ಬೇಡಿಕೆ ಈಡೇರಿಕೆಗೆ ಸಿ.ಇ.ಓ ಗೆ ಒಂದು ವಾರ ಗಡುವು – ಬೇಡಿಕೆ ಈಡೇರದಿದ್ದರೆ – ಉಗ್ರ ಹೋರಾಟ.
ಹುನಗುಂದ ಸ.27

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಗ್ರಾಮೀಣ ಕೂಲಿ ಕಾರ್ಮಿಕರ (ಗ್ರಾಕೂಸ್) ವಿವಿಧ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಪ್ರತಿಭಟನಾ ನಿರತ ಕಾರ್ಮಿಕರಿಗೆ ಭರವಸೆಯನ್ನು ನೀಡಿದರು. ನಾಲ್ಕು ತಿಂಗಳಿಂದ ಕೂಲಿ ನೀಡಿಲ್ಲ, ಎನ್.ಎಂ.ಆರ್ ಜೀರೋ ಮಾಡುವುದು, ಎರಡು ವರ್ಷಗಳಿಂದ ವೈದ್ಯಕೀಯ ವೆಚ್ಚ ನೀಡದೇ ಇರುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದು ಪಟ್ಟಣದ ತಾಲೂಕ ಪಂಚಾಯತಿಯ ಮುಂಭಾಗದಲ್ಲಿ ನಡೆಸುತ್ತಿರುವ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆರ ಎರಡನೇ ದಿನದ ಪ್ರತಿಭಟನೆಗೆ ಆಗಮಿಸಿ ಕಾರ್ಮಿಕರೊಟ್ಟಿಗೆ ಕುಳಿತು ಕೊಂಡು ಅವರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಅವರು, ನರೇಗಾ ಯೋಜನೆ ಅಡಿಯಲ್ಲಿ ಸಾವಿರಾರು ಕೋಟಿ ಕೆಲಸ ನೀಡಿದರೂ ಸುಮಾರು ತಾಲೂಕಿನ ಕೆಲಸದ ಸ್ಥಳಕ್ಕೆ ಹೋಗಿ ನಾನು ನೋಡಲಾಗಿಯೂ ಎಲ್ಲೂ ಕೂಡ ಕೆಲಸದ ಬಗ್ಗೆ ತೃಪ್ತಿಯಾಗಿಲ್ಲ. ಎಲ್ಲೋ ಒಂದು ಕಡೆ ಸಮಸ್ಯೆ ಇರುತ್ತೆ ಆದರೆ ನೀವು ಮಾಡುವ ಕೆಲಸ ಶೇ ೬೦% ರಿಂದ ಶೇ ೮೦% ರಷ್ಟು ಆದರೂ ಸರಿಯಾಗಿ ಕೆಲಸವಾಗಬೇಕು. ನೀವು ಮಾಡುವ ಕೆಲಸ ಜನರಿಗೆ ಅನುಕೂಲ ಕಾರಿಯಾಗಿರಬೇಕು ಎಂದರು. ಗ್ರಾಕೂಸ್ ಮುಖಂಡ ಮಹಾಂತೇಶ ಹೊಸಮನಿ ಮಾತನಾಡಿ ಪಂಚಾಯತ ಅಧಿಕಾರಿಗಳು ಗ್ರಾಕೂಸ್ ಗೆ ಒಂದು ನ್ಯಾಯ ಮತ್ತು ನಾನ್ ಗ್ರಾಕೂಸ್ಗೆ ಇನ್ನೊಂದು ನ್ಯಾಯ ಎನ್ನುವಂತೆ ವರ್ತಿಸುತ್ತಿದ್ದಾರೆ. ಗ್ರಾಕೂಸ್ಗಳಿಗೆ ೫೦ ಜನರಿದ್ದರೇ ಮಾತ್ರ ಕೆಲಸ ಕೊಡುತ್ತಾರೆ ನಾನ್ ಗ್ರಾಕೂಸ್ ಗಳಿಗೆ ೧೦ ಜನರಿದ್ದರೂ ಅವರಿಗೆ ಕೆಲಸ ನೀಡುತ್ತಾರೆ.

