ಗ್ರಾಹಕರ ಸಹಕಾರ ದಿಂದ ಸಹಕಾರಿ ಸಂಘಗಳು ಬೆಳೆಯಲು ಸಾಧ್ಯ – ಬಸವರಾಜ ಹೊಸೂರ.
ಹುನಗುಂದ ಸ.24

ಗ್ರಾಹಕರ ಸಹಕಾರ ದಿಂದ ಸಹಕಾರಿ ಸಂಘಗಳು ಬೆಳೆಯಲು ಸಾಧ್ಯ. ಗ್ರಾಹಕರೇ ಸಹಕಾರಿ ಸಂಘಗಳ ದೇವರು ಎಂದು ಶ್ರೀ ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಹೊಸೂರ ಹೇಳಿದರು. ಮಂಗಳವಾರ ಪಟ್ಟಣದ ಶ್ರೀ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಶ್ರೀ ಬಸವೇಶ್ವರ ಪತ್ತಿನ ಸಹಕಾರಿ ಸಂಘ.ನಿ. ೨೦೨೩-೨೪ ನೇ. ಸಾಲಿನ ೨೩ ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಗ್ರಾಹಕರ ವಿಶ್ವಾಸ ಹಾಗೂ ಪ್ರಮಾಣಿಕತೆಯಲ್ಲಿ ಸಹಕಾರಿ ಪತ್ತಿನ ಸಂಘಗಳು ಏಳಿಗೆ ಅಡಗಿದೆ. ವರ್ಷದಿಂದ ವರ್ಷಕ್ಕೆ ಪ್ರಗತಿಯ ಹಾದಿಯಲ್ಲಿ ಸಾಗುತ್ತದೆ.ಇದಕ್ಕೆ ಗ್ರಾಹಕರ, ಸಿಬ್ಬಂದಿಗಳ ವರ್ಗ ಹಾಗೂ ನಿರ್ದೇಶಕ ಮಂಡಳಿಯ ಪರಿಶ್ರಮವೇ ಕಾರಣ. ಪ್ರಸಕ್ತ ವರ್ಷದಲ್ಲಿ ೯೮.೭೧ ನಿವ್ವಳ ಲಾಭವನ್ನು ಗಳಿಸಿದೆ ಎಂದರು.ಹಿರೇಣ್ಯಪ್ಪ ಆಲೂರ ಮಾತನಾಡಿ ನಮ್ಮ ಪತ್ತಿನ ಸಹಕಾರಿ ಸಣಘವು ಸದ್ಯ ೧೧೧.೩೮ ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದ್ದು. ೮೬.೫೧ ಕೋಟಿ ಠೇವು ಇದ್ದು ೩.೮೮ ಕೋಟಿ ಶೇರು ಬಂಡವಾಳವನ್ನು ಹೊಂದಿದ್ದು. ೨೦೨೩-೨೪ ನೇ ಸಾಲಿನಲ್ಲಿ ೯೮.೭೧ ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ. ನಮ್ಮ ಸಂಘವು ಕೇಂದ್ರ ಕಚೇರಿ ಸೇರಿದಂತೆ ೧೧ ಶಾಖೆಗಳನ್ನು ಹೊಂದಿದ್ದು ಮತ್ತು ಮುಖ್ಯ ಕಚೇರಿ ಎಲ್ಲ ಶಾಖೆಗಳಲ್ಲಿ ೫೩ ಜನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.ನಿರ್ದೇಶಕ ಅರುಣೋದಯ ದುದ್ಗಿ ಮಾತನಾಡಿ ಸೂಕ್ತ ದಾಖಲೆ ಇದ್ದರೆ ಮಾತ್ರ ಹಣಕಾಸಿನ ಸಂಸ್ಥೆಯ ಬಗ್ಗೆ ಆಪಾದನೆ ಮಾಡಬೇಕೇ ಹೊರತು ಸುಖಾ ಸುಮ್ನೆ ಆಪಾದನೆ ಮಾಡುವುದು. ಗ್ರಾಹಕರಲ್ಲಿ ಹಣಕಾಸು ಸಂಸ್ಥೆಯ ಬಗ್ಗೆ ಅನುಮಾನ ಮೂಡಿಸಲಿದೆ. ಸಾರ್ವಜನಿಕರ ದುಡ್ಡಿನಲ್ಲಿ ನಯಾಪೈಸಾ ಕೂಡ ವಂಚನೆ ಮಾಡಿಲ್ಲ. ೫ ಲಕ್ಷದಿಂದ ಆರಂಭವಾಗಿರುವ ಈ ಸಂಘ ಇಂದು ೧೧೧ ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ ಎಂದರು. ಮುಖ್ಯ ಕಾರ್ಯ ನಿರ್ವಾಹಕ ಶರಣು ಚಳಗೇರಿ ಕಳೆದ ವರ್ಷದ ವರದಿ ವಾಚನ ಮಾಡಿದರು. ಈ ಸಂದರ್ಭದಲ್ಲಿ ಕೆಲವು ಸದಸ್ಯರು ಸಂಘದ ನಿರ್ದೇಶಕರುಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ೨೦೨೩-೨೪ ನೇ. ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ದ್ವೀತಿಯ ವರ್ಷದ ಕಲಾ. ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಸಿದ್ದಾಮೇಶ ಮೂಲಿಮನಿ, ನಿರ್ದೇಶಕರಾದ ಹೊನ್ನಪ್ಪ ರೋಣದ, ಸಂಗಣ್ಣ ಹುನ್ನಳ್ಳಿ,ಸೋಮಶೇಖರ ತೋಟಗೇರ, ಸಂಗಪ್ಪ ಹೂಲಗೇರಿ,ಶಿವುಕುಮಾರ ಬಾದವಾಡಗಿ, ಅನ್ನದಾನೇಶ್ವರ ಹಾದಿಮನಿ, ಚಂದ್ರಪ್ಪ ತಳವಾರ, ಮುತ್ತು ಲೋಕಾಪೂರ, ಅನ್ನಪೂರ್ಣ ಹೊಸೂರ, ಶಾಂತಾ ಹಳಪೇಟಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಜಿ.ಎಂ.ಮಠ ಪ್ರಾರ್ಥಿಸಿ, ಎಸ್.ಎಸ್.ಅಂಗಡಿ ಸ್ವಾಗತಿಸಿ. ಸಂಗಮೇಶ ಹಳಪೇಟಿ ನಿರೂಪಿಸಿ, ವಿಜಯಲಕ್ಷ್ಮಿ ಪೋಲಿಸಪಾಟೀಲ ವಂದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ ಹುನಗುಂದ