ಹಲವು ದಶಕ ದಿಂದಲೂ ಅಭಿವೃದ್ಧಿ ಕಾಣದ ಅಂಬೇಡ್ಕರ್ ವೃತ್ತ, ಪುರಸಭೆ ನಿರ್ಲಕ್ಷ್ಯಕ್ಕೆ – ಕ್ರಾಂತಿ ಸೂರ್ಯ ಜೈ ಭೀಮ್ ಸೇನೆಯಿಂದ ಮನವಿ.
ಗಜೇಂದ್ರಗಡ ಸ.27

ಪುರಸಭೆ ವ್ಯಾಪ್ತಿಯಲ್ಲಿರುವ ಸಂವಿಧಾನ ಶಿಲ್ಪಿ, ಕ್ರಾಂತಿ ಸೂರ್ಯ ಡಾ, ಬಿ.ಆರ್. ಅಂಬೇಡ್ಕರ್ ಅವರ ವೃತ್ತದಲ್ಲಿ ಮಹಾ ನಾಯಕ ಅಂಬೇಡ್ಕರ್ ಅವರ “ಮೂರ್ತಿ” ನಿರ್ಮಿಸ ಬೇಕೆಂದು ಒತ್ತಾಯಿಸಿ ಶುಕ್ರವಾರ ಮುಖ್ಯಾಧಿಕಾರಿಗೆ ಕ್ರಾಂತಿ ಸೂರ್ಯ ಜೈ ಭೀಮ್ ಸೇನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ಈ ವೇಳೆ ಸಂಘಟನೆಯ ಮುಖಂಡ ಪ್ರಕಾಶ ರಾಠೋಡ ಮಾತನಾಡಿ, ಗಜೇಂದ್ರಗಡ ಪಟ್ಟಣದ ಜೋಡು ರಸ್ತೆಯಲ್ಲಿರುವ ಪ್ರವರ್ತಕ ಸಮಾಜ ಸುಧಾರಕ, ನ್ಯಾಯ ಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಲೇಖಕ, ಬಹುಭಾಷಾ ವಾಗ್ಮಿ, ತೌಲನಿಕ ಧರ್ಮಗಳ ವಿದ್ವಾಂಸ ಮತ್ತು ಚಿಂತಕ ಡಾ, ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರ ಹೆಸರಿನ ಮೇಲೆ ಹಲವು ದಶಕಗಳಿಂದ ವೃತ್ತ ನಿರ್ಮಿಸಲಾಗಿದ್ದು, ಆದರೆ, ” ಭಾರತೀಯ ಸಂವಿಧಾನದ ಪ್ರಧಾನ ವಾಸ್ತು ಶಿಲ್ಪಿ ಮತ್ತು ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ, ಗಡಿಗಳನ್ನು ಮರು ರೂಪಿಸಿದ ಬಹುಮುಖ ವ್ಯಕ್ತಿ ಡಾ, ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಯನ್ನು ವೃತ್ತದಲ್ಲಿ ಇನ್ನೂ ನಿರ್ಮಿಸಿಲ್ಲ. ಕೂಡಲೇ ಪುರಸಭೆ ವತಿಯಿಂದ “ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕಲ್ಯಾಣ ಯೋಜನೆ ಹಾಗೂ ಪ್ರಸ್ತುತ ಸಾಲಿನ ಎಸ್‌ಎಫ್‌ಸಿ ಹಾಗೂ ಪುರಸಭಾ ನಿಧಿ ಬಳಸಿ ಕೊಂಡು ಸಂವಿಧಾನ ಶಿಲ್ಪಿ, ಕ್ರಾಂತಿ ಸೂರ್ಯ ಡಾ, ಬಿ.ಆರ್. ಅಂಬೇಡ್ಕರ್ ಅವರ ವೃತ್ತದಲ್ಲಿ ಮಹಾ ನಾಯಕ ಅಂಬೇಡ್ಕರ್ ಅವರ “ಮೂರ್ತಿ” ನಿರ್ಮಾಣದ ಕುರಿತು ಪುರಸಭೆ ಸಾಮಾನ್ಯ ವಿಷಯ ಪ್ರಸ್ತಾಪಿಸಿ, ಕೂಡಲೇ ಅನುಮೊದನೆಗೆ ಮುಂದಾಗಬೇಕು. ಇಲ್ಲವಾದಲ್ಲಿ ಸಂಘಟನೆ ಯಿಂದ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಕನಕಪ್ಪ ಕಲ್ಲೋಡ್ಡರ, ರವಿ ನಿಡಗುಂದಿ, ಅಮಿತ ಭಜೇಂತ್ರಿ, ರಮೇಶ ತಳವಾರ, ದುರಗಪ್ಪ ಪೂಜಾರ, ಮಾರುತಿ ಬಂಕದ, ಶುಭಂ ಮಾರನಾಳ, ಕಿರಣ ವಡ್ಡರ, ಮಾರುತಿ ವಡ್ಡರ ಸೇರಿದಂತೆ ಇತರರು ಇದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ. ಎಫ್.ಗೋಗೇರಿ.ತೋಟಗುಂಟಿ.ಗದಗ