ಈ ತಾರತಮ್ಯ ಯಾಕೆ ಸರ್ ಎಂದು ಸಿಇಓ ಮುಂದೆ ಆರೋಪವನ್ನು ಮಾಡಿದಾಗ ಅದಕ್ಕೆ ಉತ್ತರಿಸಿ ನಮಗೆ ಗ್ರಾಕೂಸ್ ಮತ್ತು ನಾನ್ ಗ್ರಾಕೂಸ್ ಮುಖ್ಯವಲ್ಲ ನಮಗೆ ನರೇಗಾ ಯೋಜನೆ ಮುಖ್ಯ. ಪ್ರತಿ ವರ್ಷ ನರೇಗಾ ಯೋಜನೆಯ ಸುಧಾರಣೆ ಗೋಸ್ಕರ ನಾವೆಲ್ಲಾ ಶ್ರಮಿಸ ಬೇಕಾಗಿದೆ. ನಮ್ಮಲ್ಲಾಗಿರುವಂತ ಕೆಲವೊಂದು ಲೋಪ ದೋಷಗಳನ್ನು ನಮ್ಮ ಅಧಿಕಾರಿಗಳ ಮೂಲಕ ಸರಿ ಪಡಿಸುವ ಕೆಲಸವನ್ನು ಮಾಡಲಾಗುವುದು. ನೀವು ತೆಗೆದು ಕೊಂಡಂತ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು ಎಂದು ಸಲಹೆ ನೀಡಿದರು. ಗ್ರಾಕೂಸ್ ಕೆಲಸ ಮಾಡಿರುವುದನ್ನು ಪದೇ ಪದೇ ಜೀರೋ ಮಾಡುತ್ತಿದ್ದು ಅಂತ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದು ಕೊಳ್ಳಬೇಕೆಂದು ಕಾರ್ಮಿಕರು ಪಟ್ಟು ಹಿಡಿದಾಗ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಮುಲಾಜಿಲ್ಲದೇ ಕ್ರಮ ತೆಗೆದು ಕೊಳ್ಳುವುದಾಗಿ ತಿಳಿಸಿದರು. ಕಳೆದ ಎರಡು ವರ್ಷಗಳಿಂದ ವೈದ್ಯಕೀಯ ವೆಚ್ಚವನ್ನು ಪ್ರತಿಯೊಂದು ಗ್ರಾಮ ಪಂಚಾಯಿತಿ ನೀಡುತ್ತಿಲ್ಲ ಎನ್ನುವಂತಹ ಆರೋಪವನ್ನು ಕೂಡ ಕಾರ್ಮಿಕರು ಮಾಡಿದರು. ಆಗ ಕೆಲಸದ ಮೇಲೆ ಕಾರ್ಮಿಕರಿಗೆ ಏನಾದರೂ ಆರೋಗ್ಯ ಸಮಸ್ಯೆಗಳು ಉಂಟಾದಾಗ ಅವರು ಚಿಕಿತ್ಸೆ ಪಡೆದಿರುವಂತ ದಾಖಲಾತಿ ಆಧಾರದ ಮೇಲೆ ವೈದ್ಯಕೀಯ ವೆಚ್ಚವನ್ನು ನೀಡಲಾಗುವುದು ಸಿಇಓ ತಿಳಿಸಿದರು. ನಮ್ಮ ಬೇಡಿಕೆಗಳನ್ನು ಒಂದು ವಾರದಲ್ಲೇ ಈಡೇರಿಸುವಂತೆ ಗ್ರಾಮೀಣ ಕೂಲಿ ಕಾರ್ಮಿಕರು ಸಿಇಓ ಅವರಿಗೆ ಗಡುವು ನೀಡಿದಾಗ ಇದಕ್ಕೆ ಸಿಇಓ ನರೇಗಾ ಯೋಜನೆಯಲ್ಲಿ ಅನೇಕ ತಾಂತ್ರಿಕ ವ್ಯವಸ್ಥೆ ಇರುವುದರಿಂದ ನಿಮ್ಮೆಲ್ಲಾ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಸಮಾಧಾನದ ಭರವಸೆಯನ್ನು ನೀಡಿದ ಮೇಲೆ ಗ್ರಾಮೀಣ ಕೂಲಿ ಕಾರ್ಮಿಕರು ತಮ್ಮ ಪ್ರತಿಭಟನೆಯನ್ನು ಹಿಂಪಡೆದು ನಂತರ ತಮ್ಮ ಬೇಡಿಕೆಗಳ ಮನವಿಯನ್ನು ಸಿಇಓ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾ.ಪಂ ಇಓ ಮುರಳಿಧರ ದೇಶಪಾಂಡೆ, ನರೇಗಾ ಯೋಜನೆ ಎಡಿಗಳಾದ ಮಹಾಂತೇಶ ಕೋಟಿ, ಶಿರಗುಪ್ಪಿ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಮುಖಂಡರಾದ ಶಾರದಾ ಪಲನಗೌಡ್ರು, ಸೌಮ್ಯ ವಟವಟಿ, ದೀಪಾ ತೋಟದ, ರೇಣುಕಾ ತುಪ್ಪದ, ಪರಶು ಮಾದರ, ಯಮನೂರು ಹೊಸಮನಿ, ಸುವರ್ಣ ತೊಗರಿ, ಅಮರೇಶ ನಂದವಾಡಗಿ ಸೇರಿದಂತೆ ಅನೇಕ ಕಾರ್ಮಿಕರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ..ಹುನಗುಂದ