ಏನಿಲ್ಲದ ನನ್ನ ಪತ್ನಿ ಪಾರ್ವತಿಯನ್ನ ಎಳೆದು ತರುತ್ತೀರಲ್ಲ ಎಂದ – ಸಿಎಂ ಸಿದ್ದರಾಮಯ್ಯ ಆಕ್ರೋಶ.
ಮಾನ್ವಿ ಅ 06

ಮುಖ್ಯಮಂತ್ರಿ ಸಿದ್ದರಾಮಯ್ಯರ ಗುಟುರು ಕೇಳಲು ಸಾವಿರಾರು ಜನರು ಸ್ವಯಂ ಪ್ರೇರಿತವಾಗಿ ಸ್ವಾಭಿಮಾನಿ ಸಮಾವೇಶಕ್ಕೆ ಬಂದಿದ್ದನ್ನು ಕಂಡು ವಿರೋಧಿ ಪಕ್ಷಕ್ಕೆ ಒಂದು ರೀತಿಯಲ್ಲಿ ಸೈನ್ಯ ಕಂಡು ತರುಗುಟ್ಟಿರುವುದು ಕಂಡು ಬಂತು.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಸೂರ್ಯ ಫಂಕ್ಷನ್ ಹಾಲ್ ಬಳಿ ಪ್ರಭಾವಿ ನಾಯಕ ಎಂದೇ ಗುರುತಿಸಿ ಕೊಂಡ ಸಚಿವ ಎನ್.ಎಸ್ ಬೋಸರಾಜು ಪುತ್ರ ರವಿ ಬೋಸರಾಜು ಸ್ವಾಭಿಮಾನ ಸಮಾವೇಶ ಆಯೋಜನೆ ಮಾಡಲು ರೂವಾರಿಗಳು ಎಂದು ಹೇಳಬಹುದು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರಿ ಸುಮಾರು 450 ಕೋಟಿಗೂ ಅಧಿಕ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ನನ್ನ ಪತ್ನಿ ಪಾರ್ವತಿಯನ್ನ ಯಾವುದೆ ಸಾಕ್ಷ್ಯ ಇಲ್ಲದೆ ಮಾಧ್ಯಮದಲ್ಲಿ ಎಳೆದು ತರುತ್ತೀರಲ್ಲ ನಾನು ಯಾವುದಕ್ಕೂ ಬಗ್ಗಲ್ಲ ಯಾವುದಕ್ಕೂ ಹೆದರುವುದಿಲ್ಲ ಎಂದು ಬಿಜೆಪಿ, ಜೆಡಿಎಸ್ ವಿರುದ್ಧ ಗುಡುಗಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ಭಾಷಾ.ಮಾನ್ವಿ