ಕೊಟ್ಟೂರು ಪ.ಪಂ.ಯಲ್ಲಿ ಪೌರಕಾರ್ಮಿಕರ ದಿನಾಚರಣೆ.
ಕೊಟ್ಟೂರು ಸ.23

ಪಟ್ಟಣ ಪಂಚಾಯಿತಿಯಲ್ಲಿ ಮುಖ್ಯ ಅಧಿಕಾರಿಗಳಾದ ಎ ನಸುರುಲ್ಲಾ ಮತ್ತು ಅಧ್ಯಕ್ಷರಾದ ರೇಖಾ ಬದ್ದಿ ರಮೇಶ ರವರು ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಚಾಲನೆ ನೀಡಿ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಪೌರ ಸೇವಾ ರಾಜ್ಯ ಅಧ್ಯಕ್ಷರಾದ ಕೆ ಪ್ರಭಾಕರ ಕೊಟ್ಟೂರು ಪೌರ ಕಾರ್ಮಿಕರ ಜೊತೆ ಆಚರಣೆ ಮಾಡಿದರು. ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನವೇ ಪೌರ ಕಾರ್ಮಿಕರು ಗ್ರಾಮ ಮತ್ತು ಪಟ್ಟಣಗಳ ಸ್ವಚ್ಚತೆ ಕೈಗೊಂಡು ಸ್ವಚ್ಛತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಶ್ಲಾಘನೀಯವಾಗಿದೆ.

ಸ್ವಚ್ಛ ನಗರ ಮತ್ತು ಸ್ವಸ್ಥ ಸಮಾಜಕ್ಕಾಗಿ ದಿನಾಲು ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಕೊಟ್ಟೂರು ಪಟ್ಟಣ ಪಂಚಾಯತಿಯಲ್ಲಿ ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಎಲ್ಲಾ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಲಾಯಿತು, ವಿಶೇಷ ಭತ್ಯೆ ರೂ:7000.00 ಗಳನ್ನು ನೀಡಲಾಯಿತು, ಹಾಗೂ ಗೃಹಭಾಗ್ಯ ಯೋಜನೆ ಉಪಯೋಗಿಸಿ ಕೊಳ್ಳುವ ಬಗ್ಗೆ ತಿಳಿವಳಿಕೆ ನೀಡಿದರು, ನಿವೃತ್ತ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. ಮತ್ತು ಪೌರ ಕಾರ್ಮಿಕರಿಂದ ಮನರಂಜನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಬದ್ದಿ ಮರಿಸ್ವಾಮಿ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕರು ಪಟ್ಟಣ ಪಂಚಾಯತಿಯ ಸರ್ವ ಸದಸ್ಯರು ಸರ್ವ ಸಿಬ್ಬಂದಿ ವರ್ಗದವರು ಇನ್ನೂ ಹಲವಾರು ಉಪಸ್ಥಿತಿಯಲ್ಲಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು