ಹುನಗುಂದ ತಾಲೂಕಿನಾದ್ಯಂತ ಸುಸ್ಥಿರತೆಯಡೆಗೆ ಖಾತ್ರಿ ನಡಿಗೆಗೆ ಚಾಲನೆ.
ಹುನಗುಂದ ಅಕ್ಟೋಬರ್.2
ಕಾರ್ಮಿಕರ ಆಯವ್ಯಯ ತಯಾರಿಸುವ ಸಲುವಾಗಿ ಅಕ್ಟೋಬರ್ 2 ರಿಂದ ಒಂದು ತಿಂಗಳವರೆಗೆ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನ ನಡೆಯಲಿದೆ. ಈ ಅಭಿಯಾನಕ್ಕೆ ಬಿಂಜವಾಡಗಿ ಗ್ರಾಮ ಪಂಚಾಯ್ತಿಯಲ್ಲಿ ಮೂಲಕ ಚಾಲನೆ ನೀಡಲಾಯಿತು.ಈ ವೇಳೆ ಮಾತನಾಡಿದ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, 2024 – 25ನೇ ಕಾರ್ಮಿಕ ಆಯವ್ಯಯ ತಯಾರಿಸುತ್ತಿದ್ದು, ಕೃಷಿ ಹೊಂಡ ಬದು ನಿರ್ಮಾಣ, ಬಚ್ಚಲು ಗುಂಡಿ ಸೇರಿದಂತೆ ನರೇಗಾ ಯೋಜನೆಯಡಿ ಸಿಗುತ್ತಿರುವ ವೈಯಕ್ತಿಕ ಕಾಮಗಾರಿಗಳ ಹಾಗೂ ಸಮುದಾಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಅಸಂಘಟಿತ ಕಾರ್ಮಿಕರಿಗೆ ಈ – ಶ್ರಮ ಕಾರ್ಡ್ ನಿಂದ ಸಿಗುತ್ತಿರುವ ಲಾಭಗಳ ಬಗ್ಗೆ ತಿಳಿಸಿ ಕೊಟ್ಟರು.

ಬಳಿಕ ಮಾತನಾಡಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಸವರಾಜ ನಾಗಬೇನಾಳ ಕೂಲಿ ಕಾರ್ಮಿಕರು ಸಮುದಾಯ ಕಾಮಗಾರಿಗಳ ಬದಲು ವೈಯಕ್ತಿಕ ಕಾಮಗಾರಿಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು, ಇದರಿಂದ ಗ್ರಾಮೀಣ ಭಾಗದ ಜನರು ಬದುಕು ಹೆಚ್ಚಿನ ಮಟ್ಟದಲ್ಲಿ ಸುಧಾರಣೆ ಆಗುತ್ತದೆ ಎಂದರು.ಇನ್ನೂ ಅಂಗನವಾಡಿ ಮೇಲ್ವಿಚಾರಕಿ ಪಿ.ಎಚ್ ಪಾಟೀಲ್! ಮಾತನಾಡಿ, ಬಾಲ್ಯ ವಿವಾಹ ದಂತಹ ಅನಿಷ್ಟ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಗ್ರಾಮಸ್ಥರಿಂದ ಮಾತ್ರ ಸಾಧ್ಯ. ಹೀಗಾಗಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಅವರ ಜೀವನ ಹಾಳು ಮಾಡಬೇಡಿ ಎಂದರು.ಇನ್ನು VRW ಜಯಶ್ರೀ ಪಾಟೀಲ್ ಮಾತನಾಡಿ, ವಿಶೇಷ ಚೇತನರಿಗೆ ನರೇಗಾ ಯೋಜನೆಯಡಿ ಕೆಲಸ ಮಾಡಲು ಅವಕಾಶ ವಿದ್ದು, ಕೆಲಸದಲ್ಲಿ ರಿಯಾಯಿತಿ ಸಿಗಲಿದೆ. ಹೀಗಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಸವರಾಜ ನಾಗಬೇನಾಳ, ಕಾಯಕ ಮಿತ್ರ ಭಾಗ್ಯ ಶ್ರೀ ಛಲವಾದಿ, ಡಾಟಾ ಎಂಟ್ರಿ ಆಪರೇಟರ್ ಹನುಮಂತ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಕಾಯಕ ಬಂಧುಗಳು ಉಪಸ್ಥಿತರಿದ್ದರು.