ಸಂಕಲನ ಆರಂಭಿಸಿದ “ತಗ್ಗಟ್ಟಿ” ಸಿನೇಮಾ.

ಬೆಂಗಳೂರು ಸ.27

ಸಿಸಿ ಸಿನಿ ಪ್ರೊಡಕ್ಷನ್ ರವರ ಚೊಚ್ಚಲ ಕಾಣಿಕೆ ಶ್ರೀ ಚೆನ್ನಿಗರಾಯಸ್ವಾಮಿ ಆಶೀರ್ವಾದದೊಂದಿಗೆ ಹರಿಹರನ್ ಬಿ.ಪಿ. ನಿರ್ದೇಶನದಲ್ಲಿ “ತಗ್ಗಟ್ಟಿ” ಎಂಬ ಸಾಂಸಾರಿಕ ಥ್ರಿಲ್ಲರ್ ಪ್ರೀತಿ ಬಾಂಧವ್ಯದ ಕಥಾ ಹಂದರದ ಸಿನೇಮಾ ಸದ್ದಿಲ್ಲದೆ ಶೇ.೯೫ ರಷ್ಟು ಭಾಗದ ಚಿತ್ರೀಕರಣ ಮುಗಿಸಿ ಸಂಕಲನ ಕಾರ್ಯ ಆರಂಭಿಸಿದೆ. “ತಗ್ಗಟ್ಟ” ಇದು ಕರ್ನಾಟಕದ ತಮಿಳುನಾಡಿನ ನಡುವಿನ ಅಂಚಿನಲ್ಲಿರುವ ಒಂದು ಹಳ್ಳಿಯ ಹೆಸರು. ಆ ಹಳ್ಳಿಯಲ್ಲಿ ನಡೆದ ಪವಾಡದ ಮೇಲೆ ಸೃಷ್ಟಿಯಾಗಿರುವ ಸತ್ಯ ಘಟನೆಯನ್ನು ಆಧರಿಸಿದ ಕಥೆ ಇದು. ಬಹುತಾರಾ ಬಳಗ ದೊಂದಿಗೆ ಮೂಡಿ ಬರುತ್ತಿರುವ ಚಿತ್ರ ಇದಾಗಿದ್ದು. ತಾರಾಗಣದಲ್ಲಿ ರೇಖಾದಾಸ್, ಶಿವಕುಮಾರ ಆರಾಧ್ಯ, ಮಂಡ್ಯ ಸಿದ್ದು, ಡೈಮಂಡ್ ರಾಜಣ್ಣ , ೪ ಯುವ ನಾಯಕ ನಾಯಕಿಯರು ಇದ್ದು, ಚಲನ ಚಿತ್ರ ಹಾಗೂ ಕಿರು ತೆರೆಗಳಲ್ಲಿ ಖಳನಟ ಮುಖ್ಯ ಪಾತ್ರವನ್ನು ವಹಿಸುವ ರೇಣು ಶಿಖಾರಿಯವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬಾಲರಾಜ್ ವಾಡಿಯ ತಂದೆ ಮಗನ ಪಾತ್ರವೂ ತುಂಬಾ ಪ್ರಮುಖವಾಗಿದೆ. ಪ್ರಮುಖ ಪಾತ್ರ ಧಾರಿಯಾಗಿ ಪ್ರವೀಣ್ ಕುಮಾರ್ ಟಿ.ಸಿ ಅಮೋಘವಾಗಿ ಅಭಿನಯಿಸಿದ್ದಾರೆ.

ಸಾಹಿತ್ಯವನ್ನು ಲವ್ ಇನ್ ಮಂಡ್ಯ ಖ್ಯಾತಿಯ ಅರಸು ಅಂತಾರೆ ಮತ್ತು ‘ಮುಸ್ಸಂಜೆ ಮಾತು’ ಚಲನ ಚಿತ್ರ ಪ್ರಖ್ಯಾತ ಸಾಹಿತಿ ರೇವಣ್ಣ ನಾಯಕ್ ದೊಡ್ಡ ಕಾಡನೂರು ರಚಿಸಿದ್ದಾರೆ. ಕನ್ನಡ ಚಿತ್ರ ರಂಗದ ಬಾದಾಮಿ ಎಂದು ಕರೆಯಲ್ಪಡುವ ಎಟಿ. ರವೀಶ್ ಸಂಗೀತ ಸಂಯೋಜಿಸಿದ್ದಾರೆ. ನಾಗೇಂದ್ರ ರಂಗಹರಿ ಅವರು ಅದ್ಭುತ ಮನೋಹರವಾಗಿ ಛಾಯಾಗ್ರಹಣ ಮಾಡಿದ್ದು ಪ್ರಸಾಧನ ಗುರು (ಆನಂದ) ಸಂಕಲನ ಮಾಂತ್ರಿಕ ಮುತ್ತುರಾಜ್ .ಟಿ ಅವರ ಸಂಕಲನವಿದೆ. ಪಿ.ಆರ್.ಓ ಸುಧೀಂದ್ರ ವೆಂಕಟೇಶ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಸಹಾಯಕ ನಿರ್ದೇಶನ ಎಂ.ಡಿ.ರಾಘವೇಂದ್ರ, ಚಿತ್ರದ ನಿರ್ಮಾಪಕರು ಚಂದ್ರಮಾ ಚನ್ನಾಚಾರಿ ಆಗಿದ್ದಾರೆ. ಚಿಕ್ಕಮಂಗಳೂರು, ಊಟಿ, ಬೆಂಗಳೂರು, ಕನಕಪುರ ಸುತ್ತಮುತ್ತ ೮೪ ದಿನಗಳ ಕಾಲ ಚಿತ್ರೀಕರಣವಾಗಿದೆ . ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದ್ದು. ಮುತ್ತುರಾಜ್ ಅವರು ಸಂಕಲನ ಕಾರ್ಯ ಆರಂಭಿಸಿದ್ದು, ಶೀಘ್ರದಲ್ಲೇ ಉಳಿದ ಒಂದು ಹಾಡಿನ ಚಿತ್ರೀಕರಣ ಮುಗಿಸಿ ಬೇಗನೇ ಬೆಳ್ಳಿತೆರೆಗೆ ತರುವ ಆಲೋಚನೆ ಇದೆ ಎಂದು ನಿರ್ದೇಶಕ ಹರಿಹರನ್ .ಬಿ.ಪಿ. ಹೇಳುತ್ತಾರೆ.

*****

ವರದಿ:ಡಾ.ಪ್ರಭು ಗಂಜಿಹಾಳ

ಮೊ: ೯೪೪೮೭೭೫೩೪೬

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button