ಕಡ್ಡಾಯ ಹಾಗೂ ಸಾಮಾನ್ಯ ಕನ್ನಡ ವಿಷಯದ ಉಚಿತ ಕಾರ್ಯಾಗಾರ.

ಗಜೇಂದ್ರಗಡ ಸ.23

ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅಭ್ಯರ್ಥಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ. ಹೇಗಾದರೂ ಮಾಡಿ ಪರೀಕ್ಷೆ ಪಾಸ್‌ ಮಾಡಿಕೊಂಡು ಉದ್ಯೋಗ ಪಡೆಯುವ ತವಕ ಅವರಲ್ಲಿದೆ. ಆದರೆ ಅದಕ್ಕೆ ತಕ್ಕಂತೆ ಉತ್ತಮ ಸಿದ್ಧತೆ ನಡೆಸಬೇಕು ಎಂದು ಸುಳಿಬಾವಿಯ ಸ್ವಾಮಿ ವಿವೇಕಾನಂದ ಪಿ.ಯು ಕಾಲೇಜಿನ ಉಪನ್ಯಾಸಕ ಜಗದೀಶ ಕುರಿ ಹೇಳಿದರು. ಗಜೇಂದ್ರಗಡ ನಗರದ ಸ್ಪರ್ಧಾ ಸಾಮ್ರಾಜ್ಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದಲ್ಲಿ ಭಾನುವಾರ ನಡೆದ ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಅಭಿವೃದ್ದಿ ಅಧಿಕಾರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಕಡ್ಡಾಯ ಹಾಗೂ ಸಾಮಾನ್ಯ ಕನ್ನಡ ವಿಷಯದ ಉಚಿತ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು. ಕಡ್ಡಾಯ ಹಾಗೂ ಸಾಮಾನ್ಯ ಕನ್ನಡ ವಿಷಯದ ಪರೀಕ್ಷೆಯಲ್ಲಿ ಉತ್ತಮ ಸಿದ್ಧತೆ ನಡೆಸುವ ಮೂಲಕ ಸುಲಭವಾಗಿ ಈ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಬಹುದು. ಕನ್ನಡದಲ್ಲಿ ನಿಖರವಾಗಿ ಬರುವ ಹಾಗೂ ಗೊಂದಲವಿಲ್ಲದೆ ಬರೆಯಬಹುದಾದ ಅಂಶಗಳನ್ನು ಪ್ರತ್ಯೇಕಿಸಬೇಕು. ಅದರ ಜೊತೆಯಲ್ಲಿ ಸುಲಭವಾಗಿ ನೆನಪಿನಲ್ಲಿ ಇಟ್ಟು ಕೊಳ್ಳಬಹುದಾದ ಅಂಶಗಳನ್ನು ಗುರುತಿಸಬೇಕು. ನಂತರ ಇತರೇ ಅಗತ್ಯಗಳನ್ನು ಮನನ ಮಾಡಿಕೊಳ್ಳುವ ಮೂಲಕ ಹೆಚ್ಚಿನ ಅಂಕ ಗಳಿಸಲು ಸಾಧ್ಯವಿದೆ ಎಂದು ಸ್ಪರ್ಧಾರ್ಥಿಗಳಿಗೆ ಸಲಹೆ ನೀಡಿದರು.ಸ್ಪರ್ಧಾ ಸಾಮ್ರಾಜ್ಯ ತರಬೇತಿ ಕೇಂದ್ರದ ಸಂಸ್ಥಾಪಕ ವೆಂಕಟೇಶ ಕುಕಬಾಯಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಓದು, ಜ್ಞಾನ ಸಂಪಾದಿಸುವ ಜತೆಗೆ ತರಬೇತಿ ಕೂಡ ಮುಖ್ಯವಾಗಿದೆ ಎಂದರು. ಪ್ರತಿ ಅಭ್ಯರ್ಥಿಯೂ ಭವಿಷ್ಯದ ಬಗ್ಗೆ ಸ್ಪಷ್ಟತೆಯನ್ನು ಹೊಂದಬೇಕು. ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸ್ಪರ್ಧೆ ಪ್ರಬಲ ಗೊಂಡಿದೆ. ಅಷ್ಟು ಜನರಿಗೆ ಉದ್ಯೋಗ ಅವಕಾಶದ ಪ್ರಶ್ನೆ ಎದುರಾಗಿದೆ. ಹಾಗಾಗಿ ಅಭ್ಯರ್ಥಿಗಳು ಗಜೇಂದ್ರಗಡ ಭಾಗದಲ್ಲಿ ದೊರೆಯುವ ತರಬೇತಿ ಕೇಂದ್ರದಲ್ಲಿ ಪರೀಕ್ಷಾ ಕೌಶಲ್ಯ ತರಬೇತಿ ಪಡೆದು ಪರೀಕ್ಷೆಗೆ ಸಿದ್ದರಾಗಬೇಕು. ಆಗ ಭವಿಷ್ಯದ ಪರೀಕ್ಷೆ ಬಗ್ಗೆ ವಿಶ್ವಾಸ ಸಿಗುತ್ತದೆ. ನಿರಂತರವಾಗಿ ಸ್ಪರ್ಧಾತ್ಮಕ ಪರೀಕೆಗಳನ್ನು ಎದುರಿಸುವುದರಿಂದ ಆತ್ಮ ಸ್ಥೈರ್ಯ ಮೂಡುತ್ತದೆ ಎಂದರು. ಈಗ ಪಿ.ಡಿ.ಒ, ವಿ.ಎ ಸೇರಿದಂತೆ ಅನೇಕ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಆಕಾಂಕ್ಷಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯ ಬೇಕಾಗುತ್ತದೆ. ಪರೀಕ್ಷೆ ಹೇಗೆ ಎದುರಿಸಬೇಕು, ಅಭ್ಯಸಿಸಬೇಕು ಮುಂತಾದ ಬಗ್ಗೆ ನಮ್ಮಲ್ಲಿ ತರಬೇತಿ ಪಡೆಯಬಹುದು ಎಂದರು. ಈ ವೇಳೆ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದ ಜಗದೀಶ ಕುರಿ ಅವರನ್ನು ಸನ್ಮಾನಿಸಲಾಯಿತು, ಸಿದ್ದು ಮಣ್ಣೂರ, ಸಿದ್ದು ಪೂಜಾರ, ಸುಷ್ಮಾ ಗೌಡರ, ದೇವರಾಜ ಕುಕಬಾಯಿ, ಶೋಭಾ, ಮಂಜುನಾಥ ಮಾರನಬಸರಿ, ದುರುಗೇಶ ಜಗ್ಗಲರ, ಬಸವರಾಜ ಗರೇಬಾಳ, ದೇವು ತಾತಲ್, ಕಂದಕೂರಪ್ಪ ಕುಷ್ಟಗಿ, ಸಿದ್ದು ರಾಜೂರ, ಲಕ್ಷ್ಮಿ ಹಿರೇಮಠ ಇದ್ದರು. 22 ಗಜೇಂದ್ರಗಡದ 1,2,3: ಗಜೇಂದ್ರಗಡ ನಗರದ ಸ್ಪರ್ಧಾ ಸಾಮ್ರಾಜ್ಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದಲ್ಲಿ ಭಾನುವಾರ ನಡೆದ ಕಡ್ಡಾಯ ಹಾಗೂ ಸಾಮಾನ್ಯ ಕನ್ನಡ ವಿಷಯದ ಉಚಿತ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದ ಜಗದೀಶ ಕುರಿಯವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ. ಎಫ್.ತೋಟಗುಂಟಿ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button