬ್ಣ ಬಾಗೇವಾಡಿ, ಯವರು ಹೇಳಿದರು, ರೈತರ ಸಮಸ್ಯೆ ಕೊಂದು ಕೊರತೆ ಆಲಿಸಿದ, ಹಾಗೂ ರೈತರ ಪ್ರಶ್ನೆಗೆ ಉತ್ತರ ನೀಡಿದ ಕಲಕೇರಿ ಡಿಸಿಸಿ ಬ್ಯಾಂಕನ ಕ್ಷೇತ್ರ ಅಧಿಕಾರಿಗಳಾದ, ಎಮ್ ಜಿ ಬಿರಾದಾರ, ಅವರು,ಸಂಘದ ಲಾಭ ನಷ್ಟ ಕಟ್ ಬಾಕಿದಾರರು ಬಗ್ಗೆ ಹಾಗೂ ರೈತರಿಗೆ ಅನುಕೂಲವಾಗುವಂತೆ ಸವಲತ್ತುಗಳ ಬಗ್ಗೆ ವಿವರಣೆ ಯಾಗಿ ಮಾಹಿತಿ ನೀಡಿದ, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ, ಮಾಡಿವಾಳಪ್ಪ ಹಿಕ್ಕನಗುತ್ತಿ ಯವರು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಬಸವರಾಜ ಅಸ್ಕಿ, ಸಂಘದ ಉಪಾಧ್ಯಕ್ಷರು ಹಾಗೂ ಮುಖ್ಯ ಅಥಿತಿಗಳಾದ ಸಂತೋಷ ಹಚ್ಯಾಳ, ನಿರ್ದೇಶಕರಾದ, ರಾಜಶೇಖರಗೌಡ ಪಾಟೀಲ, ಶಾಂತಗೌಡ, ಹೂಸಗೌಡ್ರ, ಸಿದ್ದಪ್ಪ ದಿಡ್ಡಿಮನಿ, ಈರಪ್ಪ ಪತ್ತಾರ, ಶಿವಶಂಕರ ಬೂದಿಹಾಳ, ಭೀಮಣ್ಣ ನಾಟಕಾರ, ಹಾಗೂ ಗುರುನಾಥಗೌಡ ಪಾಟೀಲ,, ಗುರುರಾಜ ಕೋಣಶಿರಸಿಗಿ ಪ್ರಶಾಂತ ನಾಶಿ,ಪ್ರಶಾಂತ ಬಂಗಾರಗುಂಡ, ಸಿಇಓ, ಆಲಗೂರ, ಶಂಕರೇಪ್ಪ ಕೋರಿ, ಹಾಗೂ ಯಲಗೋಡ, ವಂದಾಲ, ಕದರಾಪೂರ ಗ್ರಾಮದ ಎಲ್ಲಾ ರೈತ ಬಾಂಧವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ. ಹಚ್ಯಾಳ.ದೇವರ ಹಿಪ್ಪರಗಿ