ಉತ್ತರಿ ಮಳೆಯಲ್ಲಿ ಅತೀ ವಿಜೃಂಭಣೆಯಾಗಿ ಜರುಗಿದ ತಿಮ್ಮಾಪುರದ ಶ್ರೀ ಮಾರುತೇಶ್ವರ ಮತ್ತು ಬಸವೇಶ್ವರ ರಥೋತ್ಸವ.
ಹುನಗುಂದ ಸ.24

ತಾಲೂಕಿನ ತಿಮ್ಮಾಪೂರ ಗ್ರಾಮದ ಶ್ರೀ ಮಾರುತೇಶ್ವರ ಮತ್ತು ಶ್ರೀ ಬಸವೇಶ್ವರ ಮಹಾ ರಥೋತ್ಸವ ನಾಡಿನ ಮಠಾಧೀಶರ ಮತ್ತು ಹರಮೂರ್ತಿಗಳು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಭಕ್ತಾದಿಗಳ ಸಮ್ಮುಖದಲ್ಲಿ ಸೋಮವಾರ ಅತೀ ವಿಜೃಂಭಣೆಯಿಂದ ಜರುಗಿತು. ಹುಬ್ಬಿ ಮಳೆಯ ಕೊನೆಯ ಪಾದದಲ್ಲಿ ಆರಂಭವಾಗುವ ಈ ಜಾತ್ರೆ ಉತ್ತರಿ ಮಳೆಯಲ್ಲಿ ರಥೋತ್ಸವ ಜರಗುವುದರಿಂದ ಈ ಭಾಗದಲ್ಲಿ ಈ ಜಾತ್ರೆಯನ್ನು ಉತ್ತರಿ ಮಳೆಯ ಜಾತ್ರೆ ಎಂದೇ ಪ್ರಸಿದ್ಧಿಯಾಗಿದೆ. ಇಲ್ಲಿ ಪೂಜಾರಿಗಳ ಕಾರಣಿಕ (ಹೇಳಿಕೆ) ಪ್ರಸಿದ್ಧಿ ಪಡೆದಿದೆ. ಉತ್ತರಿ ಮಳೆಯಲ್ಲಿ ಬರುವ ಈ ಜಾತ್ರೆ ರೈತರಿಗೆ ಬಹಳ ಮಹತ್ವದ್ದು. ಹಿಂಗಾರು ಬೆಳೆಯ ಮುನ್ಸೂಚನೆ ಮಳೆ, ಬೆಳೆ ಹಾಗೂ ಬದುಕಿಗೆ ಸಂಬಂಧಿಸಿದ ಹಲವಾರು ವಿಷಯಗಳು ಹೇಳಿಕೆಯನ್ನು ನುಡಿದಿದ್ದು. ಈ ಬಾರಿ ಹಿಂಗಾರು ಬಾರಿ ಮಳೆ ಭರ್ಜರಿ ಬೆಳೆ ಬರುತ್ತದೆ ಎನ್ನುವ ಮಹತ್ವದ ಕಾರಣಿಕ ನುಡಿಯೋ ರೈತರಲ್ಲಿ ಮತ್ತಷ್ಟು ಖುಷಿ ತಂದಿದೆ.ವಿಶೇಷ ಅಂದ್ರೆ ಮಾರುತೇಶ್ವರರಿಗೆ ಓಕುಳಿ ಆಡುವುದು ಸರ್ವೆ ಸಾಮಾನ್ಯ ಆದರೆ ತಿಮ್ಮಾಪುರ ಗ್ರಾಮದ ಶ್ರೀ ಮಾರುತೇಶ್ವರಿಗೆ ಹತಾರ ಸೇವೆಯ ಕಾರ್ಯ ನಡೆಯುವುದು ವಿಶೇಷವಾಗಿದೆ. ರಥಕ್ಕೆ ಶೃಂಗಾರ- ಶ್ರೀ ಮಾರುತೇಶ್ವರ ಮತ್ತು ಶ್ರೀ ಬಸವೇಶ್ವರ ರಥೋತ್ಸವಕ್ಕೆ ದೇವಸ್ಥಾನ ಸಮಿತಿಯಿಂದ ರುದ್ರಾಕ್ಷಿ ಮಾಲೆ ಮತ್ತು ಹೂ ಮಾಲೆಯಿಂದ ಶೃಂಗರಿಸಲಾಗಿತ್ತು. ರಥೋತ್ಸವ ಆರಂಭವಾಗುತ್ತಿದ್ದಂತೆ ಸಾಹಸ್ರಾರು ಸಂಖ್ಯೆಯಲ್ಲಿ ಸೇರಿದ ಭಕ್ತಾದಿಗಳು ಶ್ರೀ ಮಾರುತೇಶ್ವರ ಮತ್ತು ಶ್ರೀ ಬಸವೇಶ್ವರ ಜೈಕಾರ ಹಾಕುತ್ತ ಭಕ್ತಿ ಭಾವದಿಂದ ಮಹಾ ರಥೋತ್ಸವಕ್ಕೆ ಉತ್ತತ್ತಿಯನ್ನು ಸಮರ್ಪಿಸಿದರು. ವಿಶೇಷ ಅಂದ್ರೆ ರಥೋತ್ಸವದ ಸಂದರ್ಭದಲ್ಲಿ ಕರ್ನಾಟಕ ರತ್ನ, ಪವರಸ್ಟಾರ ಪುನೀತ ರಾಜಕುಮಾರ ಅವರ ಭಾವಚಿತ್ರ ಯುವಕರ ಕೈಯಲ್ಲಿ ರಾರಾಜಿಸುತ್ತಿತ್ತು. ರಥೋತ್ಸವ ಮುಗಿಯುತಿದ್ದಂತೆ ದೇವಸ್ಥಾನ ಸಮಿತಿಯಿಂದ ವರ್ಣ ರಂಜಿತವಾಗಿರುವಂತ ಪಟಾಕಿ ಸಿಡಿಸುವುದು ಬಂದ ಭಕ್ತಾದಿಗಳಿಗೆ ಕಣ್ಮನ ಸೆಳೆಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