ತಾಳಿಕೋಟೆ ತಾಲೂಕಿನ ದೋಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಜ್ ಸಂಪೂರ್ಣ ಅಸ್ತವ್ಯಸ್ತ – ಸಾರ್ವಜನಿಕರ ಪರದಾಟ.
ತಾಳಿಕೋಟೆ ಸ.27

ತಾಳಿಕೋಟೆ ಯಿಂದ ವಿಜಯಪುರಕ್ಕೆ ಹೋಗುವ ರಾಜ್ಯ ಹೆದ್ದಾರಿ ಬಂದ ಆದ ಕಾರಣ ತಾಳಿಕೋಟೆ ಸಮೀಪದ ದೋಣಿಗೆ ಅಡ್ಡಲಾಗಿ ಕಟ್ಟಿದ ಹೊಸ ಬ್ರಿಜ್ ಅಲ್ಲಲ್ಲೇ ಬಿರುಕು ಮತ್ತು ಕ್ರ್ಯಾಕ್ ಆಗಿ 5 ರಿಂದ 6 ವರ್ಷ ಆಯ್ತು ಅದರ ಪಕ್ಕದಲ್ಲಿ ಹಳೆಯ ಕಾಲದಲ್ಲಿ ನಿರ್ಮಿಸಿದ ಮೇಲ ಸೇತುವೆ (ಬ್ರಿಜ್) ಅದು ಇನ್ನೂ ದುರಸ್ತಿಯಲ್ಲಿ ಇದೆ. ಅದರ ಮೇಲೆ ದಿನಾಲೂ ತಾಳಿಕೋಟೆ ಯಿಂದ ವಿಜಯಪುರಕ್ಕೆ ಹೋಗೋದು ಸುಲಭವಾಗಿತ್ತು ಬಸ್ ಕಾರ್ ಬೈಕ್ ಎಲ್ಲಾ ವಾಹನಗಳು ಹೋಗಲು ತುಂಬಾ ಅನುಕೂಲವಾಗಿತ್ತು. ಅದು ಕೂಡ ಇವತ್ತು ಮುಳುಗಡೆ ಆಗಿದೆ ತಿರುಗಾಡುವ ಜನರಿಗೆ ತುಂಬಾ ತೊಂದರೆ ಆಗಿ ಸಾರ್ವಜನಿಕರು ಪರದಾಡು ವಂತಾಗಿದೆ. ಇತ್ತ ಕಡೆ ಚಿತ್ತ ಕೊಟ್ಟು ಬೇಗ ಬಗೆಹರಿಸದೆ ಇದ್ದರೆ. ಸಾರ್ವಜನಿಕರು ಬೀದಿ ಗೀಳಿದು ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಶರಣಯ್ಯ.ಈ.ಬೇನಾಳಮಠ.ಕಲಕೇರಿ